ಸೌಥ್ ಆಫ್ರಿಕಾ : ಸೌಥ್ ಆಫ್ರಿಕಾದ ಓವಲ್ ನಲ್ಲಿ ನಡೆಯುತ್ತಿರೋ 19 ವರ್ಷ ಒಳಗಿನ ವಯೋಮಿತಿಯ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 74 ರನ್ ಗಳ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು. ಭಾರತದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ 62 ಹಾಗೂ ಅಥರ್ವ ಅಂಕೋಲೆಕರ್ ಔಟಾಗದೆ 55 ರನ್ ಕಾಣಿಕೆ ನೀಡಿದರು. 234 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಫ್ಯಾನಿಂಗ್ ಅವರ 75 ರನ್ ಗಳ ಅದ್ಭುತ ಪ್ರದರ್ಶನದ ನಡುವೆಯೂ ಭಾರತದ ಕರಾರುವಕ್ ದಾಳಿಗೆ ತತ್ತರಿಸಿತು. ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಕಾರ್ತಿಕ್ ತ್ಯಾಗಿ 4 ಹಾಗೂ ಆಕಾಶ್ ಸಿಂಗ್ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡ 43.3 ಓವರ್ ಗಳಲ್ಲಿ159 ರನ್ ಗಳಿಗೆ ಸರ್ವಪತನವಾಗುವುದರೊಂದಿಗೆ ಟೂರ್ನಿಯಿಂದ ಹೊರಬಿದ್ದಿತು. ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡ ಸೆಮಿಫೈನಲ್ ತಲುಪಿತು.