
ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹೊಸೂರು ಶಂಕರಮಠದ ಸಭಾಭವನದಲ್ಲಿ ರವಿವಾರ ಸಿದ್ದಾಪುರ ತಾಲೂಕು ಸ್ವಾತಂತ್ರ‍್ಯ ಯೋಧರ ವಂಶಸ್ಥರು ಹಾಗೂ ದೇಶಾಭಿಮಾನಿಗಳ ಸಭೆ ನಡೆಯಿತು.

ಸಭೆಯನ್ನು ಉದ್ಘಾಟಿಸಿದ ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ,ತಾಲ್ಲೂಕಿನ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲೊಂದು ಸ್ವಾತಂತ್ರ‍್ಯ ಹೋರಾಟದ ಕಥೆ ಕೇಳ ಸಿಗುತ್ತದೋ, ದೇಶದಲ್ಲಿಯೇ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೆಚ್ಚಿನ ಕೊಡುಗೆ ನೀಡಿದ ತಾಲ್ಲೂಕು ಇದ್ದರೆ ಅದು ನಮ್ಮ ಸಿದ್ದಾಪುರ. ತಾಲ್ಲೂಕಿನಲ್ಲಿ ಬಡತನ ಇದ್ದರೂ ರಾಷ್ಟ್ರೀಯತೆಯ ಭಾವ ಹೆಚ್ಚಿತ್ತು. ದಿನಕ್ಕೆ ಎರಡು ಬಾರಿ ಊಟ ಮಾಡುವವ ಶ್ರೀಮಂತ ಎನ್ನುವ ಕಾಲದಲ್ಲಿ ಮನೆಗೊಬ್ಬರಂತೆ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ‍್ಯ ಹೋರಾಟದಲ್ಲಿ ನಮ್ಮ ಪೂರ್ವಜರು ಪಟ್ಟ ಕಷ್ಟವನ್ನು ನಾವೀಗ ಊಹಿಸಲು ಸಾಧ್ಯವಿಲ್ಲ. ನಮ್ಮ ನಡುವೆ ಆಗಿ ಹೋದ ಹೋರಾಟಗಾರರ ನೆನಪನ್ನು ಮಾಡಿಕೊಳ್ಳಲು ಈಗಲಾದರೂ ಮನಸ್ಸು ಮಾಡಿರುವುದು ಸಂತಸದ ವಿಷಯ. ಇವತ್ತು ಆರಂಭಗೊAಡ ಸ್ವಾತಂತ್ರ‍್ಯ ಹೋರಾಟಗಾರರ ವಂಶಸ್ಥರ ಸಂಘಟನೆ ಸ್ವಾತಂತ್ರ‍್ಯ ಹೋರಾಟಗಾರ ದಾಖಲೆಗಳು ಜೋಪಾನ ಮಾಡುವ ತುರ್ತು ಇದೆ. ಈ ಮೂಲಕ ಮುಂದಿನ ಪೀಳಿಗೆಗೆ ದಾಖಲೆ ಸಹಿತ ಪೂರ್ವಜರ ಸಾಹಸದ ಪರಿಚಯ ಸಾಧ್ಯ.

ಇಂದಿನ ರಾಜಕಾರಣಿಗಳಿಗೆ ಪೂರ್ವಜರ ಹೋರಾಟ, ಈ ಮಣ್ಣಿನಲ್ಲಿ ಪಟ್ಟ ಕಷ್ಟದ ಪರಿಚಯವಿಲ್ಲ. ಕಾರಣ ಇಂದು ಹಗರಣಗಳೇ ಹೆಚ್ಚಾಗುತ್ತಿವೆ. ಸಾರ್ವಜನಿಕರು ಜಾಗೃತರಾಗಬೇಕು.ಎಲ್ಲರೂ ಒಟ್ಟಾಗಿ ದೃಢ ಸಂಕಲ್ಪದಿAದ ಮುಂದುವರೆದರೆ ಸ್ಮೃತಿ ಭವನ ನಿರ್ಮಾಣವಾಗುವ ದಿನ ದೂರವಿಲ್ಲ. ಒಳ್ಳೆಯ ಕೆಲಸಕ್ಕೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಸಮಾಜದಲ್ಲಿ ಒಳ್ಳೆಯ ಮನಸ್ಸುಗಳು ಬಹಳಷ್ಟಿವೆ. ಅವರನ್ನು ಒಂದುಗೂಡಿಸುವ ಕೆಲಸವಾಗಬೇಕು ಎಂದರು.

ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ‍್ಯ ಚಳುವಳಿಯ ಎಲ್ಲಾ ಹೋರಾಟಗಳಲ್ಲಿಯೂ ತಾಲ್ಲೂಕಿನ ಹೋರಾಟಗಾರರು ಭಾಗಿಯಾಗಿದ್ದರು. ಅಂತಹ ಹೋರಾಟಗಾರರ ನೆನಪು ಶಾಶ್ವತವಾಗಿರಿಸಲು ಸ್ವಾತಂತ್ರ‍್ಯ ಭವನ ನಿರ್ಮಾಣವಾಗಬೇಕು ಎಂದರು.

ಅತಿಥಿಗಳಾಗಿ ಭಾಗಿಯಾದ ಸಾಗರದ ತಹಶೀಲ್ದಾರ ಚಂದ್ರಶೇಖರ ನಾಯ್ಕ ಮಾತನಾಡಿ ಸಿದ್ದಾಪುರದ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಹೋರಾಟಗಾರು ಜನಿಸಿ ಸ್ವಾತಂತ್ರ‍್ಯ ಪಡೆದುಕೊಳ್ಳಲು ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಈಗಿನ ಕಾಲದಲ್ಲಿ ಒಂದಿAಚು ಭೂಮಿಗಾಗಿ ಅನಾಹುತಗಳೇ ನಡೆಯುತ್ತಿವೆ. ಆದರೆ ಸ್ವಾತಂತ್ರ‍್ಯ ಹೋರಾಟದಲ್ಲಿ ತಮ್ಮ ಜಮೀನು ಮನೆಗಳನ್ನೇ ಕಳೆದುಕೊಂಡವರು ನಮ್ಮ ಪೂರ್ವಜರು. ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ‍್ಯ ದೊರಕಿಸಿಕೊಟ್ಟವರ ನೆನಪು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ಸ್ವಾತಂತ್ರ‍್ಯ ಸ್ಮೃತಿ ಭವನ ನಿರ್ಮಾಣವಾಗಿ ಮುಂದಿನ ಪೀಳಿಗೆಗೂ ಪೂರ್ವಜರ ನೆನಪು ಮಾಡದಂತೆ ಮಾಡಬೇಕಿದೆ ಎಂದರು.

ಸAಘಟನೆಯ ಸಂಚಾಲಕ ನಾಗರಾಜ ಭಟ್ಟ ಕೆಕ್ಕಾರ ಪ್ರಾಸ್ತಾವಿಕ ಮಾತನಾಡಿ ದಕ್ಷಿಣದ ಬಾರ್ಡೋಲಿ ಎಂದು ಗಾಂಧೀಜಿಯಿAದ ಕರೆಯಲ್ಪಟ್ಟ ತಾಲ್ಲೂಕು ನಮ್ಮದು. ಆದರೆ ಸ್ವಾತಂತ್ರ‍್ಯ ಯೋಧರ ನೆನಪಿಸಿಕೊಳ್ಳುವಂತಹ ಯಾವುದೇ ಕುರುಹುಗಳು ಇಲ್ಲದಿರುವುದು ಬೇಸರದ ಸಂಗತಿ. ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾದ ತಾಲ್ಲೂಕು ನಮ್ಮದು. ತಾಲ್ಲೂಕಿನ ಸ್ವಾತಂತ್ರ‍್ಯ ಯೋಧರ ನೆನಪನ್ನು ಅಚ್ಚಳಿಯದಂತೆ ದಾಖಲಿಸುವುದು ನಮ್ಮೆಲ್ಲರ ಕರ್ತವ್ಯ. ಕಾರಣ ಸ್ವಾತಂತ್ರ‍್ಯ ಯೋಧರ ನೆನಪಿಗಾಗಿ ತಾಲ್ಲೂಕಿನಲ್ಲಿ ಸ್ವಾತಂತ್ರ‍್ಯ ಭವನ ನಿರ್ಮಾಣವಾಗಬೇಕು ಎನ್ನುವುದು ಜಾತ್ಯಾತೀತ ಮತ್ತು ಪಕ್ಷಾತೀತವಾದ ಕೂಗಾಗಿದೆ ಎಂದರು.

