ಆದ್ಯೋತ್ ಸುದ್ದಿನಿಧಿ:
ಕಲಿಕಾ ಅಸಮಥ೯ತೆಗಳು ಅದರ ಗುಣ ಲಕ್ಷಣಗಳ ಬಗ್ಗೆ ಸುಧಿಘ೯ ಸಂಚಿಕೆಯೊಂದಿಗೆ ಮುಕ್ತಾಯವಾಗಿದ್ದು ಅದರ ಬಗ್ಗೆ ಸಂಪೂಣ೯ ಅರಿವಿದೆ ಎಂದು ಭಾವಿಸುತ್ತೆನೆ . ಹಾಗಿದ್ದರೆ ನೀವು ಗಮನಿಸಿರಬಹುದು ಮಕ್ಕಳ ಮೆದುಳಿನ ರಚನೆಗೆ ಅಡಚಣೆ ಉಂಟಾದಾಗ ಆಗುವ ಸಮಸ್ಯೆಗಳಲ್ಲಿ ಕಲಿಕಾ ಅಸಮಥ೯ತೆಗಳು ಕೂಡ ಒಂದು ಭಾಗ .ಹಾಗಿದ್ದರೆ ಮೂಲ ಕಾರಣವಾದ ಮೆದುಳಿನ ರಚನಾ ಕ್ರಮದ ಅಡಚಣೆ ಹಾಗೂ ಕಾರಣಗಳನ್ನು ತಿಳಿಯೊಣ.

ಜಿವನದ ಒಂದು ಘಟ್ಟ ಶಿಕ್ಷಣವಾದರೆ ಮನೆಯವರೆಲ್ಲಾ ಸಂಭ್ರಮಿಸಿ,ಹರಸಿ, ಖುಷಿ ಪಡುವ ದಿನವೆಂದರೆ ಮದುವೆ. ದಾಂಪತ್ಯ, ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಇದರಲ್ಲಿ ಜಿವನದ ಬಹುಪಾಲು ಆಸ್ತಿ,ಅಂತಸ್ತು, ಹಣವನ್ನೆಲ್ಲಾ ವ್ಯಯ ಮಾಡಿ ಅದ್ಧೂರಿಯಿಂದ ಸಂಭ್ರಮದಿಂದ ಕುಟುಂಬದವರೆಲ್ಲಾ ಒಂದುಗೂಡಿ ಆಚರಿಸುವ ಹಬ್ಬದ ರೀತಿಯಲ್ಲಿ ನಡೆಯುವ ಕಾಯ೯ಕ್ರಮ. ಇತ್ತಿಚಿನ ದಿನಗಳಲ್ಲಿ ಸಮಾಜದ ತೊಪ೯ಡಿಕೆಗೆ ಹಾಗು 4 ಜನರ ಆಶಿ೯ವಾದಕ್ಕಿಂತ ಹೊಟ್ಟೆ ಉರಿಸಲು ನಾಲ್ಕು ಜನ ಮಾತನಾಡಲಿ ಎಂಬ ಭರದಲ್ಲಿ ಮಾಡುವ ಮದುವೆಗಳೇ ಹೆಚ್ಚು. ಆದರೆ ಆಡಂಭರಕ್ಕಿಂತ ಆಶೀರ್ವಾದವೇ ಮಹತ್ವದ್ದು ಎಂಬುದು ನನ್ನ ಅಭಿಪ್ರಾಯ. ಬಿಡಿ ಅವರವರ ವಿವೇಚನೆ ಹಾಗು ಜೀವನ ಶೈಲಿಗೆ ಬಿಟ್ಟಿದ್ದು. ಮದುವೆಗು ಮೆದುಳಿನ ರಚನಾ ಕ್ರಮಕ್ಕೂ ಕಾರಣ ಇದೆಯಾ ? ಏನು ಸಂಬಂಧ ಎನ್ನುವುದಕ್ಕೆ ಕಾರಣ ಕೂಡ ಇದೆ.
