ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ರವಿವಾರ 11 ಪುರುಷರಿಗೆ ಹಾಗೂ 3 ಮಹಿಳೆ ಸೇರಿದಂತೆ ಒಟ್ಟೂ 14 ಕೊವಿಡ್19 ಪ್ರಕರಣಗಳು ದಾಖಲಾಗಿದೆ.
ಶಿರಸಿಯಲ್ಲಿ ಬೈಕ್ ಕಳ್ಳತನದ ಆರೋಪಿಯಿಂದಾಗಿ ನಗರ ಪೊಲೀಸ್ ಠಾಣೆ ಸಂಪೂರ್ಣವಾಗಿ ಸೀಲ್ ಡೌನ್ ಆಗಿದೆ.
ಧಾರವಾಡದಲ್ಲಿ ಸಿಕ್ಕಿಬಿದ್ದಿರುವ ಬೈಕ್ ಕಳ್ಳನನ್ನು ವಿಚಾರಣೆಗಾಗಿ ಶಿರಸಿಗೆ ಕರೆತರಲಾಗಿತ್ತು. ಕೊವಿಡ್ ಲಕ್ಷಣ ಕಂಡುಬಂದ ಕಾರಣ ಅವನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು ಕೊವಿಡ್ ಇರುವುದು ದೃಢಪಟ್ಟಿದೆ.
ಇದರಿಂದಾಗಿ ನಗರ ಪೊಲೀಸ್ ಠಾಣೆ,ಆರೋಪಿ ಇದ್ದ ಜೈಲ್ ನ ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ.ಸಾರ್ವಜನಿಕರ ದೂರು ಸ್ವೀಕಾರವನ್ನು ಹೊಸ ಮಾರುಕಟ್ಟೆ ಠಾಣೆಗೆವಹಿಸಲಾಗಿದೆ
ಪಿ.ಎಸ್.ಐ. ಸೇರಿದಂತೆ 6 ಪೊಲೀಸ್ ರನ್ನು ಹೊಂ ಕ್ವಾರೆಂಟೆನ್ ಮಾಡಲಾಗಿದೆ. ಆರೋಪಿಯನ್ನು ದಾರವಾಡದಿಂದ ಕರೆತಂದ ಇಬ್ಬರು ಪೊಲೀಸ್ ರನ್ನು ಐಸೋಲೇಶನ್ ಮಾಡಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.
😑😶