ಔಷಧ ಸಾಗಾಟದ ವಾಹನದಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ ಲಾರಿ ಚಾಲಕ ವಶಕ್ಕೆ

ಆದ್ಯೋತ್ ಸುದ್ದಿನಿಧಿ
ಗೋವಾದ ಪೊಂಡಾದಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ಔಷಧ ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಸ್ಪಿರಿಟ್ ನ್ನು ಕಾರವಾರದ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಔಷಧ ಸಾಗಾಟ ಲಾರಿಯಲ್ಲಿ 35 ಲೀಟರ್‌ನ 125 ಕ್ಯಾನ್‌ಗಳಲ್ಲಿ ತುಂಬಿಸಿದ್ದ 4,375 ಲೀಟರ್ ಸ್ಪಿರಿಟ್ ಇದ್ದು ಇದರ ಮೌಲ್ಯ
2,53,750 ರೂಪಾಯಿ ಎನ್ನಲಾಗಿದೆ.

ಲಾರಿ ಚಾಲಕ ಜಿಷ್ಣು ಕೆ ಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಲಾರಿಯಲ್ಲಿ 7.14 ಲಕ್ಷ ಮೌಲ್ಯದ 1 ಸಾವಿರ ಬಾಕ್ಸ್ ಔಷಧ
ಕೂಡಾ ಇದ್ದು 20.80 ಲಕ್ಷದ ಲಾರಿ ಸೇರಿ 30,47,750 ರೂಪಾಯಿ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ.

About the author

Adyot

Leave a Comment