ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಕಳೆದ ಸೋಮವಾರ ಭಟ್ಕಳ ಪುರಸಭೆಯ ಸದಸ್ಯರು ಪುರಸಭೆಯ ಕಟ್ಟಡಕ್ಕೆ ಕನ್ನಡ, ಇಂಗ್ಲಿಷ್, ಉರ್ದು ಭಾಷೆಯ ನಾಮ ಫಲಕ ಅಳವಡಿಸಲಾಗಿತ್ತು.
ಇದಕ್ಕೆ ಭಾರತೀಯ ಜನತಾ ಪಕ್ಷ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳು ಹಾಗೂ ಹಿಂದೂ ಪರ ಸಂಘಟನೆಗಳು ಉರ್ದು ಭಾಷೆಯ ನಾಮ ಫಲಕ ತೆಗೆಯುವಂತೆ ಪ್ರತಿಭಟನೆ ಮಾಡಿ ಮನವಿ ಅರ್ಪಿಸಿದ್ದರು.
ಆದರೆ ಮುಸ್ಲಿಂ ಸಂಘಟನೆಯವರು ನಾಮಫಲಕದಲ್ಲಿ ಉರ್ದು ಭಾಷೆ ಇರಬೇಕು ಎಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.

. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಗುರುವಾರ ಸಭೆ ನಡೆಸಿ ಕನ್ನಡ ಮತ್ತು ಇಂಗ್ಲೀಷ ಹೊರತು ಪಡಿಸಿ ಉಳಿದ ಭಾಷೆಯನ್ನು ತೆರವುಗೊಳಿಸಲು ಆದೇಶಿಸಿದ್ದರು. ತಹಸೀಲ್ದಾರ ನೇತೃತ್ವದ ಸ್ಥಳೀಯ ಆಡಳಿತ ಉರ್ದು ಭಾಷೆಯನ್ನು ನಾಮಫಲಕದಿಂದ ತೆಗೆಯಲಾಯಿತು.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಟ್ಕಳ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಭಟ್ಕಳದ ತಾಲೂಕು ಆಡಳಿತ 3 ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಿದ್ದಾರೆ.
——

ಕಾನೂನು ಪ್ರಕಾರವಾಗಿ ನಾವು ನಮ್ಮ ಪುರಸಭೆಯ ನಾಮಫಲಕದಲ್ಲಿ ಉರ್ದು ಭಾಷೆಯನ್ನು ಸೇರಿಸಿದ್ದೆವೆ ಪುರಸಭೆಯ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಜಿಲ್ಲಾಧಿಕಾರಿ
ಗಳು ಯಾವುದೋ ಒತ್ತಡಕ್ಕೆ ಒಳಗಾಗಿ ಉರ್ದು ನಾಮಫಲಕ ತೆಗೆಯಲು ಆದೇಶಿಸಿದ್ದಾರೆ. ಈ ಬಗ್ಗೆ ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಆದರೆ ಕಾನೂನು ಹೋರಾಟ ಮಾಡುತ್ತೇವೆ.
ಮಹಮ್ಮದ್ ಫರ್ವೇಜ್
ಅಧ್ಯಕ್ಷರು
ಭಟ್ಕಳ ಪುರಸಭೆ
