ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ

ಆದ್ಯೋತ್ ಸುದ್ದಿ ನಿಧಿ : ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಮೀಸಲಾತಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.


ಕಳೆದ 2 ವರ್ಷಗಳಿಂದ ಮೀಸಲಾತಿ ನಿಗದಿಯಾಗದೆ ನಗರ ಸ್ಥಳೀಯ ಸಂಸ್ಥೆಗಳು ಅನಾಥವಾಗಿದ್ದವು. ಆಕ್ಟೊಬರ್ 8 ರಂದು ಸರ್ಕಾರ ಮೀಸಲಾತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಈ ಮೀಸಲಾತಿಗೆ ರಾಜ್ಯದ ಹಲವೆಡೆ ಅಪಸ್ವರಗಳು ಕೇಳಿ ಬಂದಿದ್ದವು. ಇದರ ವಿರುದ್ಧ ಹಲವಾರು ಮುಸುಕಿನ ಗುದ್ದಾಟಗಳು ಬೆಳಕಿಗೆ ಬಂದಿದ್ದವು. ಈ ಆದೇಶದ ವಿರುದ್ಧ ಹಾಸನ ನಗರಸಭೆಯ ಸದಸ್ಯ ಎಚ್.ವಿ ಚಂದ್ರೇಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರತಿವಾದಿಯ ವಾದಗಳನ್ನ ಆಲಿಸಿದ ಹೈಕೋರ್ಟ್ ತನ್ನ ಮುಂದಿನ ಅದೇಶದವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

About the author

Adyot

Leave a Comment