ಸಭೆಯಲ್ಲಿ ಹಿರಿಯ ಸಾಹಿತಿ ಎಸ್ ವಿ ಹೆಗಡೆ ಮಗೇಗಾರು, ಹಿರಿಯ ವಕೀಲ ಜೆ ಪಿ ಎನ್ ಹೆಗಡೆ
ಎಸ್.ಹೆಗಡೆ ಬೆಳ್ಳೆಮಡ್ಕೆ, ಗುರುರಾಜ ಶಾನಭಾಗ, ಸೇವಾಸಂಕಲ್ಪ ಟ್ರಸ್ಟ್ ನ ಪಿ.ಬಿ.ಹೊಸೂರು, ಛಾಯಾಗ್ರಾಹಕ ಶಿರೀಷ ಬೆಟಗೇರಿ ಉಪಸ್ಥಿತರಿದ್ದು ಮಾತನಾಡಿದರು.
ಎಂ.ಆರ್.ಭಟ್ಟ ನಿರೂಪಣೆ ಮಾಡಿದರು. ಎನ್ ಎಸ್ ಹೆಗಡೆ ನೇರ್ಲಮನೆ ಸ್ವಾಗತಿಸಿದರು. ಸತ್ಯನಾರಾಯಣ ನಾಯ್ಕ ವಂದಿಸಿದರು.

——-
ನಂತರ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಲು ಅಗತ್ಯವಾದ ಸ್ಮಾರಕ ನಿರ್ಮಾಣದ ಕುರಿತು ಹಲವು ನಿರ್ಣಯ ಕೈಗೊಳ್ಳಲಾಯಿತು.
ತಾಲೂಕಿನ ಸ್ವಾತಂತ್ರ್ಯ ಹೋರಾಟವನ್ನು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡಲು ಸಂಘಟನೆ ರಚಿಸುವುದು
ದಕ್ಷಿಣದ ಬಾರ್ಡೋಲಿ ಎಂಬ ಹೆಸರನ್ನು ಶಾಶ್ವತವಾಗಿರಿಸಲು ಸ್ವಾತಂತ್ರ‍್ಯ ಸ್ಮಾರಕ ಭವನ ಸಿದ್ದಾಪುರದಲ್ಲಿ ನಿರ್ಮಾಣವಾಗಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಕೂಗಿಗೆ ಬೆಲೆ ನೀಡಬೇಕು.ಸ್ವಾತಂತ್ರ‍್ಯ ಸ್ಮಾರಕ ವನಕ್ಕೆ ಚಾಲನೆ ನೀಡುವುದು.ಪಟ್ಟಣದಲ್ಲಿ ತಿಮ್ಮಪ್ಪ ನಾಯ್ಕ ಮತ್ತು ಚೌಡಾ ನಾಯ್ಕ ವೃತ್ತ ಪುನರ್ ನಿರ್ಮಿಸಬೇಕು.ಪ್ರತಿ ವರ್ಷ ಅಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಸ್ಮರಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದು.ಸ್ವಾತಂತ್ರ‍್ಯ ಹೋರಾಟಗಾರರ ಸಮಗ್ರ ಇತಿಹಾಸ ದಾಖಲಿಸುವುದು.ಶಾಲೆಗಳಲ್ಲಿ ಮತ್ತು ಪಂಚಾಯಿತಿಗಳಲ್ಲಿ ಸ್ಥಳೀಯ ಸ್ವಾತಂತ್ರ‍್ಯ ಹೋರಾಟಗಾರರ ಮಾಹಿತಿ ಫಲಕ ಅಳವಡಿಸುವುದು.
