ನಾಳೆ ಬೆಂಗಳೂರಿಗೆ ಡಿಕೆಎಸ್ ವಾಪಸ್, ಭರ್ಜರಿ ವೆಲ್​ಕಮ್​ ಮಾಡಲಿದೆ ಕಾಂಗ್ರೆಸ್..!

ಇಡಿ ವಿಚಾರಣೆ ಸಂಬಂಧ 48 ದಿನಗಳ ಕಾಲ ತಿಹಾರ್​ ಜೈಲಿನಲ್ಲಿದ್ದ ನಂತರ ಜಾಮೀನಿನಿಂದ ಹೊರಬಂದಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಾಳೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗ್ತಿದ್ದಾರೆ.

ಬಹುದಿನಗಳ ನಂತರ ಮತ್ತೆ ವಾಪಸ್ಸಾಗುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಭರ್ಜರಿ ಸ್ವಾಗತ ಕೋರಲು ಈಗಾಗಲೇ ಕರ್ನಾಟಕ ಕಾಂಗ್ರೆಸ್ ಅದ್ಧೂರಿ ತಯಾರಿಗಳನ್ನ ಮಾಡಿಕೊಳ್ಳುತ್ತಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಕೆಎಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ವಿಮಾನ ನಿಲ್ದಾಣಕ್ಕೆ ಡಿಕೆಎಸ್ ಬಂದಿಳಿದ ನಂತರ ಅವರನ್ನ ಕೆಪಿಸಿಸಿ ಕಚೇರಿವರೆಗೂ ರೋಡ್ ಶೋ ಮೂಲಕ ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸಿದೆ. ಇನ್ನು ಕೆಪಿಸಿಸಿ ಕಚೇರಿಯಲ್ಲಿ ಡಿಕೆಎಸ್ ಅವರನ್ನ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿಕೊಳ್ಳಲಿದ್ದಾರೆ. ನಂತರ ಕೆಪಿಸಿಸಿ ಕಚೇರಿಯಲ್ಲೇ ಡಿ.ಕೆ. ಶಿವಕುಮಾರ್ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

About the author

Adyot

Leave a Comment