ಆದ್ಯೋತ್ ಸುದ್ದಿನಿಧಿ:
ಮೊಬೈಲ್ ನಿಂದ ದೂರವಾಗಲಿ ಮಕ್ಕಳಷ್ಟೇ ಅಲ್ಲ ಅಪ್ಪ–ಅಮ್ಮಂದಿರೂ ಸಹ..
ಮೊಬೈಲ್ ಅದರಲ್ಲೂ ಈ ಸ್ಮಾರ್ಟ್ ಪೋನ್ ಬಂದ ಮೇಲೆ ಪ್ರತಿಯೊಬ್ಬರೂ ಅದಿಲ್ಲದೇ ಜೀವನವೇ ಇಲ್ಲವೆಂಬ ತೀರ್ಮಾನಕ್ಕೆ ಬಂದಂತಿದೆ. ಮೊಬೈಲ್ ಫೋನ್ ಇಲ್ಲದೆ ಬದುಕುವುದು ಹೇಗೆ ಸಾಧ್ಯ ವೆಂಬ ಪ್ರಶ್ನೆ ಹಾಕುವವರೂ ಇದ್ದಾರೆ. ಜೀವನ ನಡೆಸಲು ಇಂದೀಗ ಅನಿವಾರ್ಯ ಸಾಧನವಾಗಿ ಮಾರ್ಪಟ್ಟಿದೆ. ಹಾಲುಗಲ್ಲದ ಹಸುಳೆಯರಿಂದ ವಯೋವೃದ್ದರ ವರೆಗೆ ಅನಿವಾರ್ಯ ಸಾಧನವಾಗಿಹೋಗಿದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿಯಂತೂ ಈ ಮೊಬೈಲ್ ಗೀಳು ಹೆಚ್ಚುತ್ತಿದ್ದು, ಮಕ್ಕಳು ಊಟ,ತಿಂಡಿ ಸೇವಿಸಲೂ ಸಹ ಬೇಕಂತೆ! ಇಲ್ಲದಿದ್ದರೆ ಊಟವಿಲ್ಲದೆ ಸತ್ತೇಹೋಗುವರೆಂಬ ಮನಸ್ಥಿತಿಗೆ ಬಂದ ಪೋಷಕರ ಚಿಂತೆ ನೋಡಿ ನಗಬೇಕೋ ಅಳಬೇಕೋ ಅರ್ಥವಾಗುತ್ತಿಲ್ಲ.! ಈ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಮಕ್ಕಳ ಮೊಬೈಲ್ ಬಳಕೆ ನಿಷೇಧ ಸಾಧ್ಯವಿಲ್ಲದೇ ಇರಬಹುದು, ಅವರ ಮೊಬೈಲ್ ಬಳಕೆಯ ಅವಧಿಯನ್ನು ಅಂದರೆ ಅವರು ನೋಡುವ ಸ್ಕ್ರೀನ್ ಟೈಮ್ ನಾದರೂ ಕಡಿಮೆ ಮಾಡುವುದು ಒಳಿತು. ಅದೇ ಸಮಯದಲ್ಲಿ ಇತರೆ ಪುಸ್ತಕ ಓದುವುದು, ಹೊರಾಂಗಣ,ಒಳಾಂಗಣ ಆಟಗಳ ಮೂಲಕ ಅಲ್ಲದೇಉತ್ತಮ ವಿಚಾರಗಳ ಕಲಿಕೆಗೆ ಮಕ್ಕಳನ್ನು ಪ್ರೇರೇಪಿಸುವುದು ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ, ಈ ಕೈ ಬಿಡದ ಮೊಬೈಲ್ ಬೇತಾಳ ಮಕ್ಕಳ ಭವಿಷ್ಯದ ಮೇಲೆ ಭಯಾನಕ ಪರಿಣಾಮಗಳನ್ನು ಬೀರುವ ಅಪಾಯವಂತೂ ಸತ್ಯ
