
ಆದ್ಯೋತ್ ಸುದ್ದಿನಿಧಿ:
ಮಕ್ಕಳ ಏಳ್ಗೆಗೆ ಅಥವಾ ಮಕ್ಕಳ ಭವಿಷ್ಯದ ಶ್ರೇಯಸ್ಸಿನಲ್ಲಿ ಬಹುಪಾಲು ಪೋಷಕರ ಪಾತ್ರ ಬಹು ಮುಖ್ಯವಾದದ್ದು . ಮಕ್ಕಳ ಪ್ರತಿ ಹೆಜ್ಜೆಯಲ್ಲೂ ಪೋಷಕರು ಬೆಂಗಾವಲಾಗಿ ನಿಲ್ಲುತ್ತಾರೆ ತಮ್ಮ ಜೀವನದ ಕನಸು ಆಸೆಗಳನ್ನು ಮಕ್ಕಳ ಯಶಸ್ಸಿನಲ್ಲಿ ಕಾಣುತ್ತಾರೆ.ತಮ್ಮ ಜೀವನವನ್ನೆ ಮುಡುಪಾಗಿಟ್ಟು ಹಗಲಿರುಳೆನ್ನದೆ ದುಡಿಯುತ್ತಾರೆ.ಇಷ್ಟೆಲ್ಲಾ ಮಾಡುವ ಪೋಷಕರು ಕೆಲವೊಮ್ಮೆ ಮಕ್ಕಳ ದೈಹಿಕ ನ್ಯೂನ್ಯತೆಗೆ ,ಬೆಳವಣಿಗೆ ಕುಂಟಿತವಾಗಲು ಕಾರಣವಾಗುತ್ತಾರೆ. ಹಾಗಿದ್ದರೆ ಪೋಷಕರ ನಿಲ೯ಕ್ಷದಿಂದ,ಬೇಜವಬ್ಧಾರಿಯಿಂದ ಉಂಟಾಗುವ ಪರಿಣಾಮವನ್ನು ಅರಿಯೊಣ
Cerebral Palsy
ಮಸ್ತಿಷ್ಕಪಾಳು Cerebral Palsy
ಮಸ್ತಿಷ್ಕ ಪಾಳು (ಸೆರಿಬ್ರಲ್ ಪಾಲ್ಸಿ) ನ್ಯೂರೋಲಾಜಿಕಲ್ ಅಸ್ವಸ್ಥತೆಯಾಗಿದ್ದು,ಇದು ಮಗುವಿನ ಚಲನೆ(moment) ಸ್ಥಿತಿ (posture), ಹಾಗೂ ಸ್ನಾಯುಗಳ ನಿಯಂತ್ರಣಗಳನ್ನು ಹಾನಿಯುಂಟು ಮಾಡುವುದಲ್ಲದೆ ಸಾಮಾನ್ಯವಾಗಿ ಇದು ಜನನದ ಮೊದಲು, ಜನನದ ಸಮಯದಲ್ಲಿ ಅಥವಾ ಬಾಲ್ಯದಲ್ಲೆ ಕಾಣಿಸಿಕೊಳ್ಳುತ್ತದೆ. ಇದರ ಮುಖ್ಯ ಕಾರಣ ಮಗು ಬೆಳೆಯುವಾಗ ಅಥವಾ ಜನನ ಸಮಯದಲ್ಲಿ ಮೆದುಳಿಗೆ ಹಾನಿಯಾಗುವುದು, ತೊಂದರೆಯಾಗುವುದು.
