ಆದ್ಯೋತ್: “ಆಪ್ತ ಸಮಾಲೋಚನೆ”

ಆದ್ಯೋತ್ ಸುದ್ದಿನಿಧಿ:
ಹಿಂದಿನ ಸಂಚಿಕೆಯಲ್ಲಿ ಕಲಿಕಾ ಅಸಮಥ೯ತೆಗಳಾದ ಡಿಸ್ಲೆಕ್ಸಿಯಾ (dislexia), ಡಿಸ್ಗ್ರಾಪಿಯಾ (disgraphia) ಬಗ್ಗೆ ತಿಳಿದುಕೊಂಡಿದ್ದೆವೆ. ಇಂದು ಅದರ ಮುಂದುವರಿದ ಅಸಮಥ೯ತೆಗಳಾದ ಡಿಸ್ಕ್ಯಾಲ್ಕುಲಿಯಾ (dyscalculia) ಮತ್ತು ಡಿಸ್ಪ್ರಾಕ್ಸಿಯಾ (dyspraxia) ಎರಡು ಸಹ ಪರಸ್ಪರ ಹೋಲಿಕೆಗಳಿರುವಂತದ್ದು, ಹಾಗೆಯೇ ಒಂದು ವಿಷಯವನ್ನು ಗಮನಿಸುತ್ತಾ ಬಂದರೆ ಕಲಿಕಾ ಅಸಮಥ೯ತೆಗಳು ಒಂದಕ್ಕೊಂದು ಜೋಡಣೆಯಾಗಿವೆ. ಬಹಳಷ್ಟು ಕಾರಣ, ಪ್ರಕಾರಗಳು, ಉದ್ಭವಿಸಲು ಪ್ರಮುಖವಾದ ಅಂಶಗಳು ಒಂದಕ್ಕೊಂದು ಸಂಬಂಧವಿದ್ದು ಮುಂದುವರಿದ ಭಾಗವಾಗಿ ತೋರುತ್ತದೆ. ಆದ್ದರಿಂದ ಗೊಂದಲ ಪಟ್ಟುಕೊಳ್ಳದೆ ಅರಿತರೆ ಉತ್ತಮ ರೀತಿಯಲ್ಲಿ ಅರ್ಥೈಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು.
ಡಿಸ್ಕ್ಯಾಲ್ಕುಲಿಯಾ (dyscalculia) – ಇದೊಂದು ಗಣಿತ ಕಲಿಕೆಯ ಅಸಮಥ೯ತೆ
ಡಿಸ್ಪ್ರಾಕ್ಸಿಯಾ (dyspraxia) – ಇದು ಚಲನೆ ಮತ್ತು ಸಂಯೋಜನೆಯಲ್ಲಿ ತೊಂದರೆ.
ಡಿಸ್ಕ್ಯಾಲ್ಕುಲಿಯಾ (dyscalculia)
ಇದೊಂದು ಗಣಿತ ಕಲಿಕೆಯ ಅಸಮಥ೯ತೆಯಾಗಿದ್ದು ಸಂಖ್ಯೆಗಳ ಅರಿವು, ಗಣಿತ ಚಿಹ್ನೆಗಳು ಮತ್ತು ಗಣಿತದ ತತ್ವಗಳು, ಸಿದ್ಧಾಂತವನ್ನು ಅರಿಯುವಲ್ಲಿ ವಿಫಲವಾಗುವುದು.
ಡಿಸ್ಕ್ಯಾಲ್ಕುಲಿಯಾ (dyscalculia) ಮುಖ್ಯ ಲಕ್ಷಣಗಳು :ಸಂಖ್ಯೆಗಳನ್ನು ಗುರುತಿಸುವುದರಲ್ಲಿ ಕಷ್ಟ ಪಡುವುದು (1,2,3,4,5,6…)
ಕೂಡಿಸುವುದು, ಕಳೆಯುವುದು, ವ್ಯತ್ಯಾಸ, ಗುಣಾಕಾರ, ಭಾಗಾಕಾರಗಳಲ್ಲಿ ತೊಂದರೆ ಪಡುವುದು (+, -, /, *, %, ^)
ಸಮಯವನ್ನು ನೋಡಿ ಹೇಳುವುದು, ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟ.
