ಭಟ್ಕಳ;ಮುರಿನಕಟ್ಟೆ ಧ್ವಂಸ ಪ್ರಕರಣ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಆದ್ಯೊತ್ ಸುದ್ದಿನಿಧಿ:;
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುರಿನಕಟ್ಟೆ ಧ್ವಂಸಗೊಳಿಸಿರುವುದನ್ನು ವಿರೋಧಿಸಿ,ಹಿಂದೂಕಾರ್ಯಕರ್ತರ ಮೇಲೆ ಹಾಗೂ ಪೊಲೀಸ್‌ರ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಭಟ್ಕಳದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿರೋಧ ಪಕ್ಷದ ನಾಯ್ಕ ಆರ್.ಅಶೋಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಆರ್.ಅಶೋಕ,ಸರಕಾರ ಮುಸ್ಲಿಂ ಸಮುದಾಯವನ್ನು ಒಲೈಸುತ್ತಿರುವ ಪರಿಣಾಮ ಪೊಲೀಸ್‌ರ ಮೇಲೂ ಹಲ್ಲೆಯಾಗುತ್ತಿದೆ. ಅನಾದಿಕಾಲದಿಂದಲೂ ಇದ್ದಂತಹ ಮುರಿನಕಟ್ಟೆಯನ್ನು ಪುನರ್ ನಿರ್ಮಾಣ ಮಾಡಲು ರಾಷ್ಟಿçÃಯ ಹೆದ್ದಾರಿ ಪ್ರಾಕಾರ ಅನುಮತಿ ಕೊಟ್ಟಿದೆ ಆದರೆ ಹಿಂದೂಗಳ ಶ್ರದ್ಧಾ ಕೇಂದ್ರದ ಮೇಲೆ ವಕ್ರದೃಷ್ಟಿ ಬೀರಿರುವ ಕೆಲವು ಮತಾಂಧರು ಅದನ್ನು ಧ್ವಂಸಗೊಳಿಸಿದ್ದಾರೆ ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಜಿಲ್ಲಾಡಳಿತ ಒಂದು ತಿಂಗಳೊಳಗೆ ಕಟ್ಟೆಯನ್ನು ಪುನರ್‌ನಿರ್ಮಾಣ ಮಾಡದಿದ್ದರೆ ನಾವು ನಿರ್ಮಾಣ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.


ಕರ್ನಾಟಕದಲ್ಲೂ ಪಶ್ಚಿಮಬಂಗಾಳದ ರೀತಿಯಲ್ಲೆ ವಿದೇಶಿ ವಲಸಿಗರು ನೆಲೆಸಿದ್ದಾರೆ ಎಆರೈ ನಿಂದ ಇವರೆಲ್ಲರ ಗುಟ್ಟು ಹೊರಬರಲಿದೆ ಇವರನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಳ್ಳಲಿದೆ. ಭಟ್ಕಳದಲ್ಲಿ ವಿದೇಶಿ ವಲಸಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ
ಇಂತಹ ಮತಾಂಧ ಶಕ್ತಿಗಳಿಂದಲೇ ಕೋಮುಸೌಹಾರ್ಧಕ್ಕೆ ದಕ್ಕೆ ಬರುತ್ತಿದೆ ಇಂತಹವರನ್ನು ಗುರುತಿಸಿ ಗಡಿಪಾರು ಮಾಡಬೇಕು. ಕಾಂಗ್ರೆಸ್ ಸರಕಾರ ರಾಜ್ಯವನ್ನು ದಿವಾಳಿ ಮಾಡಿದೆ ಅಭಿವೃದ್ಧಿ ಕೆಲಸಗಳು ನಿಂತುಹೋಗಿದೆ. ಬ್ರಷ್ಟಾಚಾರ ಮಿತಿಮೀರಿದೆ ಕಾಂಗ್ರೆಸ್ ಹೈಕಮಾಂಡಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಎಟಿಎಂ ನಂತಾಗಿದೆ.ಮೂರು ತಿಂಗಳಿನಿಂದ ಪೇನ್ಷನ್ ಬರುತ್ತಿಲ್ಲ ನೌಕರರಿಗೆ ಸಂಬಳಗಳು ಬರುತ್ತಿಲ್ಲ,ಮಹಿಳೆಯರಿಗೆ ನೀಡುವ ಎರಡು ಸಾವಿರರೂ. ಒಮ್ಮೊಮ್ಮೆ ಬರುತ್ತಿದೆ ಮೋದಿಯವರು ಕೊಡುತ್ತಿರುವ ಐದು ಕೆ.ಜಿ.ಅಕ್ಕಿ ಬಿಟ್ಟರೆ ಸಿದ್ದರಾಮಯ್ಯನವರ ಅಕ್ಕಿಯೂ ಇಲ್ಲ ಬೇಳೆಯೂ ಇಲ್ಲ ಎಂದು ಲೇವಡಿ ಮಾಡಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಹಿಂದೂಗಳನ್ನು ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಮುಂದಾಗುತ್ತಿದೆ ಮುಸ್ಲಿಂರನ್ನು ಅತಿಯಾಗಿ ಓಲೈಕೆ ಮಾಡಿದ ಪರಿಣಾಮ ಪೊಲೀಸ್‌ರ ಮೇಲೂ ಹಲ್ಲೆಯಾಗುತ್ತಿದೆ. ಮುರಿನಕಟ್ಟೆ ಹಿಂದೂಗಳ ಶ್ರದ್ಧಾ ಕೇಂದ್ರ ಇದನ್ನು ಧ್ವಂಸ ಮಾಡಿದವರನ್ನು ಬಂಧಿಸುವುದು ಬಿಟ್ಟು ಹಿಂದೂಗಳ ಮೇಲೆ ಕೇಸ್ ಮಾಡುತ್ತಿದ್ದಾರೆ ಇದೆಲ್ಲವೂ ನಡೆಯುವುದಿಲ್ಲ ಒಂದು ತಿಂಗಳೊಳಗೆ ಕಟ್ಟೆ ನಿರ್ಮಾಣವಾಗದಿದ್ದರೆ ನಾವೇ ಸ್ವತಃ ಕಟ್ಟೆ ನಿರ್ಮಾಣಕ್ಕೆ ಮುಂದಾಗುತ್ತೇವೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರಕಾರವೇ ನೇರವಾಗಿ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.


ಸುಮಾರು ಮೂರುಸಾವಿರಕ್ಕೂ ಅಧಿಕ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚೀವ ಶಿವಾನಂದ ನಾಯ್ಕ,ಮಾಜಿ ಶಾಸಕ ಸುನಿಲ ನಾಯ್ಕ,ಎನ್.ಎಸ್.ಹೆಗಡೆ,ಗೋವಿಂದ ನಾಯ್ಕ,ರೂಪಾಲಿ ನಾಯ್ಕ ಮಾತನಾಡಿದರು.

About the author

Adyot

Leave a Comment