ಮೊಬೈಲ್ ಫೋನ್ ಬಳಕೆಯು ಮಾನವನ ಆರೋಗ್ಯದ ಮೇಲೆ ಬೀರುವ ಹತ್ತಾರು ಹಾನಿಕಾರಕ ಪರಿಣಾಮಗಳನ್ನುಂಟು ಮಾಡುತ್ತದೆ, ಇದರಲ್ಲಿ ಹೆಚ್ಚಿದ ಒತ್ತಡಗಳು, ತಲೆನೊವು, ಮತ್ತು ನಿದ್ರಾಹೀನತೆ ಇತ್ಯಾದಿ ಅಸ್ವಸ್ಥತೆಗಳು ಸೇರಿವೆ. ಈ ಅಪಾಯಗಳನ್ನು ಕಡಿಮೆ ಮಾಡುವ ಮತ್ತು ಮೊಬೈಲ್ ಫೋನ್ಗಳ ಬಳಕೆಯೊಂದಿಗೆ ಸಂಬಂಧಿಸಿದ ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸುವ ತಂತ್ರಗಳನ್ನು ಅಳವಡಿಸಿಕೊಳ್ಳಲು ಈ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ಕೇವಲ ಮಕ್ಕಳಿಗಷ್ಟೇ ಅಲ್ಲ ವಯಸ್ಕರರಿಗೂ ಇದು ಕೈ ಬಿಡದ ಭೂತ ವಾಗಿದೆ. ಖಾಸಗಿ, ಸರಕಾರಿ ಉದ್ಯೋಗಸ್ಥರಿಗಂತೂ ಇದರ ಹಂಗು ತೊರೆದರೆ ಸಾಕೆನಿಸಿದೆ. ಆದರೆ ಆನ್ಲೈನ್, ವೆಬ್ ಕಾಷ್ಟ್, ಗೂಗಲ್ ಮೀಟ್, ನಂತಹ ಹತ್ತಾರು ಮೀಟಿಂಗ್ ಗಳು ಇದರ ಮೂಲಕವೇ ನಡೆಯುತ್ತಿದ್ದು ಮೊಬೈಲ್ ಎಂದರೆ ಅನಿವಾರ್ಯ ತಲೆನೋವಾಗಿಬಿಟ್ಟಿದೆ. ನಸುಕಿನಿಂದ ಅರ್ಧ ರಾತ್ರಿಯ ವರೆಗೂ ಬೆಂಬಿಡದ ಭೂತ ದಂತೆ ಹಿಂಸಿಸುತ್ತಿದೆ.
ಈ ಮದ್ಯೆ ತಮ್ಮ ಮಕ್ಕಳು, ಮನೆಯವರ ಬಗ್ಗೆ ಕಾಳಜಿ ವಹಿಸುವುದೂ ಕಡಿಮೆಯಾಗಿದ್ದು ಚಿಕ್ಕ ಪುಟ್ಟ ಮಕ್ಕಳ ಮೇಲೆ ತುಂಬಾ ದುಷ್ಪರಿಣಾಮ ಬೀರಿದ್ದಂತೂ ನಿಜ.
*ಮೊಬೈಲ್ ದೂರವಿಡುವುದು ಹೇಗೆ?*
* ಪಾಲಕರು ಇಂದು ಮೊಬೈಲ್ ಗಳನ್ನು ಕೇವಲ ಕಚೇರಿ ಕೆಲಸಕ್ಕಾಗಿ ಮಾತ್ರ ಬಳಸಿ ಉಳಿದಂತೆ ಖಾಸಗಿ ಬದುಕಿಗೆ ಬಳಸಲೇ ಬಾರದೆಂಬ ನಿರ್ಧಾರಕ್ಕೆ ಬರಬೇಕಿದೆ.
* ಇನ್ನು ಗೃಹಿಣಿಯರು, ಯುವಕ,ಯುವತಿಯರು ವಾಟ್ಸಪ್, ಫೇಸ್ಬುಕ್, ಯೂಟೂಬ್ ರೀಲ್ಸ್ ಇತ್ಯಾದಿಗಳನ್ನು ಕೆಲವು ಸಮಯವಾದರೂ ಬಿಟ್ಟು ವಿರಾಮ ನೀಡಿದರೆ ಉತ್ತಮ.
* ಮಕ್ಕಳು ಶಾಲೆಯಿಂದ ಮನೆಗೆ ಬಂದಮೇಲೆ ಮೊಬೈಲ್ ಕಡ್ಡಾಯವಾಗಿ ಸ್ವಚಾಪ್ ಮಾಡಿ ಮಕ್ಕಳೊಂದಿಗೆ ಮನೆಯಲ್ಲಿ ಆಟ,ಪಾಠ, ಪುಸ್ತಕ,ಪತ್ರಿಕೆ ಓದುವ, ಬರೆಯುವ ಅಜ್ಜಿಅಜ್ಜರೊಂದಿಗೆ ಕಥೆ ಹೇಳುವ ,ಕೇಳುವ ದೇವರ ಭಜನೆ ಇತ್ಯಾದಿ ಕ್ರಿಯೆಯಲ್ಲಿ ತೊಡಗಿದರೆ ಮಕ್ಕಳು ಆರಂಭದಲ್ಲಿ ಬೇಸರ ವ್ಯಕ್ತಪಡಿಸಿದರೂ ಕೂಡ ಕ್ರಮೇಣ ಅಭ್ಯಾಸದಲ್ಲಿ ತೊಡಗುವರು.