ಗಣಿತದ ಮೂಲ ತತ್ವಗಳನ್ನು ನೆನಪಿಡಲು, ಗಣಿತದ ವಿಷಯ ಬಂದಾಗ ಭಯ ಅಥವಾ ಆತಂಕ ಪಡುವುದು ಇದರ ಲಕ್ಷಣಗಳು.
ಡಿಸ್ಕ್ಯಾಲ್ಕುಲಿಯಾ (dyscalculia) ಕಾರಣಗಳು :-
ಅನುವಂಶಿಕತೆ (genetics)
ಮೆದುಳಿನ ರಚನಾ ಕ್ರಮದಲ್ಲಿ ವ್ಯತ್ಯಾಸವಿರುವುದು (ನೆನಪು ಹಾಗು ಲೆಕ್ಕಗಳನ್ನು ನಿಭಾಯಿಸುವ ರಚನಾ ಭಾಗದಲ್ಲಿ)
ಡಿಸ್ಕ್ಯಾಲ್ಕುಲಿಯಾ (dyscalculia) ಸಹಾಯ ಕ್ರಮಗಳು ಹಂತ ಹಂತವಾಗಿ ಕಲಿಸುವುದು
ದೃಶ್ಯ ಸಹಾಯಕಗಳ ನೆರವು (charts, pictures, diagrams)
ನಿತ್ಯ ಜೀವನದ ಉದಾಹರಣೆಗಳ ಮೂಲಕ ಕಲಿಸುವುದು (ಖರೀದಿ, ಅಳತೆ ಮಾಡುವುದು ಇತ್ಯಾದಿ)
ಮಕ್ಕಳಿಗೆ ಆತ್ಮವಿಶ್ವಾಸ ಬೆಳೆಸುವುದು
ಡಿಸ್ಪ್ರಾಕ್ಸಿಯಾ (dyspraxia)
ಡಿಸ್ಪ್ರಾಕ್ಸಿಯಾ (dyspraxia) ಎಂದರೆ ಚಲನೆಯೆಂಬ ಅರ್ಥ, ದೈಹಿಕ ಚಟುವಟಿಕೆಗಳಲ್ಲಿ, ಸಂಯೋಜನೆಗಳಲ್ಲಿ, ಚಲನ-ವಲನಗಳಲ್ಲಿ ಉಂಟಾಗುವ ತೊಂದರೆ ಇದಾಗಿದೆ. ಇದು ಯಾವುದೇ ರೀತಿಯ ಬುದ್ಧಿಮಟ್ಟಕ್ಕೆ ಸಂಬಂಧಪಡುವುದಿಲ್ಲ, ಆದರೆ ಇದು ಬುದ್ಧಿಮಟ್ಟದ ಗತಿಯನ್ನು ಕುಂಟಿತಗೊಳಿಸುತ್ತದೆ.
