ಆದ್ಯೋತ್ ಸುದ್ದಿನಿಧಿ:
ಹಿಂದಿನ ಸಂಚಿಕೆಯಲ್ಲಿ ಕಲಿಕಾ ಅಸಮಥ೯ತೆ ಬಗ್ಗೆ ತೀಳಿದುಕೊಂಡಿದ್ದೆವೆ. ಇವತ್ತಿನ ಲೆಖನದಲ್ಲಿ ಡಿಸ್ಲೆಕ್ಸಿಯ ಎಂಬ ವಿಶೇಷ ಕಲಿಕಾ ಅಸಮಥ೯ತೆ ಬಗ್ಗೆ ಅರಿಯೊಣ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಾರೆ , ಅದರಿಂದ ಬಹಳ ಸಮಸ್ಯೆಗಳನ್ನು ಏದುರಿಸುವ ಸನ್ನಿವೇಶಗಳು ಬರುವುದು. ಅದನ್ನು ಮೆಟ್ಟಿನಿಂತು ಅಸಮಥ೯ತೆಗಳನ್ನು ಹೊಗಲಾಡಿಸಿ ಅದನ್ನು ಸಮಥ೯ತೆಯನ್ನಾಗಿ ಉನ್ನತಿ ಹೊಂದುವುದನ್ನು ಗುರಿಯಾಗಿಟ್ಟಿಸಿ ಮುನ್ನೆಡೆಯಬೇಕು .
ಡಿಸ್ಲೆಕ್ಸಿಯಾ ವಿಶೇಷ ಕಲಿಕಾ ಅಸಮಥ೯ತೆ.
ಡಿಸ್ಲೆಕ್ಸಿಯಾ ( it is a learning disability )ಎಂಬುದು ಮಕ್ಕಳಲ್ಲಿ ಹಾಗು ವಯಸ್ಸಿಗರಲ್ಲಿ ಕಂಡು ಬರುವ ಅಸಮಥ೯ತೆ. ಇದು ಬುದ್ಧಿಮಟ್ಟಕ್ಕೆ ಸಂಬಂಧಿಸದಿದ್ದರು ಅಕ್ಷರಗಳನ್ನು ಓದುವುದು,ಬರೆಯುವುದನ್ನು,ವಾಕ್ಯ ರಚಿಸುವುದನ್ನು,ಗುರುತಿಸುವಲ್ಲಿ ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಆದರೆ ಇವರು ಸಾಮಾನ್ಯವಾಗಿ ಸರಾಸರಿ ಅಥವಾ ಹೆಚ್ಚಿನ ಬುದ್ಧಿವಂತರಾಗಿದ್ದು ಮೆದುಳಿನಲ್ಲಿ ಅಕ್ಷರ ಸಂಯೋಜಿಸುವ ಶಬ್ದಗಳನ್ನು ಗುರುತಿಸುವ ವಾಕ್ಯರಚಿಸುವ ವಿಧಾನಗಳಲ್ಲಿ ಸಾಮಾನ್ಯರಿಗಿಂತ ಸ್ವಲ್ಪ ವ್ಯತ್ಯಾಸವಿರುತ್ತದೆ. ಡಿಸ್ಲೆಕ್ಸಿಯಾ ಇರುವ ಮಕ್ಕಳು ಸೃಜನಶೀಲರು ಮತ್ತು ಪ್ರತಿಭಾವಂತರಾಗಿರುತ್ತಾರೆ ಆದರೆ ಮೆದುಳಿನ ಭಾಷಾ ಪ್ರಕ್ರಿಯೆಯಲ್ಲಿ ವ್ಯತ್ಯಾಸವಿರುವುದರಿಂದ ಅವರ ಕಲಿಕಾ ಶೈಲಿ ವಿಭಿನ್ನವಾಗಿರಿವುದರಿಂದ ಅವರಿಗೆ ವಿಶೇಷ ಮಾಗ೯ದಶ೯ನದ ಅವಶ್ಯಕತೆ ಮತ್ತು ಸಹಕಾರದ ಅಗತ್ಯವಿರುತ್ತದೆ.

ಡಿಸ್ಲೆಕ್ಸಿಯಾದ ಮುಖ್ಯ ಲಕ್ಷಣಗಳೆಂದರೆ ;-
* ಅಕ್ಷರಗಳನ್ನು ಗುರುತಿಸುವುದರಲ್ಲಿ ತೊಂದರೆಯಾಗುವುದು
* ಓದುವಾಗ ತಡವರಿಸುವುದು ನಿಧಾನವಾಗಿ ಓದುವುದು
* ಬರೆಯುವಾಗ ಅಕ್ಷರಗಳನ್ನು ತಪ್ಪಾಗಿ ಬರೆಯುವುದು , ಸ್ಪೆಲ್ಲಿಂಗ ತಪ್ಪುಗಳನ್ನು ಮಾಡುವುದು.
* ದಿನ ವಾರಗಳು ತಿಂಗಳುಗಳನ್ನು ಕ್ರಮವಾಗಿ ನೆನಪಿಟ್ಟುಕೋಳ್ಳಲು ಕ್ರಮವಾಗಿ ಜೋಡಿಸುವುದು ಕ್ರಮಗಳಲ್ಲಿ ಅದಲು ಬದಲಾಗುವುದು
* ಮುಖ್ಯವಾಗಿ ಈ ಸಮಸ್ಯೆಗಳಿರುವುದರಿಂದ ಓದಲು , ಬರೆಯಲು ಶಿಕ್ಷಣಗಳಿಂದ ತಪ್ಪಿಸಿಕೋಳ್ಳುವುದು
ಡಿಸ್ಲೆಕ್ಸಿಯಾ ಮಕ್ಕಳಲ್ಲಿ ;-
* ಮಾತಿನ ಬೆಳವಣಿಗೆಯಲ್ಲಿ ಕುಂಟಿತವಾಗುವುದು ,ತೊದಲುವುದು .
