ಜೀವನಕ್ರಮದಲ್ಲಿ ದೈಹಿಕ ಶಿಸ್ತು ಮತ್ತು ವಾರ ಭವಿಷ್ಯ

ಅತಿ ದುಬಾರಿಯ ವಸ್ತ್ರ ಧರಿಸುವುದು, ಹತ್ತೂ ಬೆರಳಿಗೆ ಉಂಗುರ ಹಾಕುವುದು ಕೊರಳಿಗೆ ಹಾವಿನ ಗಾತ್ರದ ಚೈನ ಹಾಕಿಕೊಳ್ಳುವುದು ಇವೆಲ್ಲ ಶಿಸ್ತುಗಳಲ್ಲ. ನಾವು ಧರಿಸುವ ಬಟ್ಟೆ ಎಷ್ಟು ಮೌಲ್ಯದ್ದು ಎನ್ನುವುದು ಅನವಶ್ಯಕ. ಅದು ಎಷ್ಟು ಸರಿಯಾಗಿದೆ, ಎಷ್ಟು ಗೌರವಯುತವಾಗಿದೆ ಎನ್ನುವುದು ಅವಶ್ಯಕ.

ಬಂಗಾರ ಎನ್ನುವುದು ನಮ್ಮ ಅವಶ್ಯಕತೆಗೆ ಒದಗಿ ಬರುವಂತಹದ್ದು. ಆಪತ್ಕಾಲದಲ್ಲಿ ನಮ್ಮ ಕೈಹಿಡಿಯುವಂತಹದ್ದು ಅದರ ಪ್ರದರ್ಶನಕ್ಕೆ ಹೊರಟರೆ ಅದು ಅಸಹ್ಯವಾಗಿರುತ್ತದೆ. ಉಂಗುರ ಧರಿಸುವುದು ಒಳ್ಳೆಯದು ಆದರೆ ಹತ್ತು ಬೆರಳಿಗೆ ಉಂಗುರ ಹಾಕಿಕೊಳ್ಳುವುದು ಸರಿಯಲ್ಲ. ಒಂದು ಮಿತಿಯಲ್ಲಿ ಬಂಗಾರ ಧರಿಸುವುದು ಅನುಕೂಲವೂ ಹೌದು. ಶಿಸ್ತು ಹೌದು.
ನಮ್ಮ ಆಂಗಿಕ ಪ್ರದರ್ಶನಗಳು ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಈ ಶಿಸ್ತನ್ನು ನಾವು ಕಾಪಾಡಿಕೊಳ್ಳಲೇ ಬೇಕು. ಎಲ್ಲಿ, ಹೇಗೆ, ಯಾವ ರೀತಿ ನಮ್ಮ ವರ್ತನೆಗಳು ಇರಬೇಕು ಎಂಬುದು ನಮಗೆ ತಿಳಿದಿರಬೇಕು. ಕೆಲವು ಕಡೆಯಲ್ಲಿ ನಾವು ಅನವಶ್ಯಕ, ಅಸಂಬಧ್ಧ ಮಾತುಗಳನ್ನಾಡುತ್ತೇವೆ. ನಮ್ಮ ಮಾತು ನಮ್ಮ ದೈಹಿಕ ಶಿಸ್ತಿನ ಒಂದು ಭಾಗವಾಗಿರುತ್ತದೆ.

ಕಚೇರಿಯಲ್ಲಿ ಹೇಗೆ ಮಾತನಾಡಬೇಕು, ಸಭೆ ಸಮಾರಂಭದಲ್ಲಿ ಹೇಗೆ ಮಾತನಾಡಬೇಕು, ಸ್ನೇಹಿತರ ಜೊತೆಗಿರುವಾಗ, ಮನೆಯಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವು ನಮಗಿರಬೇಕು. ಮಾತನಾಡುವಾಗ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿರುವಾಗ ನಮ್ಮ ಮಾತಿನ ಜೊತೆಗೆ ನಮ್ಮ ದೈಹಿಕ ವರ್ತನೆಗಳು ಶಿಸ್ತಾಗಿರಬೇಕು. ಹಲವು ಬಾರಿ ಅನೇಕ ಗಣ್ಯರು ಅಸಂಬದ್ಧ ಮಾತನಾಡಿ, ವಿಕಾರವಾಗಿ ದೈಹಿಕ ಚಲನೆಯಿಂದಾಗಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಹೀಗಾಗಿ ನಮ್ಮ ಜೀವನಕ್ರಮದಲ್ಲಿ ದೈಹಿಕ ಶಿಸ್ತು ಮುಖ್ಯವಾಗಿರುತ್ತದೆ‌.
************* ************ *************


ಯಾವ ವಸ್ತುವು ಹುಟ್ಟು ಸಾವು ಉಳ್ಳದ್ದೋ ಅವುಗಳಲ್ಲಿ ಕಾರಣವು ಸ್ವತಃ ಸಿದ್ದವಾಗಲಾರದು. ಯಾವುದು ಸ್ವತಃ ಸಿದ್ದವೋ ಅದರಲ್ಲಿ ಹುಟ್ಟು ಸಾವುಗಳ ಕಾರ್ಯವು ನಡೆಯುವುದಿಲ್ಲ. ಆ ಕಾರ್ಯವು ಕಲ್ಪಿತವಾದುದು – ಶ್ರೀ ಶ್ರೀಧರಸ್ವಾಮಿ ಮಹಾರಾಜ್
****** ***** ***** ***** ***** ***** ***

