ಕಾರವಾರ ಶಾಸಕ ಸತೀಶ ಸೈಲ್ ಮನೆಯ ಮೇಲೆ “ಇಡಿ” ದಾಳಿ

ಆದ್ಯೋತ್ ಸುದ್ದಿನಿಧಿ:
ಕಾರವಾರ ಕಾಂಗ್ರೆಸ ಶಾಸಕರು ಹಾಗೂ ಕರ್ನಾಟಕ ರಾಜ್ಯ ಮಾರ್ಕೇಟಿಂಗ್ & ಎಡ್ವಟೈಜ್ ಮೆಂಟ್ ಬೋರ್ಡ ಅಧ್ಯಕ್ಷರಾದ ಸತೀಶ ಸೈಲ ರವರ ಮನೆ ಮೇಲೆ ಬೆಳ್ಳಂಬೆಳಿಗ್ಗೆ “ಇಡಿ” ಅಧಿಕಾರಿಗಳು ದಾಳಿ ನಡೆಸಿದ್ದಾರೆ

ಕಾರವಾರ ತಾಲೂಕಿನ ಚಿತ್ತಾಕುಲಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ರಸ್ತೆಯ ಪಕ್ಕದಲ್ಲಿರುವ ಸತೀಶ ಸೈಲ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಲುಬೆಂಗಳೂರಿನ ಇಡಿ ಅಧಿಕಾರಿ ಕೇಶವ ರಾವ್ ನೇತೃತ್ವದಲ್ಲಿ ಆರು ಇನೋವಾ ಕಾರಿನಲ್ಲಿ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಶಾಸಕ ಸತೀಶ ಸೈಲ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸಿದ್ದು ಮನೆಯಲ್ಲಿ ಇಲ್ಲ ಎಂಬ ಮಾಹಿತಿ ಅವರ ಕುಟುಂಬದವರಿಂದ ತಿಳಿದು ಬಂದಿದೆ.

About the author

Adyot

Leave a Comment