ಆದ್ಯೋತ್ ಸುದ್ದಿನಿಧಿ:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರ, ಜೇನುಕೃಷಿ ವಿಭಾಗದ ಮುಖ್ಯಸ್ಥ ಮೂಲತಃ ಉ.ಕ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಡಾ.ಮೋಹನ ಈಶ್ವರ ನಾಯ್ಕ ರಚನೆಯ ‘Vertebrate pets in Agriculture landscape of Karnataka and There Eco friendly Management’ ಎಂಬ ಕೃಷಿ ಸಂಶೋಧನಾ ಕೃತಿಯನ್ನು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ 58 ನೆಯ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಕುಲಪತಿ ಡಾ.ಎಸ್ ವಿ. ಸುರೇಶ್ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಡಾ.ಲಕ್ಷೀಪತಿ ಗೌಡ, ಡಾ ಪ್ರಭಾಕರ ಶೆಟ್ಟಿ. ಡಾ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಮೋಹನ ನಾಯ್ಕ ಕೋಲಸಿರ್ಸಿ ಕೃತಿ ಸಾಧನೆಗೆ ಉ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ, ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ, ಕೋಶಾಧ್ಯಕ್ಷ ಪಿ.ಬಿ. ಹೊಸೂರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ ಅಭಿನಂದಿಸಿದ್ದಾರೆ.
#######
ಶರತ್ ಕೊಠಾರಿ ವಿಜ್ಞಾನಿಯಾಗಿ ಆಯ್ಕೆ
ಶಿರಸಿ ತಾಲೂಕಿನ ಕೊಡ್ನಗದ್ದೆಯ ಹೊನ್ನೆಹಕ್ಕಲಿನ ಶರತ್ ಮಂಜುನಾಥ ಕೊಠಾರಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಡಿ ಬರುವ ರಾಜಸ್ಥಾನದ ಜೋಧಪುರದ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ಕೃಷಿಕ ಮಂಜುನಾಥ ಕೊಠಾರಿ ಹಾಗೂ ಸಾವಿತ್ರಿ ದಂಪತಿಯ ಪುತ್ರನಾದ ಇವರು, ಹಾಸನ ಕೃಷಿ ವಿದ್ಯಾಲಯದಿಂದ ಪದವಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಕೃಷಿ ಮಣ್ಣು ಹಾಗೂ ಕೃಷಿ ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇವರು ICAR-JRF ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದು ಶಿಷ್ಯವೇತನ ಪಡೆದಿದ್ದಾರೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ನ್ಯಾನೋಕ್ಲೆಬಯೋಪಾಲಿಮರ್ ರಾಸಾಯನಿಕ ಗೊಬ್ಬರಗಳ ಮೇಲೆ ನಡೆಸಿದ ಸಂಶೋಧನೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಚಿನ್ನದ ಪದಕ ಹಾಗೂ ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಯ ಚಿನ್ನದ ಪದಕವನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಿಂದ ಸ್ವೀಕರಿಸಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಚಿನ್ನದ ಪದಕದ ಜೊತೆ ಒಟ್ಟು 13 ಚಿನ್ನದ ಪದಕಗಳೊಂದಿಗೆ 2019 ರಲ್ಲಿ ಕೃಷಿ ಪದವಿ ಪಡೆದಿದ್ದಾರೆ. ಇದೀಗ ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಇವರ ಈ ಸಾಧನೆಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.