ವೈವಾಹಿಕ ಜೀವನ ಗಂಡು ಹೆಣ್ಣಿನ ಸಮ್ಮಿಲನ ಹಾಗೂ ವಿಜ್ಞಾನದ ಪ್ರಕಾರ ಗರ್ಭಧಾರಣೆ (Pregnancy): ಮಗು ಹುಟ್ಟೋ ಪ್ರಕ್ರಿಯೆ ಗರ್ಭಧಾರಣೆಯಿಂದ ಆರಂಭವಾಗುತ್ತದೆ. ಪುರುಷನ ಶುಕ್ರಾಣು (sperm) ಹಾಗು ಮಹಿಳೆಯ ಅಂಡಾಣು (egg) ಸೇರಿ ನಿರ್ಭೀಜನ (fertilization) ಕ್ರಿಯೆಯು ಪ್ರಾರಂಭವಾಗುತ್ತದೆ. ಇದರಿಂದ zygote ಎಂಬ ಹೊಸ ಜೀವಕೋಶ ಉತ್ಪತ್ತಿಯಾಗುತ್ತದೆ , zygote ಗರ್ಭಾಶಯದಲ್ಲಿ ನೆಲೆಸುತ್ತದೆ ಮತ್ತು ಬೆಳೆಯಲು ಆರಂಭವಾಗಿ ಬೆಳವಣಿಗೆಯು ಸುಮಾರು 9 ತಿಂಗಳು (280 ದಿನ)ತನಕ ನಡೆಯುತ್ತದೆ. ಈ ಅವಧಿಯಲ್ಲಿ zygote → embryo → foetus ಆಗಿ ಬೆಳೆಯುತ್ತದೆ. ಮಗು ತಾಯಿ ಗರ್ಭದಲ್ಲೇ ಎಲ್ಲಾ ಅಂಗಾಂಗಗಳನ್ನು ಬೆಳವಣಿಗೆಯಾಗಿ ಮೊದಲ 3 ತಿಂಗಳು ಹೃದಯ, ಮಿದುಳು, ಕೈ-ಕಾಲುಗಳ ಶಿಲುಬು. 4 ರಿಂದ 6 ತಿಂಗಳು ಚಲನೆ, ಮೂತ್ರಪಿಂಡ, ಕಣ್ಣು, ಕಿವಿಗಳ ಬೆಳವಣಿಗೆ 7 ರಿಂದ 9 ತಿಂಗಳು ಶರೀರ ಸಂಪೂರ್ಣವಾಗಿ ಬೆಳೆದು, ಮಗು ಜನನಕ್ಕೆ ತಯಾರಾಗುತ್ತದೆ. 9ನೇ ತಿಂಗಳ ಕೊನೆಯ ಭಾಗದಲ್ಲಿ, ಗರ್ಭಾಶಯದ ತಳಭಾಗದಲ್ಲಿ ಬಲವಾಗಿ ಸಂಕೋಚನೆಗಳು (contractions) ಆರಂಭವಾಗುತ್ತವೆ. ತಾಯಿಗೆ ವೇದನೆ ಆರಂಭವಾಗಿ ಅದನ್ನು ಲೇಬರ್ ಪೈನ್ (labour pain) ಎಂದು ಕರೆಯುತ್ತಾರೆ.ಗರ್ಭದ್ವಾರವಾದ (cervix) ಹರಿದು, ಮಗು ಹೊರಗೆ ಬರುವ ಮಾರ್ಗ ತೆರೆದುಕೊಂಡು (birth canal) ಮೂಲಕ ಹೊರಗೆ ಬರುತ್ತದೆ. ಮಗು ಹೊರ ಬಂದ ನಂತರ ಅದನ್ನು ಸುತ್ತುವರೆದ ಪದರವನ್ನು ನಾಲುಗುಂಡಿ (placenta) ಮೂಲಕ ಹೊರಗೆ ಬರುತ್ತದೆ. ಇದರಲ್ಲಿ ಮುಖ್ಯವಾಗಿ ಗಭ೯ದಾರಣೆ ಭಾಗದಲ್ಲಿ ಗಮನ ಹರಿಸಬೇಕು . ಇತ್ತಿಚಿನ ದಿನಗಳಲ್ಲಿ ಮದುವೆಯಾದ ಹೊಸ ಜೋಡಿಗಳು ತಾಳಿ ಕಟ್ಟಿದ ಮರುಕ್ಷಣವೆ ಒಂದು ಒಪ್ಪಂದಕ್ಕೆ ಬರುತ್ತಾರೆ , ಮದುವೆಯಾದ 2-3 ವಷ೯ ಗಭ೯ಧಾರಣೆ ಬೇಡ ಸುಖವಾಗಿ ,ಸಂತೋಷದಿಂದ ಹಲವಾರು ದೇಶ ಸುತ್ತಾಡಬೇಕು ಎಂಬೆಲ್ಲಾ ಆಸೆಗಳನ್ನಿಟ್ಟುಕೊಂಡು ತಮ್ಮ ಆರೋಗ್ಯವನ್ನು ಹಾಳು ಮಾಡಿಕೋಳ್ಳುತ್ತಿದ್ದಾರೆ. 