ವಾರ ಭವಿಷ್ಯ – 23-02-2020 ರಿಂದ 29-02-2020ರವರೆಗೆ

ಮೇಷ: ನಿಮ್ಮ ಜೀವನದ ಅತಿ ಮುಖ್ಯ ವಸ್ತು ಈ ವಾರ ದೊರೆಯಲಿದೆ. ಪ್ರಾರಂಭಿಸುವ ಕೆಲಸಗಳು ನೆರವೇರುತ್ತದೆ. ಬಂಧು ಬಾಂಧವರ ಭೇಟಿಯಿಂದ ಖರ್ಚು ಹೆಚ್ಚಾದರೂ ಮುಂದೆ ಇದರಿಂದ ಲಾಭವಾಗಲಿದೆ. ಹೊಸ ವಸ್ತು ಖರೀದಿಸುವವರಿಗೆ, ಹೊಸ ಕೆಲಸ ಪ್ರಾರಂಭಿಸುವವರಿಗೆ ಸಕಾಲ.

ವೃಷಭ: ವಾಹನದ ಓಡಾಟದಲ್ಲಿ ಎಚ್ಚರಿಕೆ ಅಗತ್ಯ. ನೀರಿನಲ್ಲಿ ಈಜುವ ಪ್ರಯಾಸ ಬೇಡ. ಹಣಕಾಸಿನ ಮುಗ್ಗಟ್ಟಿನಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ. ಹೊಸ ವ್ಯವಹಾರಕ್ಕೆ ಇದು ಸಕಾಲವಲ್ಲ ಇಲೆಕ್ಟ್ರಾನಿಕ್ ವಸ್ತುಗಳು ಹಾಳಾಗಲಿದೆ. ಇದನ್ನು ಉಪಯೋಗಿಸುವಾಗ ಎಚ್ಚರವಿರಲಿ. ಶಿವ ಸಹಸ್ರನಾಮ ಪಠನೆ ಒಳ್ಳೆಯದು.

ಮಿಥುನ: ಮನಸ್ಸಿನ ಚಂಚಲತೆಯಿಂದ ಅಪಾಯ ಎಳೆದುಕೊಳ್ಳುವಿರಿ. ಕೆಟ್ಟ ಯೋಚನೆಗಳಿಗೆ ಕಡಿವಾಣ ಹಾಕಿರಿ ಹಣಕಾಸಿನ ವ್ಯವಹಾರ ಉತ್ತಮವಾಗಿರುತ್ತದೆ. ಹೊಸ ವಸ್ತುಗಳನ್ನು ಖರೀದಿಸಲಿರುವಿರಿ.
ಶುಭಸಮಾರಂಭಗಳಿಗೆ ಭೇಟಿ ನೀಡಲಿದ್ದಿರಿ.

ಕರ್ಕಾಟಕ: ಈ ವಾರ ಹೊಟ್ಟೆ ನೋವಿನಿಂದ ಬಳಲಲಿದ್ದೀರಿ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಶಸ್ತ್ರಚಿಕಿತ್ಸೆ ಮಟ್ಟಕ್ಕೆ ಹೋಗಲಿದೆ. ಅನಿರೀಕ್ಷಿತ ಧನಾಗಮನವಾಗಲಿದೆ. ಹಣಹೂಡಿಕೆ ಮಾಡುವುದು ಒಳ್ಳೆಯದು. ಅಗ್ನಿಗೆ ಸಂಭಂಧಿಸಿದ ವಸ್ತುಗಳನ್ನು ಈ ವಾರ ಖರೀದಿಸುವುದು ಉತ್ತಮ.

ಸಿಂಹ: ಮಾನಸಿಕ ಖಿನ್ನತೆ ನಿಮ್ಮನ್ನು ಕಾಡಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಯ ದೊರೆಯಲಿದೆ. ಹೊಸ ಕೆಲಸ ಪ್ರಾರಂಭಿಸಲು ಸಕಾಲ. ಬಹುಕಾಲದಿಂದ ನಿಂತಿರುವ ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ.
ಸುಬ್ರಹ್ಮಣ್ಯ ಪೂಜೆ ಮಾಡಿಸುವುದು ಉತ್ತಮ.

ಕನ್ಯಾ: ಹಣಕಾಸಿನ ತೊಂದರೆಯಿಂದ ಕೆಲಸ ಕಾರ್ಯಗಳು ನಿಲ್ಲಲಿವೆ. ಮಾನಸಿಕ ಕಿರಿಕಿರಿಯಿಂದ ಕಂಗಾಲಾಗುವಿರಿ. ಪತಿ-ಪತ್ನಿಯರ ಮಧ್ಯೆ ಅನವಶ್ಯಕ ಜಗಳಗಳು ನಡೆಯಲಿದೆ. ಯಾವುದೇ ಹೊಸ ವಸ್ತು ಖರೀದಿಗೆ, ಹೊಸ ಕೆಲಸ ಪ್ರಾರಂಭಿಸುವುದಕ್ಕೆ ಮುಂದಾಗಬೇಡಿ.

