ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ‘ಶಿವಾಲಯಗಳಲ್ಲಿ ವಿಶೇಷ ಪೂಜೆ’

ಉತ್ತರ ಕನ್ನಡ : ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಶಿವ ದೇವಾಲಯಗಳಲ್ಲಿ ಭಕ್ತರ ದಂಡು ಹರಿದು ಬಂದಿದ್ದು ಜಿಲ್ಲೆಯ ಎಲ್ಲಾ ಶಿವ ದೇಗುಲಗಳು ಭಕ್ತರಿಂದ ತುಂಬಿ ಹೋಗಿವೆ.

ಗೋಕರ್ಣ – ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಯಾಗಿರುವ ಗೋಕರ್ಣದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಗೋಕರ್ಣದಲ್ಲಿ ಶ್ರೀ ಮಹಾಬಲೇಶ್ವರ ದೇವರ ರಥೋತ್ಸವ ಕೂಡ ನಡೆದಿದ್ದು, ಭಕ್ತರು ಬೆಳಿಗ್ಗೆ ಯಿಂದಲೇ ಸರತಿ ಸಾಲಿನಲ್ಲಿ ನಿಂತು ಆತ್ಮಲಿಂಗ ದರ್ಶನ ಪಡೆಯುತ್ತಿದ್ದಾರೆ. ಎಲ್ಲಾ ಭಕ್ತರಿಗೂ ಆತ್ಮಲಿಂಗವನ್ನು ಮುಟ್ಟಿ ಪೂಜಿಸುವ ಅವಕಾಶ ದೊರೆತಿದ್ದು, ಭಕ್ತಾದಿಗಳು ಜಾಗರಣೆಯಲ್ಲಿ ತೊಡಗಿದ್ದಾರೆ.

ಇಟಗಿ – ಇನ್ನು ಸಿದ್ದಾಪುರದ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ಕೂಡ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲಾಗುತ್ತಿದೆ. ದೇವಾಲಯದಲ್ಲಿ ಸಾಮೂಹಿಕ ಶತರುದ್ರ ಪಾರಾಯಣ ಸಹಿತ ಅಭಿಷೇಕ ನಡೆದಿದ್ದು, ಪಲ್ಲಕ್ಕಿ ಉತ್ಸವ ಕೂಡ ಜರುಗಲಿದೆ. ಬೆಳಿಗ್ಗೆಯಿಂದಲೇ ಭಕ್ತಾದಿಗಳು ದೇಗುಲ ದರ್ಶನ ಮಾಡುತ್ತಿದ್ದು, ಶಿವಲಿಂಗಕ್ಕೆ ಮಹಾಭಿಷೇಕ ಮಾಡುತ್ತಿದ್ದಾರೆ.

ಕಾರವಾರ – ಕಾರವಾರದ ಶಿವ ದೇವಾಲಯಗಳಲ್ಲಿ ಭಕ್ತರ ವಿಶೇಷ ಪೂಜೆ ನಡೆಯುತ್ತಿದ್ದು, ವಿದೇಶಿಗರ ಭಜನೆ ಗಮನ ಸೆಳೆದಿದೆ. ಕಾರವಾರದ ಶೇಜವಾಡಾ ಶೇಜ್ಜೆಶ್ವರ ದೇವಾಲಯದಲ್ಲಿ ವಿದೇಶಿಗರು ಶಿವನ ಕುರಿತಾದ ಭಕ್ತಿಗೀತೆಗಳನ್ನು ಹಾಡಿ ಸ್ಥಳೀಯ ಭಕ್ತರ ಗಮನ ಸೆಳೆದಿದ್ದಾರೆ.

ತರಳಿಮಠ – ಸಿದ್ದಾಪುರದ ತರಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ತರಳಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ತರಳಿಯ ಶಿವ ದೇವಾಲಯದಲ್ಲಿ ವಿಶೇಷ ಪೂಜೆ, ಸಾಮೂಹಿಕ 1008 ಸತ್ಯನಾರಾಯಣ ಪೂಜೆ ಜರುಗಿದ್ದು, ಶನಿವಾರ ಸಂಜೆ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅವರಿಂದ ಆಶೀರ್ವಚನ ನಡೆಯಲಿದೆ.

About the author

Adyot

Leave a Comment