ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಜಾರಿ ಬಗ್ಗೆ ವಿಮರ್ಶೆ ಮಾಡಲು ಸ್ವರ್ಣವಲ್ಲಿ ಶ್ರೀಗಳ ಒತ್ತಾಯ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರು ಶರಾವತಿ ಭೂಗತ ಜಲವಿದ್ಯುತ್ ಯೋಜನೆಯನ್ನು ಜಾರಿಗೆ ತರುವುದನ್ನು ಪುನಃ ವಿಮರ್ಶೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸ್ವರ್ಣವಲ್ಲಿ ಶ್ರೀ ಗಳು, ಪಶ್ಚಿಮಘಟ್ಟದ ನದಿ,ಕಣಿವೆಗಳ ಸಂರಕ್ಷಣೆಗೆ ಹಾಗೂ ಅಭಿವೃದ್ಧಿಯ ಬಗ್ಗೆ ಕಳೆದ 29ವರ್ಷದಿಂದ ಕಾಳಜಿವಹಿಸುತ್ತಾ ಬಂದಿದ್ದೇವೆ.
ಪ್ರಸ್ತುತ ಪಶ್ಚಿಮಘಟ್ಟದ ಹೃದಯಭಾಗವಾದ ಶರಾವತಿ ಕಣಿವೆಯಲ್ಲಿ ಭೂಗತ ಜಲವಿದ್ಯುತ್ ಯೋಜನೆ ಜಾರಿ ಮಾಡಲು ಸರಕಾರ ಮುಂದಾಗಿರುವ ಸಂಗತಿ ಗಮನಕ್ಕೆ ಬಂದಿದೆ.
ಈಗಾಗಲೆ ಶರಾವತಿ ಕಣಿವೆಯಲ್ಲಿ ಹಲವು ಯೋಜನೆಗಳು,ಅರಣ್ಯ ಒತ್ತುವರಿ,ಗಣಿಗಾರಿಕೆ,ಆಣೆಕಟ್ಟು ಯೋಜನೆಗಳು ಜಾರಿಯಾಗಿವೆ.ಇದರಿಂದ ಅರಣ್ಯ ನಾಶವಾಗಿದೆ,ಭೂಕುಸಿತವಾಗಿದೆ.”ಇಲ್ಲಿಯ ಪರಿಸರದ ಭೂಧಾರಣ ಸಾಮರ್ಥ ಮುಗಿದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವಿಜ್ಞಾನಿಗಳು,ಪರಿಸರ ಸಂಘ-ಸಂಸ್ಥೆಗಳು ಸರಕಾರದ ಗಮನ ಸೆಳೆದಿವೆ.ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕೈಬಿಡಬೇಕು ಎಂದು ಒತ್ತಾಯ ಮಾಡಿವೆ
ಸರಕಾರ ಕೂಡಲೆ ಪರಿಸರ,ಜೀವವೈವಿದ್ಯ,ಅರಣ್ಯ,ವನ್ಯಜೀವಿ ಕ್ಷೇತ್ರದ ತಜ್ಞರು,ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಸಮಾಲೋಚನಾ ಸಭೆ ನಡೆಸಬೇಕು.ಶರಾವತಿ ಭೂಗತ ಜಲವಿಧ್ಯುತ್ ಯೋಜನೆ ಜಾರಿ ಬಗ್ಗೆ ಪುನಃ ವಿಮರ್ಶೆ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

ಪತ್ರವನ್ನು ಮುಖ್ಯಮಂತ್ರಿಗಳಿಗಲ್ಲದೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಅರಣ್ಯಸಚೀವ ಆನಂದ ಸಿಂಗ್,ಗ್ರಾಮೀಣಾಭಿವೃದ್ಧಿ ಸಚೀವ ಈಶ್ವರಪ್ಪ,ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ,ವನ್ಯಜೀವಿ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಇವರುಗಳಿಗೆ ಕಳುಹಿಸಲಾಗಿದೆ.

About the author

Adyot

Leave a Comment