ಮಸ್ತಿಷ್ಕಪಾಳು Cerebral Palsy ಕಾರಣಗಳು (Causes)
1. ಜನನದ ಮೊದಲು (Prenatal causes)
*ಮೆದುಳಿನ ಅಸಾಮಾನ್ಯ ಬೆಳವಣಿಗೆಯಾಗುವುದು
* ತಾಯಿಗೆ ಬರುವ ಸೋಂಕುಗಳು (ರೂಬೆಲ್ಲಾ, ಟೊಕ್ಸೋಪ್ಲಾಸ್ಮೋಸಿಸ್)
* ಗರ್ಭದಲ್ಲಿ ಶಿಶುವಿಗೆ ಆಮ್ಲಜನಕದ ಕೊರತೆಯುಂಟಾಗುವುದು
* ಜನ್ಯ ವೈಶಿಷ್ಟ್ಯತೆಯಿಂದ (Genetic mutations)
2. ಜನನದ ಸಮಯದಲ್ಲಿ (Perinatal causes)
*ಅವಧಿಗೆ ಮುಂಚೆಯೇ ಜನನ (Premature birth) ,೭ಅಥವಾ ೮ ತಿಂಗಳಿಗೆ ಜನನವಾಗುವುದು
*ಜನನ ಸಮಯದ ಅಡಚಣೆಗಳಿಂದ ಮೆದುಳಿಗೆ ಆಮ್ಲಜನಕದ ಕೊರತೆ
* ಮಗುವಿನ ತೂಕ ಕಡಿಮೆ ಇರುವುದು
3. ಜನನದ ನಂತರ (Postnatal causes)
*ಮೆದುಳಿನ ಉಂಟಾಗುವ ಸೋಂಕುಗಳು (ಮೆನಿಂಜಿಟಿಸ್, ಎನ್ಸೆಫಲಿಟಿಸ್)
*ತಲೆಗೆ ಪೆಟ್ಟು ಬೀಳುವುದು
*ತೀವ್ರ ಪಿತ್ತ (Severe jaundice) ಕಾಣಿಸಿಕೊಳ್ಳುವುದು
ಮಸ್ತಿಷ್ಕ ಪಾಳು (Cerebral Palsy)ಲಕ್ಷಣಗಳು (Symptoms);-
ಸ್ನಾಯು/ಚಲನೆ ಸಂಬಂಧಿತ ಲಕ್ಷಣಗಳು(motor symptoms);-
* ಸ್ನಾಯುಗಳು ಗಟ್ಟಿಯಾಗಿ ಅಥವಾ ತುಂಬಾ ಸಡಿಲವಾಗಿ ಇರುವುದು
* ಅಸಹಜ ಪ್ರತಿಕ್ರಿಯೆಗಳು (reflexes)
* ಸಮತೋಲನ ಮತ್ತು ಅದರ ಹೊಂದಾಣಿಕೆಯ ತೊಂದರೆಗಳು
* ಇಚ್ಛೆಯಿಲ್ಲದ ಚಲನೆಗಳು
ಬೆಳವಣಿಗೆಯ ಲಕ್ಷಣಗಳು (developmental stage);-
* ಕುಳಿತುಕೊಳ್ಳುವುದು, ತೇವಳುವುದು, ಹೋಗುವುದು, ನಡೆಯುವುದು ಮುಂತಾದ ಬೆಳವಣಿಗೆ ಹಂತಗಳು ತಡವಾಗುವುದು
* ಮಾತು ಹಾಗೂ ನುಂಗುವ ತೊಂದರೆ
* ಮಕ್ಕಳಲ್ಲಿ ಕಲಿಕಾ ತೊಂದರೆ ಕಾಣುವುದು
ಇನ್ನಿತರೆ ಸಂಬಂಧಿತ ಸಮಸ್ಯೆಗಳು;-
* ಎಪಿಲೆಪ್ಸಿ (ಅನಿಯಂತ್ರಿತ ಆಕಸ್ಮಿಕ ಚಟುವಟಿಕೆ) – (ಎಪಿಲೆಪ್ಸಿ ಒಂದು ನ್ಯೂರೋಲಾಜಿಕಲ್ ಅಸ್ವಸ್ಥತೆ. ಇದರಲ್ಲಿ ಮೆದುಳಿನಲ್ಲಿ ಅಸಾಮಾನ್ಯ ವಿದ್ಯುತ್ ಚಟುವಟಿಕೆ ಉಂಟಾಗಿ ಮರುಮರು ಕಾಣಿಸಿಕೊಳ್ಳುವ ಕಳಚಿಕೆ (seizures) ಅಥವಾ ಮೂರ್ಚ್ಛೆ ದಾಳಿ ಸಂಭವಿಸುತ್ತದೆ. ಇದು ಎಲ್ಲ ವಯಸ್ಸಿನವರಿಗೂ ಉಂಟಾಗಬಹುದು.)
* ದೃಷ್ಟಿ ಮತ್ತು ಶ್ರವಣದ ಸಮಸ್ಯೆಗಳು
* ಮಕ್ಕಳಲ್ಲಿ ಬೌದ್ಧಿಕ ಅಸಮರ್ಥತೆ
ಮಸ್ತಿಷ್ಕ ಪಾಳು (Cerebral Palsy) ಚಿಕಿತ್ಸೆ (Treatment)
ಮಸ್ತಿಷ್ಕ ಪಾಳು ಸಂಪೂರ್ಣವಾಗಿ ಗುಣವಾಗುವುದಿಲ್ಲ. ಆದರೆ ಪಯಾ೯ಯ ಹಾಗು ತ್ವರಿತ ಚಿಕಿತ್ಸೆಯಿಂದ ಮಗುವಿನ ಜೀವನಮಟ್ಟವನ್ನು ಉತ್ತಮಗೊಳಿಸುವುದರಲ್ಲಿ ಸಹಾಯಕವಾಗುತ್ತದೆ.
