
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹಸವಂತೆಯ ಹಸೆಚಿತ್ತಾರದ ಕಲಾವಿದೆ ಸರಸ್ವತಿ ಈಶ್ವರ ನಾಯ್ಕರಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಭವನದಿಂದ ಅಧಿಕೃತ ಆಮಂತ್ರಣ ನೀಡಲಾಗಿದೆ.


ಮಂಗಳವಾರ ಹಸವಂತೆ ಗ್ರಾಮಕ್ಕೆ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಹಸೆಚಿತ್ತಾರಕಲಾವಿದ ಈಶ್ವರ ನಾಯ್ಕ,ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ಉಪಸ್ಥಿತರಿದ್ದರು.

ಸರಸ್ವತಿ ಈಶ್ವರ ನಾಯ್ಕ ಅವರಿಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಮಾರ್ಗದರ್ಶನ ನೀಡುವ ಎನ್.ಆರ್.ಎಲ್.ಎಂ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಕರ್ನಾಟಕದಿಂದ ಐವರು ಮಹಿಳಾ ಸಾಧಕಿಯರಿಗೆ ಈ ಅವಕಾಶ ನೀಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ ಸರಸ್ವತಿ ನಾಯ್ಕ ಒಬ್ಬರಾಗಿದ್ದಾರೆ.

ಸರಸ್ವತಿ ಈಶ್ವರ ನಾಯ್ಕ ದಂಪತಿಗಳು ಮಲೆನಾಡಿನ ಪ್ರಮುಖ ಕಲೆಯಾದ ಹಸೆಚಿತ್ತಾರದ ಮೂಲಕ ರಾಷ್ಟ್ರಾದ್ಯಂತ ಖ್ಯಾತಿ ಪಡೆದವರು.ಈಡಿಗ ಸಮುದಾಯದ ಮೂಲ ಕಲೆಯಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಹಸೆ ಚಿತ್ತಾರ ಕಲೆಯನ್ನು ತವರು ಮನೆಯಿಂದಲೇ ಕಲಿತ ಸರಸ್ವತಿ ನಾಯ್ಕ ಮದುವೆಯ ನಂತರ ತಮ್ಮ ಪತಿ ಹಸೆಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸುವಂತೆ ಅವರಿಂದ ಇನ್ನಷ್ಟು ತರಬೇತಿ ಪಡೆದು ಹಸೆಚಿತ್ತಾರದಲ್ಲಿ ಪ್ರಾವಿಣ್ಯತೆ ಸಾಧಿಸಿದ್ದಾರೆ.

ಮಲೆನಾಡಿನ ವಿಶೇಷವಾದ ಭೂಮಣ್ಣಿ ಬುಟ್ಟಿಯನ್ನು ಬಿಡಿಸುವಲ್ಲಿ ಪ್ರಸಿದ್ದರಾಗಿದ್ದ ಸರಸ್ವತಿ ನಾಯ್ಮ ಕ್ರಮೇಣ ಹಸೆ ಚಿತ್ತಾರ ಕಲೆಯ ಮೂಲಕ ಗೋಡೆ ಬರಹ ಮತ್ತಿತರ ಕಲೆಯಲ್ಲಿ ನೈಪುಣ್ಯತೆ ಸಾಧಿಸಿ ಕರ್ನಾಟಕದ ಪ್ರಮುಖ ಹಸೆ ಚಿತ್ತಾರ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಜನರಿಗೆ ಈ ಕಲೆಯನ್ನು ಕಲಿಸುತ್ತಿರುವ ಇವರು ಆಸಕ್ತ ಮಕ್ಕಳಿಗೆ ಸಾಕಷ್ಟು ತರಬೇತಿ ನೀಡಿದ್ದಾರೆ.

ಕಳೆದ ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ನನ್ನ ಪತಿ ಈಶ್ವರ ನಾಯ್ಕರಿಗೆ ಭಾಗವಹಿಸಲು ಆಮಂತ್ರಣ ನೀಡಲಾಗಿತ್ತು ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಈ ಬಾರಿ ನನಗೆ ಆಹ್ವಾನ ಬಂದಿದ್ದು ನನ್ನ ಪತಿಯ ಜೊತೆಗೆ ನಾನು ಭಾಗವಹಿಸುತ್ತಿದ್ದೆನೆ ಇದು ನನಗೆ ತುಂಬಾ ಸಂತೋಷವನ್ನುAಟು ಮಾಡಿದೆ ಎಂದು ಪತ್ರಿಕೆ ಸರಸ್ವತಿ ನಾಯ್ಕ ಆದ್ಯೋತ್ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈಶ್ವರ ನಾಯ್ಕ-ಸರಸ್ವತಿ ದಂಪತಿಗಳು ನಮ್ಮ ಮಲೆನಾಡಿನ ಜಾನಪದ ಕಲೆಯಾದ ಹಸೆಚಿತ್ತಾರ ಕಲೆಯಲ್ಲಿ ವಿಶೇಷ ಪ್ರಾವಿಣ್ಯತೆಯನ್ನು ಪಡೆದಿದ್ದಾರೆ. ಈ ಕಲೆಯಿಂದಾಗಿ ಅವರು ರಾಷ್ಟç-ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವುದಲ್ಲದೆ ನಮ್ಮ ತಾಲೂಕಿನ ಕೀರ್ತಿಯನ್ನೂ ಹೆಚ್ಚಿಸಿದ್ದಾರೆ. ಇಂತಹ ಕಲೆಯು ಉಳಿಯಬೇಕಾದರೆ ಇಂದಿನ ಯುವ ಪೀಳಿಗೆ ಈ ಕಲೆಯ ಅಭ್ಯಾಸವನ್ನು ಮಾಡಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ತಿಳಿಸಿದ್ದಾರೆ.

