ಯುದ್ದದ ವಾತಾವರಣ ಗಡಿಯತ್ತ ಪಯಣಿಸಿದ ಸಿದ್ದಾಪುರ ಸೈನಿಕರು

ಆದ್ಯೋತ್ ಸುದ್ದಿನಿಧಿ:
ಭಾರತ-ಪಾಕಿಸ್ತಾನದ ಮಧ್ಯೆ ಯುದ್ದದ ಕಾರ್ಮೋಡ ಮುಸುಕಿದ್ದು ರಜೆಯ ಮೇಲೆ ಬಂದಿದ್ದ ಸೈನಿಕರಿಗೆ ವಾಪಸ್ಸ ಬರುವಂತೆ ಬುಲಾವ್ ಬಂದಿದೆ.

ತಾಲೂಕಿನ ಇಬ್ಬರು ಸೈನಿಕರು ರಜೆಯ ಮೇಲೆ 15 ದಿನದ ಹಿಂದೆ ಬಂದಿದ್ದರು ಸೈನ್ಯದ ಕರೆಯ ಮೇರೆಗೆ ಈ ಸೈನಿಕರು ಶುಕ್ರವಾರ ಪಟ್ಟಣದಿಂದ ತಮ್ಮ ನೆಲೆಯತ್ತ ಹೊರಟಿದ್ದಾರೆ.
ತಾಲೂಕಿನ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾಗರೀಕರು ಪಟ್ಟಣದ ಬಸ್‌ನಿಲ್ದಾಣದ ಎದುರು ಸಭೆ ನಡೆಸಿ ಇಬ್ಬರು ಸೈನಿಕರಿಗೆ ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು. ಇಬ್ಬರ ಪತ್ನಿಯರು ಹಾಗೂ ಕುಟುಂಬಸ್ಥರು ಸೈನಿಕರಿಗೆ ಆರತಿ ಬೆಳಗಿದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರ ಗೌಡರ,ಸುರೇಶ ಪಂಡಿತ ಗಣಪತಿ ಮೇಸ್ತ,ಪಪಂ ಸದಸ್ಯ ಗುರುರಾಜ ಶಾನಭಾಗ,ವಿಜಯ ಹೆಗಡೆ,ತೋಟಪ್ಪ ನಾಯ್ಕ,ಸುರೇಶ ನಾಯ್ಕ,ವಿಜಯ ಹೆಗಡೆ ಮುಂತಾದವರು ಉಪಸ್ಥಿತರಿದ್ದರು

ಪಟ್ಟಣದ ಹೊಸೂರಿನ ಜಯವಂತ ವಿ.ಎಸ್. ಛತ್ತೀಸಗಢದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೇ.1 ರಂದು ಮದುವೆಯಾಗಿದ್ದಾರೆ ಹನಿಮೂನಗೆ ಊಟಿಗೆ ಹೊರಟಿದ್ದ ದಂಪತಿಗಳು ಸೈನ್ಯದ ಕರೆಯ ಮೇರೆಗೆ ವಾಪಸ್ ಬಂದಿದ್ದಾರೆ ಅವರಿಗೆ ರಾಜಸ್ಥಾನಕ್ಕೆ ಬರುವಂತೆ ಸೂಚನೆ ನೀಡಲಾಗಿದೆಯಂತೆ.

ಪಟ್ಟಣದ ಸಮೀಪದ ಕನ್ನಳ್ಳಿಯ ಮಹಾದೇವ ಕೆ.ನಾಯ್ಕ ಅಣ್ಣನ ಮಗಳ ಮದುವೆಗಾಗಿ ಹದಿನೈದು ದಿನದ ಹಿಂದೆ ಆಗಮಿಸಿದ್ದರು. ಸೈನ್ಯವು ಇವರಿಗೆ ದೆಹಲಿಗೆ ಬರುವಂತೆ ಸೂಚಿಸಲಾಗಿದೆಯಂತೆ

About the author

Adyot

Leave a Comment