ಡಿಸ್ಪ್ರಾಕ್ಸಿಯಾ (dyspraxia) ಮುಖ್ಯ ಲಕ್ಷಣಗಳು :-
ಕೈ ಕಸರತ್ತುಗಳಲ್ಲಿ ಅಸಮಥ೯ತೆ (ಬರೆಯುವುದು, ಕತ್ತರಿ ಬಳಸುವುದು, ಬಟ್ಟೆ ಬಟನ್ ಹಾಕುವುದು, ದಿನನಿತ್ಯದ ಕೆಲಸದಲ್ಲಿ ತೊಂದರೆ)
ಕ್ರೀಡೆ ಅಥವಾ ಆಟಗಳಲ್ಲಿ ಕಷ್ಟ (ಚೆಂಡು ಹಿಡಿಯುವುದು, ಸೈಕಲ್ ಓಡಿಸುವುದು)
ಸಮತೋಲನ ಕಳೆದುಕೊಳ್ಳುವುದು, ಒದ್ದಾಡುವುದು
ದಿನನಿತ್ಯದ ಚಟುವಟಿಕೆಗಳು ಕಲಿಯಲು ನಿಧಾನ (ಶೂಲೇಸ್ ಕಟ್ಟುವುದು, ಬಟ್ಟೆ ಹಾಕುವುದು ಇತ್ಯಾದಿ)
ಡಿಸ್ಪ್ರಾಕ್ಸಿಯಾ (dyspraxia) ಕಾರಣಗಳು :-
ಮೆದುಳಿನ ಬೆಳವಣಿಗೆಯಲ್ಲಿ ಕುಂಟಿತವಾಗಿ, ಅದರ ಪರಿಣಾಮದಿಂದ ಚಲನೆ-ವಲನೆಯಲ್ಲಿ ತೊಂದರೆಯಾಗುವುದು. ಆದರೆ ಇದು ಕಡಿಮೆ ಬುದ್ಧಿಮಟ್ಟದ ಪರಿಣಾಮದಿಂದ ಅಲ್ಲ.
ಡಿಸ್ಪ್ರಾಕ್ಸಿಯಾ (dyspraxia) ಸಹಾಯ ಕ್ರಮಗಳು :-
ಉದ್ಯೋಗ ಚಿಕಿತ್ಸೆ (occupational therapy) ಮೂಲಕ ದಿನನಿತ್ಯದ ಕೌಶಲ್ಯಗಳನ್ನು ಅಭ್ಯಾಸ ಮಾಡಿಸುವುದು
ದೈಹಿಕ ಚಿಕಿತ್ಸೆ (physiotherapy) ಮೂಲಕ ಶಕ್ತಿ ಮತ್ತು ಸಮತೋಲನ ಬೆಳೆಸುವುದು
ಸಹನೆ ಹಾಗು ಹಂತ ಹಂತವಾಗಿ ಕಲಿಸುವ ವಿಧಾನ
ಮಕ್ಕಳಿಗೆ ವಿಶೇಷ ಸಾಧನಗಳು (ಪೆನ್ನಿಗೆ ವಿಶೇಷ ಹಿಡಿಕೆ, ಸರಳ ಉಪಕರಣ ನೀಡುವುದು)
ಮಕ್ಕಳಲ್ಲಿ ಈ ರೀತಿಯ ತೊಂದರೆಗಳು ಬಹು ಪರಿಣಾಮ ಬೀರುತ್ತವೆ. ಪೋಷಕರು ಮಕ್ಕಳು ಒಂದೆರಡು ದಿನ ಓದುತ್ತಿಲ್ಲ, ಬರೆಯುತ್ತಿಲ್ಲ ಎಂದು ತಿಳಿಸಲಾದ ಲಕ್ಷಣಗಳಿವೆ ಎಂದು ಭಾವಿಸಿ ಆತಂಕ ಪಡುವುದನ್ನು ಬಿಟ್ಟು ಸ್ವಲ್ಪ ದಿನ, ಸ್ವಲ್ಪ ಸಮಯ ಕಾದು, ಪೂರ್ಣ ಪ್ರಮಾಣದಲ್ಲಿ ಗಮನಿಸಿದ ಮೇಲೆಯೇ ಚಿಕಿತ್ಸೆಯ ಅವಶ್ಯಕತೆ ಇದ್ದರೆ ನೀಡಬೇಕು. ಒಂದೆರಡು ದಿನದಲ್ಲಿ ನಿರ್ಣಾಯಕ ಹಂತಕ್ಕೆ ಬರಬಾರದು.
ಮುಂದಿನ ಸಂಚಿಕೆಯಲ್ಲಿ ADHD (ಗಮನ ಮತ್ತು ಅತಿ ಚುರುಕುತನದ ಅಸಮಥ೯ತೆ) ಬಗ್ಗೆ ಅರಿಯೋಣ.
ಧನುಷ್‌ ಭಟ್ ಹೊಸೂರು
9945266006.

About the author

Adyot

Leave a Comment