1. ಔಷಧಿ ಚಿಕಿತ್ಸೆ ( medication);-
* ಸ್ನಾಯು ಬಿಗಿತ (spasticity) ಕಡಿಮೆ ಮಾಡಲು ಔಷಧಿಗಳನ್ನು ಬಳಸುವುದು
* ಎಪಿಲೆಪ್ಸಿಗೆ ಔಷಧಿ
2. ಥೆರಪಿಗಳು (therapy);-
* ಫಿಜಿಯೋಥೆರಪಿ Physical therapy– ಚಲನೆ, ಸ್ನಾಯು ಬಲ ಹೆಚ್ಚಿಸಲು
* ಆಕ್ಯುಪೇಷನಲ್ ಥೆರಪಿ Occupational therapy – ದಿನನಿತ್ಯದ ಚಟುವಟಿಕೆಗಳಲ್ಲಿ ಸಹಾಯ ಮಾಡಲು
* ಸ್ಪೀಚ್ ಥೆರಪಿ Speech therapy – ಮಾತು ಮತ್ತು ನುಂಗುವಿಕೆ ಸುಧಾರಿಸಲು
3. ಶಸ್ತ್ರಚಿಕಿತ್ಸೆ (Surgery)
* ಎಲುಬು/ಸಂಧಿ (Orthopedic surgery) ತೊಂದರೆ ಸರಿಪಡಿಸಲು ಸಹಾಯ ಮಾಡುತ್ತದೆ
* ನರ ಶಸ್ತ್ರಚಿಕಿತ್ಸೆ (Nerve surgeries) spasticity ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ಸಹಾಯಕ ಸಾಧನಗಳು ( Assistive Devices)
* ಬ್ರೇಸ್ಗಳು, ವ್ಹೀಲ್ಚೇರ್, ವಾಕರ್ಗಳು, ಸಂವಹನ ಸಾಧನಗಳಿಂದ ಚಲನ-ವಲನ ಹಾಗು ದಿನ ನಿತ್ಯದ ಕೆಲಸಗಳಲ್ಲಿ ಸಹಾಯ ಮಾಡುತ್ತದೆ.

ಒಂದು ಹೆಣ್ಣು ತಾನು ಯಾವಾಗ ಗಭಿ೯ಣಿಯಾಗಿದ್ದೆನೆಂದು ತಿಳಿಯುತ್ತಾಳೋ ಆ ಕ್ಷಣ ಮಗುವಿನ ಜೋತೆಗೆ ಒಂದು ತಾಯಿ ಕೂಡ ಜನ್ಮ ಪಡೆಯುತ್ತಾಳೆ. ಆ ಸಮಯದಲ್ಲಿ ತಾಯಿಯ ಆರೈಕೆ,ಪೋಷಣೆ ಅತ್ಯಗತ್ಯ. ಆ ಸಮಯದಲ್ಲಿ ಯಾವುದೆ ದುಶ್ಚಟಗಳಿಗೆ ಬಲಿಯಾಗದೆ ಶಿಸ್ತಿನ ಆಹಾರ ಪದ್ಧತಿಯನ್ನು ಸರಿಯಾದ ಸಮಯದಲ್ಲಿ ನಿದ್ರೆಯನ್ನು,ವಿಶ್ರಾಂತಿಯನ್ನು ಪಡೆಯುತ್ತಾ,ಮಗುವಿನ ಬೆಳವಣಿಗೆಗೆ ಬೇಕಾಗುವ ತಯಾರಿಯನ್ನು ನಡೆಸಿದರೆ ಮಕ್ಕಳ ಬೆಳವಣಿಗೆ ಕುಂಟಿತವಾಗದೆ ಆಮ್ಲಜನಕದ ತೊಂದರೆಯಾಗದೆ ಮೆದುಳಿನ ರಚನೆಗೆ ತೊಂದರೆಯಾಗದಂತೆ ನಡೆದುಕೊಂಡು ಬಂದರೆ ಮಕ್ಕಳು ಜನನದ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಏದುರಿಸುವುದಿಲ್ಲ.
ಧನುಷ ಭಟ್ ಹೊಸೂರು