ತುಲಾ: ಈ ವಾರ ಆರೋಗ್ಯದ ಸಮಸ್ಯೆಯಿಂದ ಬಳಲಲಿದ್ದೀರಿ. ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ. ಆ್ಯಸಿಡಿಟಿ ಸಮಸ್ಯೆ ಉಲ್ಬಣಗೊಳ್ಳಲಿದೆ. ಮಹಿಳೆಯರಿಗೆ ಋತುಸ್ರಾವದ ಸಮಸ್ಯೆಯಾಗಲಿದೆ. ಕಪ್ಪು ಬಟ್ಟೆ ಧರಿಸಬೇಡಿ. ಹಣಕಾಸು ವ್ಯವಹಾರದಲ್ಲಿ ಹಿಡಿತವಿರಲಿ.

ವೃಶ್ಚಿಕ: ವಾಹನ ಓಡಾಟದಲ್ಲಿ ಎಚ್ಚರಿಕೆ ಅವಶ್ಯಕ. ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿರುವುದರಿಂದ ಹೊಸ ವ್ಯವಹಾರ ಪ್ರಾರಂಭಿಸಬಹುದು. ಚಿನ್ನಾಭರಣ ಖರೀದಿಗೆ ಉತ್ತಮ ವಾರವಾಗಿರುತ್ತದೆ.

ಧನಸ್ಸು: ವಾಹನ, ಬೆಂಕಿ ಇವುಗಳಿಂದ ಅಪಾಯದ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಹಣಕಾಸಿನ ತೊಂದರೆಯಿಂದ ನಿರೀಕ್ಷಿತ ಕೆಲಸವಾಗುವುದಿಲ್ಲ. ಸತತ ಪರಿಶ್ರಮವೊಂದೇ ಕಾರ್ಯಸಾಧನೆಗೆ ಕಾರಣ ಎನ್ನುವು ಮನಗಂಡು ಕೆಲಸಕ್ಕೆ ಮುಂದಾಗಿ. ಗುರು ಸೇವೆ ಮಾಡುವುದರಿಂದ ಪರಿಹಾರ ಸಾಧ್ಯ.

ಮಕರ: ಮುಟ್ಟಿದ್ದೆಲ್ಲ ಮಣ್ಣಾಗಲಿದೆ. ಹೊಸ ಕೆಲಸಕ್ಕೆ ಮುಂದಾಗಬೇಡಿ. ವೃಥಾ ಅಪವಾದಕ್ಕೆ ಗುರಿಯಾಗಲಿದ್ದೀರಿ. ಎದೆ, ಹೊಟ್ಟೆ ನೋವಿನಿಂದ ಬಳಲಲಿದ್ದೀರಿ. ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ. ದಶರಥ ಕೃತ ಶನೇಶ್ಚರ ಸ್ತೋತ್ರ ಪಠಿಸಿ. ಕಪ್ಪು ಎಳ್ಳನ್ನು ದಾನ ಮಾಡಿ.

ಕುಂಭ: ಮಾನಸಿಕ ಕಿರಿ ಕಿರಿ ಎದುರಾಗಲಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿರುವುದರಿಂದ ಹೊಸವಸ್ತು ಖರೀದಿಸಲಿದ್ದೀರಿ.
ಉದ್ಯೋಗದಲ್ಲಿ ಸಮಸ್ಯೆ ಎದುರಾದರೂ ಪದೋನ್ನತಿ ಹೊಂದಲಿದ್ದೀರಿ. ವಾರಾಂತ್ಯದಲ್ಲಿ ಆರೋಗ್ಯ ಸಮಸ್ಯೆಯಿಂದ ವೈದ್ಯರ ಭೇಟಿ ಅವಶ್ಯಕವಾಗಿರುತ್ತದೆ.

ಮೀನ: ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯಲಿದೆ. ಹೊಸ ಮನೆ ಕಟ್ಟುವ ಕಾರ್ಯ ಪ್ರಾರಂಭವಾಗಲಿದೆ. ಹೊಸ ವಸ್ತುಗಳ ಖರೀದಿಗೆ ಸಕಾಲ ಹಣಕಾಸಿನ ವ್ಯವಹಾರ ಅತ್ಯುತ್ತಮವಾಗಿ ನಡೆಯಲಿದೆ ಮಿತ್ತರಿಂದ ಮೋಸವಾಗುವ ಸಾಧ್ಯತೆ ಇದೆ ಪಾಲುದಾರಿಕೆ ವ್ಯವಹಾರ ಬೇಡ.
***** ***** ***** ಶುಭಂ***** ***** *****
ಸಂಪರ್ಕ ಸಂಖ್ಯೆ : 9449454044

About the author

Adyot

Leave a Comment