
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶ್ರೀಮನ್ನೆಲೆಮಾವು ಮಠದಲ್ಲಿ ಹವ್ಯಕಮಹಾಸಭಾವತಿಯಿಂದ ಚಾತುರ್ಮಾಸ್ಯದ ಭಿಕ್ಷಾ ಹಾಗೂ ಇತರ ಸೇವೆಗಳನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ,ಒಳ್ಳೆಯ ಕೆಲಸ ಮಾಡುವುದರ ಮೂಲಕ ಧರ್ಮ ಮಾರ್ಗದಲ್ಲಿ ನಡೆದರೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಚಾತುರ್ಮಾಸ್ಯ ಸಮಯದಲ್ಲಿ ಮಠಮಾನ್ಯಗಳ ದರ್ಶನ ಮಾಡುವುದು ಕಾಶಿಯಲ್ಲಿ ಗಂಗಾಸ್ನಾನ ಮಾಡಿದ ಪುಣ್ಯ ಬರುತ್ತದೆ. ಈ ಸಮಯದಲ್ಲಿ ಮಠಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಮನುಷ್ಯಜನ್ಮದ ಸಾರ್ಥಕವಾಗುತ್ತದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಾವು ಯಾವುದನ್ನು ಬಿಡಬೇಕೋ ಅದನ್ನು ಬಿಡದೆ ಬದುಕಿನ ಜಂಜಾಟದಲ್ಲಿ ಮುಳುಗಿದ್ದೆವೆ ನಮ್ಮ ಸಂಸ್ಕೃತಿ,ಪರಂಪರೆ ನಶಿಸುತ್ತಿದ್ದು ನಮ್ಮ ನಿತ್ಯನೈಮಿತ್ತಿಕ ಕಾರ್ಯಗಳನ್ನು ನಾವು ಬಿಡುತ್ತಿದ್ದೆವೆ ಎಷ್ಟೇ ಆಧುನಿಕತೆಗೆ ನಾವು ಒಗ್ಗಿಕೊಂಡರೂ ನಮ್ಮ ಸಂಸ್ಕೃತಿ ಹಾಗೂ ಶ್ರೇಷ್ಠತೆಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು.ಕಾಲಕ್ಕೆ ತಕ್ಕಂತೆ ಬದಲಾಗುವುದರ ಜೊತೆಗೆ ನಮ್ಮ ಪರಂಪರೆಯನ್ನು ಅಳವಡಿಸಿಕೊಂಡು ಮುಂದುವರಿಯಬೇಕು. ಹಳ್ಳಿಗಳು ವೃದ್ಧಾಶ್ರಮವಾಗುತ್ತಿದೆ. ಯುವಕರು ಜೀವನ ನಿರ್ವಹಣೆಗೆ ಪಟ್ಟಣಕ್ಕೆ ಹೋದರು ತಮ್ಮ ಪೂರ್ವಾಶ್ರವನ್ನು ಮರೆಯದೆ ಕಾಪಾಡಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ಅಖಿಲಾ ಹವ್ಯಕ ಮಹಾಸಭಾದ ಪ್ರಮುಖರಾದ ಪ್ರಶಾಂತ ಭಟ್ಟ,ನರಹರಿರಾವ್,ಜಿ.ಎಂ.ಭಟ್ಟ,ಆರ್.ಎಸ್.ಹೆಗಡೆ,ಶಶಾAಕ ಹೆಗಡೆ,ಎನ್.ವಿ.ಹೆಗಡೆ ಮುತ್ತಿಗೆ,ನಿತಿನ್ ಹೆಗಡೆ,ಶಂಕರ ಹೆಗಡೆ ಶಿರಸಿ,ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಮುಂತಾದವರು ಉಪಸ್ಥಿತರಿದ್ದರು.