* ಶಬ್ದಗಳನ್ನು ವಾಕ್ಯಗಳನ್ನು ಓದುವಾಗ ಬರೆಯುವಾಗ ಮಿಶ್ರಣಗೊಳಿಸುವುದು
* ಕಾವ್ಯ & ಕವನಗಳು ಪದ್ಯಗಳನ್ನು ಕಲಿಯಲು ಕಷ್ಟ ಪಡುವುದು.
* ಅಕ್ಷರ ಮಾಲೆ ( alphabetical order) ನೆನಪಿಡಲು ತೊಂದರೆ.
ಡಿಸ್ಲೆಕ್ಸಿಯಾ ವಯಸ್ಕರಲ್ಲಿ ;-
* ಓದಲು ಬರೆಯಲು ಕಷ್ಟ ಪಡುವುದು.
* ಹೆಸರುಗಳನ್ನು ಅಥವಾ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳಲು , ವಿಳಾಸ ಮೊಬೈಲ್ ನಂಬರ್ ನೆನಪಿಡಲು ತೊಂದರೆ.
* ಜೋರಾಗಿ ಓದಲು ಮಾತನಾಡಲು ಹಿಂಜರಿಯುವುದು , ಮುಖ್ಯವಾಗಿ ಸಮಾಜದಲ್ಲಿ ಜನರ ಏದುರಿಗೆ ಓದಲು ಭಯ ಪಡುವುದು.
ಇದನ್ನು ಪತ್ತೆ ಮಾಡುವ ವಿಧಾನಗಳು ;-
* ಆಪ್ತ ಸಮಾಲೋಚಕರು ಅಥವಾ ಮನೋ ಸಮಾಲೋಚಕರ , ವಿಶೇಷ ಶಿಕ್ಷಕರ ಬಳಿ ತಪಾಸಣೆ ಮಾಡಿಸುವುದು
* ಓದುವುದು ಬರೆಯುವುದು ನೆನಪಿಡುವುದು ಭಾಷಾ ಪರಿಕ್ಷೆಗಳನ್ನು ಮಾಡುವುದು .
ಪರಿಹಾರಗಳು ಮತ್ತು ಬೇರೆ ಮಾಗ೯ಗಳು ;- (ಡಿಸ್ಲೆಕ್ಸಿಯಾಗೆ ಚಿಕಿತ್ಸೆ ಇರುವುದಿಲ್ಲ ) ಆದರೆ
* ಮಲ್ಟಿ ಸೆನ್ಸರಿ ಕಲಿಕಾ ವಿಧಾನಗಳು
* ಆಡಿಯೋ &ವಿಡಿಯೋಗಳ ಮೂಲಕ,
* ಕಥೆ ,ಚಿತ್ರಕಥೆ ಪುಸ್ತಕಗಳ ಮೂಲಕ ಹೆಚ್ಚುವರಿ ಅಭ್ಯಾಸ ,
* ಕಂಪ್ಯೂಟರ್ ಅಪ್ಲಿಕೇಶನ್ & ಮೊಬೈಲ್ ಅಪ್ಲಿಕೇಶನ್ನ ಸಹಾಯ
* ಸಮಯ ನೀಡುವುದು ಹಾಗು ಮುಖ್ಯವಾಗಿ ಭಾವನಾತ್ಮಕವಾಗಿ ಬೆಂಬಲ ನೀಡುವುಲ್ಲಿ ಪೋಷಕರ ಪಾತ್ರ ಬಹುಮುಖ್ಯ
ಡಿಸ್ಲೆಕ್ಸಿಯಾ ಕೇವಲ ಒಂದು ಅಡಚಣೆಯಷ್ಷೆ ಹೊರತು ಅಸಾಧ್ಯವಲ್ಲ ಉತ್ತಮ ಶಿಕ್ಷಕರ ಆಪ್ತ ಸಮಾಲೋಚಕರ , ಮನೋ ಸಮಾಲೋಚಕರ ಮಾಗ೯ದಶ೯ನ ಪ್ರಮುಖವಾಗಿ ಪೋಷಕರ ಬೆಂಬಲದಿಂದ ಇದನ್ನು ಮೆಟ್ಟಿನಿಂತು ಉತ್ತಮ ಭವಿಷ್ಯವನ್ನು ರೂಪಿಸಬಹುದು.
( ನಿಮ್ಮ ಮನೆ ಅಥವಾ ಸುತ್ತಮುತ್ತಲಿನ ಪರಿಸರದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಯಾವುದಾದರು ಮಕ್ಕಳು ಮೇಲಿನ ತೊಂದರೆಗಳನ್ನು ಅಥವಾ ಯಾವುದಾದರು ಲಕ್ಷಣಗಳು ಹೊಂದಲ್ಲಿ ನಿಲ೯ಕ್ಷಿಸದೇ ಒಮ್ಮೆ ಪರಿಕ್ಷಿಸುವುದು ಉತ್ತಮ )
ಧನುಷ್ ಭಟ್ ಹೊಸೂರು