* ಕರೋನದ ನಂತರ ಇತ್ತೀಚೆಗೆ ಬಹುತೇಕ ಯಾವ ಶಾಲೆಗಳಲ್ಲೂ ಮೊಬೈಲ್ ಮೂಲಕ ಹೋಮ್ ವರ್ಕ / ಅಭ್ಯಾಸ ಕೆಲಸ ನೀಡುವುದಿಲ್ಲ.
ಅದ್ದರಿಂದ ಮಕ್ಕಳಿಂದ ದಿನದ ಪತ್ರಿಕೆ, ಪಠ್ಯಪುಸ್ತಕಗಳನ್ನು ಓದಿಸಿ ನೇರವಾಗಿ ಹೋಮ್ ವರ್ಕ್ ಮಾಡಿಸಿ ನಂತರ ಸ್ವಲ್ಪ ಹೊತ್ತು ಹೊರಾಂಗಣ, ಅಥವಾ ಒಳಾಂಗಣ ಆಟಗಳಾದ ಚೆಸ್, ಚನ್ನಮಣೆ, ಎತ್ತಕಲ್ಆಟ , ಕೇರಮ್ ಮುಂತಾದ ಒಳಾಂಗಣ ಆಟದಲ್ಲಿ ಮಕ್ಕಳೊಂದಿಗೆತಾವೂ ಪಾಲ್ಗೊಂಡು ಖುಷಿ ಅನುಭವಿಸಬೇಕು.
* ಸಾದ್ಯವಾದರೆ ಅಕ್ಕ ಪಕ್ಕದ ಮನೆಯಕ್ಕಳೊಂದಿಗೆ ಬೆರೆಯಲು ಬಿಡಿ.
* ದುಡಿಯುವ ಪಾಲಕರು ಮನೆಗೆ ಬಂದ ತಕ್ಷಣ ಮೊಬೈಲ್ ಸ್ವಿಚಾಪ್ ಮಾಡಿ ಪ್ರೆಶಪ್ ಅಗಿ ಚಹಾ ಕಾಫಿ ಸೇವಿಸಿ ತಮ್ಮ ಮಕ್ಕಳೊಂದಿಗೆ ಒಂದೆರಡು ತಾಸುಗಳು ಖುಷಿಖುಷಿಯಾಗಿ ಕಾಲಕಳೆಯಿರಿ.
* ಮಕ್ಕಳ ಆಸಕ್ತಿ, ಅವಶ್ಯಕತೆ, ಅನಿಸಿಕೆಗಳನ್ನು ತಾಳ್ಮೆಯಿಂದ ಕೇಳಿ. ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಅವರಿಂದ ಶಾಲೆಯ ಅನುಭವ ಅನಿಸಿಕೆ ಹೇಳಲು ಅವಕಾಶ ನೀಡಿದರೆ ಮೊಬೈಲ್ ಬಳಕೆಯನ್ನು ಸ್ವಲ್ಪ ಮಟ್ಟಿಗಾದರೂ ದೂರಮಾಡಬಹುದು.
ಈ ಮೂಲಕ ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬರಲು ಅಪ್ಪ, ಅಮ್ಮ ಕೂಡ ಕೆಲವು ನಿರ್ದಿಷ್ಟ ಸಮಯದಲ್ಲಿ ಅಂದರೆ ಮಕ್ಕಳು ಮನೆಯಲ್ಲಿ ಇರುವಷ್ಟು ಸಮಯದಲ್ಲಿ ಮೊಬೈಲ್ ತ್ಯಜಿಸಿದರೆ ನಿಮಗೂ ನಿಮ್ಮ ಮಕ್ಕಳಿಗೂ ಒಳಿತು. ಇಲ್ಲದಿದ್ದರೆ ಮಕ್ಕಳು ಮೊಬೈಲ್ ಗೀಳಿನಿಂದ ಮಾನಸಿಕ ಕಾಯಿಲೆಗೆ ತುತ್ತಾವರು.ಇದನ್ನು ಆರಂಭದಲ್ಲೇ ತಡೆಯುವುದು ಅಪ್ಪ ಅಮ್ಮಂದಿರ ಮುಖ್ಯವಾದ ಜವಾಬ್ದಾರಿ…
ಮುಂದಿನ ವಾರ ಇನ್ನೊಂದು ವಿಷಯದತ್ತ….
ಗೋಪಾಲ ಭಾಶಿ.
ಶಿಕ್ಷಕರು , ಸಿದ್ದಾಪುರ ಉ.ಕ.
