ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಹುಲಿಮನೆಯ ರಾಘವೇಂದ್ರ ಕೃಷ್ಣಮೂರ್ತಿ ಹೆಗಡೆಯರಿಗೆ ರಾಷ್ಟ್ರಪತಿ ಪೊಲೀಸ್ ಪದಕ ದೊರೆತಿದ್ದು ಆಗಸ್ಟ 3೦ ರಂದು ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ರಾಜಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಪರಮೇಶ್ವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಘವೇಂದ್ರ ಹೆಗಡೆಯವರು ಪ್ರಸ್ತುತ ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯದಲ್ಲಿದ್ದಾರೆ. ಕಳೆದ 24 ವರ್ಷಗಳ ಹಿಂದೆ ಸೇವೆಗೆ ಸೇರಿದ ಇವರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಪದೋನ್ನತಿ ಹೊಂದಿ ಕಳೆದ ಕೆಲವು ವರ್ಷಗಳಿಂದ ಎಸ್‌ಪಿಯಾಗಿ ಕರ್ತವ್ಯದಲ್ಲಿದ್ದಾರೆ.

ವಿಶೇಷವೆಂದರೆ ರಾಘವೇಂದ್ರ ಹೆಗಡೆಯವರು ರಂಗಭೂಮಿಯ ದಂತಕಥೆಯೆನಿಸಿದ, ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದರಿಂದ ಪ್ರಶಸ್ತಿ ಪಡೆದ ಹುಲಿಮನೆ ಸೀತಾರಾಮ ಶಾಸ್ತಿç ಅವರ ಕುಟುಂಬದ ಕುಡಿ. ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ಹೆಗಡೆಯವರಿಗೆ ರಾಷ್ಟ್ರಪತಿ ಪೊಲೀಸ್ ಪದಕ ದೊರೆತಿರುವ ಕುರಿತು ಅನೇಕ ಗಣ್ಯರು ಸಂತಸ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

