ಸಿದ್ದಾಪುರ ಕುಂಬ್ರಿಗದ್ದೆಯ ಮನೆಗೆ ಬಂದ ಚಿರತೆ

ಆದ್ಯೋತ್ ಸುದ್ದಿನಿಧಿ
ಸಿದ್ದಾಪುರ ಭುವನಗಿರಿ ಸಮೀಪದ ಕುಂಬ್ರಿಗದ್ದೆ ಪ್ರಶಾಂತ ನಾಯ್ಕ ಎನ್ನುವವರ ಮನೆಗೆ ಚಿರತೆ ಬಂದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ನಾಯಿಯನ್ನು ಬೇಟೆಯಾಡುವ ಉದ್ದೇಶದಿಂದ ಮನೆಗೆ ಬಂದ ಚಿರತೆ ಮನೆಯ ಮಹಡಿಯನ್ನು ಹತ್ತಿ ನಾಯಿಗಾಗಿ ಹುಡುಕಾಟ ನಡೆಸಿದೆ.ನಂತರ ಮನೆಯ ಮುಖ್ಯದ್ವಾರದ ಪಕ್ಕದಲ್ಲಿ ಮಲಗಿದ್ದ ನಾಯಿಯನ್ನು ಹಿಡಿಯಲು ಯತ್ನಿಸಿದ್ದು ನಾಯಿ ಜೋರಾಗಿ ಬೊಗಳಲು ಆರಂಭಿಸಿದ್ದರಿAದ ನಾಯಿಯನ್ನು ಬಿಟ್ಟು ವಾಪಸ್ಸಾಗಿದೆ.ಈ ಘಟನೆ ಪ್ರಶಾಂತ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳಿಯರಲ್ಲಿ ಆತಂಕ ಹೆಚ್ಚಾಗಿದೆ.
ಕೆಲ ದಿನಗಳ ಹಿಂದೆ ಭುವನಗಿರಿ ಸಮೀಪ ರಾತ್ರಿ ಚಿರತೆ ಯುವಕನ ಮೇಲೆ ದಾಳಿ ಮಾಡಿತ್ತು.ಚಿರತೆ ಹಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಸುತ್ತಲಿನ ಗ್ರಾಮಸ್ಥರು ರಾತ್ರಿ ವೇಳೆ ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ.ಅರಣ್ಯ ಇಲಾಖೆ ಕೂಡಲೆ ಗಮನ ವಹಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ತಾಲ್ಲೂಕಿನ ೨-೩ ಪ್ರದೇಶದಲ್ಲಿ ಚಿರತೆ ಕಂಡ ನಿದರ್ಶನ ಬೆಳಕಿಗೆ ಬಂದಿದೆ. ಯುವಕನ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ರಾತ್ರಿ ವೇಳೆ ಸಿಬ್ಬಂದಿಗಳು ಗಸ್ತು ನಡೆಸಿದ್ದರು.ಚಿರತೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪುನಃ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ರಾತ್ರಿ ವೇಳೆ ಗಸ್ತಿನ ವ್ಯವಸ್ಥೆ ಮಾಡಲಾಗುವುದು. ಘಟನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಅಜಯಕುಮಾರ ತಿಳಿಸಿದ್ದಾರೆ.

About the author

Adyot

Leave a Comment