2-3 ವಷ೯ ಗಭ೯ವನ್ನು ಹೊಂದದಿರುವ ಉಪಾಯ ಒಳ್ಳೆಯದೆ ಆದರೂ ಆ 2 ರಿಂದ 3 ವಷ೯ ಆರೋಗ್ಯದ ಮೇಲೆ ಕಾಳಜಿ ಹಾಗು ಶಿಸ್ತಿನ ಆಹಾರ ಪದ್ಧತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಗಭ೯ಧರಿಸಿದ ನಂತರ ಮಗುವಿನ ಆರೋಗ್ಯವು ಉತ್ತಮವಾಗಿ ಬೇಳೆಯುವುದು ಅದನ್ನು ಬಿಟ್ಟು ಹೊರಗಿನ ತಿಂಡಿಗಳನ್ನು ಅತಿಯಾಗಿ ತಿನ್ನುವುದರಿಂದ,ಕರಿದ ವಸ್ತುವನ್ನು ಅತಿಯಾಗಿ ಸೇವಿಸುವುದರಿಂದ,ಮದ್ಯಪಾನ,ಧೂಮಪಾನ ಮಾಡುವುದರಿಂದ ,ಡ್ರಗ್ಸ ಹಾಗೂ ಗಾಂಜಾದಂತಹ ಮಾದಕವಸ್ತುವಿನ ಸೇವನೆಯಿಂದ ನವ ಜೋಡಿಯ ಆರೋಗ್ಯವು ಹದಗೆಡವುದಲ್ಲದೆ ಮುಂದೆ ಮಗುವಿಗು ಪರಿಣಾಮವನ್ನು ಬೀರುತ್ತದೆ. ವ್ಯಸನಗಳಿಂದ ಪುರುಷರ ಶುಕ್ರಾಣು ಹಾಗು ಮಹಿಳೆಯ ಅಂಡಾಣುವಿನಲ್ಲಿ ಯಾವುದೆ ರೀತಿಯ ಶಕ್ತಿ ಇರದೆ ಮಗುವಿಗೆ ಸರಿಯಾದ ಪೋಷಕಾಂಶಗಳು , ವಿಟಮಿನ್ ಹಾಗೂ ಉತ್ತಮ ರಕ್ತದ ಪೂರೈಕೆಯಾಗದೆ ಮಗುವು ಬೆಳವಣಿಗೆಯಲ್ಲಿ ಕುಂಟಿತಗೊಂಡು ಮುಂದೆ ವಿಷೇಶ ಚೇತನರಾಗಿ ಹುಟ್ಟುವ ಸಾದ್ಯತೆಗಳು, ಗಭ೯ಪಾತವಾಗುವ ಸಂಭವಗಳು ಜಾಸ್ತಿ ಇರುತ್ತವೆ .ಇದರ ಹೋರತಾಗಿಯೂ ಮಾನಸಿಕ ಒತ್ತಡ,ಹಿಂಸೆ,ನಿರಂತರ ಒತ್ತಡದ ಕೆಲಸಗಳು,ದುಃಖ,ನಿಲ೯ಕ್ಷ , ಆತಂಕಗೊಳ್ಳುವುದು,ಸುತ್ತ ಮುತ್ತಲಿನ ವಾತಾವರಣಗಳು ಗಭಿ೯ಣಿಯ ಮೇಲೆ ಹಾಗು ಜನಿಸಲಿರುವ ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.

ದೇಹದಲ್ಲಿರುವ 46 ಕ್ರೋಮೋಜೊಮುಗಳಲ್ಲಿ 23 ತಂದೆಯದ್ದು 23 ತಾಯಿದದ್ದಾಗಿದ್ದು 1 ಜೋಡಿ ಲೈಂಗಿಕ ಕ್ರೋಮೋಜೊಮುಗಳನ್ನು ( gender) ಲಿಂಗವನ್ನು ನಿಧ೯ರಿಸುತ್ತದೆ ( xx – ಮಹಿಳೆ , xy -ಪುರುಷ)̧ ಕ್ರೋಮೋಜೊಮುಗಳ ವ್ಯತ್ಯಾಸಗಳಿಂದ ಕೆಲವೊಂದು ರೋಗಗಳು ಮಗುವಿಗೆ ಕಾಣಿಸಿಕೋಳ್ಳುತ್ತದೆ. ಹಾಗು ರಕ್ತ ಸಂಬಂಧದಲ್ಲಿ ಮದುವೆಯನ್ನು ಮಾಡುವುದರಿಂದ ಕೂಡ ಮಕ್ಕಳ ಬೆಳವಣಿಗೆಯಲ್ಲಿ ತೊಂದರೆಗಳು ಉಂಟಾಗುತ್ತದೆ.
ಇದರಿಂದ ಪೋಷಕರ ಆರೋಗ್ಯವು ತುಂಬಾ ಮುಖ್ಯ , ಕೆಲವೊಂದು ನಿಲ೯ಕ್ಷಗಳಿಂದ ಮುಂದೆ ಜನಿಸುವ ಮಗುವಿನ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುವ ಮೋದಲು ಎಚ್ಚೆತ್ತುಕೊಂಡು ಆರೋಗ್ಯದ ಬಗ್ಗೆ ಗಮನಹರಿಸಿದರೆ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗಳಲ್ಲಿ ಯಾವುದೆ ದೋಷವಿಲ್ಲದೆ ಪೂಣ೯ ಪ್ರಮಾಣದಲ್ಲಿ ಉತ್ತಮ ದೈಹಿಕ ಹಾಗು ಮಾನಸಿಕವಾಗಿ ಸದೃಡಗೋಳ್ಳುತ್ತದೆ.
ಮುಂದಿನ ಭಾಗಗಳಲ್ಲಿ ಮಗುವಿನ ಬೆಳವಣಿಗೆಯಲ್ಲಿ ಕುಂಟಿತವಾದರೆ , ವ್ಯತ್ಯಾಸವಾದರೆ ಸಂಭವಿಸುವ ಪರಿಣಾಮಗಳ ಬಗ್ಗೆ ಅರಿಯೊಣ
ಧನುಷ ಭಟ್
9945266006
