ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ವನಿತೆಯರ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ದೀಪ್ತಿ ಶರ್ಮಾ ಅವರ 49 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. 133 ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ತಂಡ ಪೂನಂ ಯಾದವ್ ಅವರ ದಾಳಿಗೆ ತತ್ತರಿಸಿತು. ಹೀಲಿ ಅವರ ಅರ್ಧಶತಕದ ಹೊರತಾಗಿಯೂ 19.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ 17 ರನ್ ಗಳ ಸೋಲನ್ನನುಭವಿಸಿತು. 19 ರನ್ ಗಳಿಗೆ 4 ವಿಕೆಟ್ ಕಬಳಿಸಿದ ಪೂನಂ ಯಾದವ್ ಪಂದ್ಯಶ್ರೇಷ್ಠ ಆಗಿ ಹೊರಹೊಮ್ಮಿದರು. ಇದರೊಂದಿಗೆ ಭಾರತ ವಿಶ್ವಕಪ್ ನಲ್ಲಿ ಜಯದೊಂದಿಗೆ ತನ್ನ ಪ್ರಯಾಣವನ್ನ ಆರಂಭಿಸಿತು.