ಆದ್ಯೋತ್ ಸುದ್ದಿನಿಧಿ:
ಆಪ್ತ ಸಮಾಲೋಚನೆಯ ಹಾಗು ಆದ್ಯೋತ್‌ನ ಎಲ್ಲಾ ಓದುಗರಿಗು ನವರಾತ್ರಿ ಹಬ್ಬದ ಶುಭಾಶಯಗಳು. ಎಂದಿನಂತೆ ಮತ್ತೋಂದು ಹೊಸ ಸಂಚಿಕೆ ಹೊಸ ವಿಷಯದೊಂದಿಗೆ. ದೈಹಿಕ ನ್ಯೂನ್ಯತೆಗಳ ಪರಿಣಾಮಗಳ ಬಗ್ಗೆ ಅದಕ್ಕೆ ಕಾರಣಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವೆ. ಇಂದು ಹಿಚ್ಚು ಜೀವಕೋಶಗಳಿಂದ ಉಂಟಾಗುವ ಅಡ್ಡ ಪರಿಣಾಮವನ್ನು ನೊಡೋಣ.
ಡೌನ್ ಸಿಂಡ್ರೋಮ್ (Down Syndrome)
ಡೌನ್ ಸಿಂಡ್ರೋಮ್ ಒಂದು ಜನ್ಯ ಅಸಾಮಾನ್ಯತೆಯ ಲಕ್ಷಣವಾಗಿದ್ದು (Genetic condition) ಇದು ಮಾನವನ ದೇಹದಲ್ಲಿ ಸಾಮಾನ್ಯವಾಗಿ 46 ಕ್ರೊಮೋಸೋಮ್‌ಗಳು (23 ಜೋಡಿ) ಇರುತ್ತವೆ. ಆದರೆ ಇದರಲ್ಲಿ 21ನೇ ಕ್ರೊಮೋಸೋಮ್‌ನ ಹೆಚ್ಚುವರಿಯಾಗಿ ಪ್ರತಿ ಕೋಶದಲ್ಲಿಯೂ ಕಾಣುತ್ತದೆ. ಇದರ ಪರಿಣಾಮದಿಂದ ದೈಹಿಕ ಬೆಳವಣಿಗೆಗಳು, ಬೌದ್ಧಿಕ ಸಾಮರ್ಥ್ಯ ಹಾಗೂ ಜೀವನದ ಅಭಿವೃದ್ಧಿಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ರತಿ 700 ಜನನಗಳಲ್ಲಿ 1 ಶಿಶುವಿನಲ್ಲಿ ಈ ಸ್ಥಿತಿ ಕಂಡುಬರುತ್ತದೆ. ಆದರೆ ಇದಕ್ಕೆ ಯಾವುದೆ ಶಾಶ್ವತ ಚಿಕಿತ್ಸೆ ಇಲ್ಲದಿದ್ದರೂ, ಸರಿಯಾದ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಸಾಮಾಜಿಕ ಬೆಂಬಲ ದೊರೆತರೆ ಡೌನ್ ಸಿಂಡ್ರೋಮ್ ಹೊಂದಿರುವವರು ಆರೋಗ್ಯಕರ ಮತ್ತು ಅರ್ಥಪೂರ್ಣ ಜೀವನ ನಡೆಸಲು ಸಹಾಯಕವಾಗುತ್ತದೆ.
ಡೌನ್ ಸಿಂಡ್ರೋಮ್ (Down Syndrome) ಕಾರಣಗಳು;-
*ಸಾಮಾನ್ಯವಾಗಿ ಮನುಷ್ಯರ ದೇಹದಲ್ಲಿ 46 ಕ್ರೋಮೋಸೋಮ್‌ಗಳು ಇರುತ್ತವೆ.
* ಡೌನ್ ಸಿಂಡ್ರೋಮ್‌ನಲ್ಲಿ 21ನೇ ಕ್ರೋಮೋಸೋಮ್ ಹೆಚ್ಚುವರಿಯಾಗಿ ಕಂಡುಬರುತ್ತದೆ (ಟ್ರೈಸೋಮಿ 21).
* ಇದು ಅಂಡಾಣು(egg) ಅಥವಾ ಶುಕ್ರಾಣು(sperm) ರಚನೆಯ ಸಮಯದಲ್ಲಿ ಸಂಭವಿಸುತ್ತದೆ.
* 35 ವರ್ಷಕ್ಕಿಂತ ಹೆಚ್ಚು ವಯಸ್ಸಿನ ತಾಯಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ,ಆದರೆ ಯಾವುದೇ ವಯಸ್ಸಿನಲ್ಲಿಯೂ ಸಂಭವಿಸಬಹುದು.
ಡೌನ್ ಸಿಂಡ್ರೋಮ್‌ನ (Down Syndrome) ಪ್ರಕಾರಗಳು;
*ಟ್ರೈಸೋಮಿ Trisomy 21 (95% ಪ್ರಕರಣಗಳು): ಪ್ರತಿಯೊಂದು ಕೋಶದಲ್ಲೂ ಹೆಚ್ಚುವರಿ ಕ್ರೋಮೋಸೋಮ್ 21 ಕಂಡುಬರುತ್ತದೆ.
*ಟ್ರಾನ್ಸ್‌ಲೊಕೇಷನ್ Translocation (3–4% ಪ್ರಕರಣಗಳು): ಹೆಚ್ಚುವರಿ ಕ್ರೋಮೋಸೋಮ್ 21 ಬೇರೆ ಕ್ರೋಮೋಸೋಮ್‌ಗೆ ಅಂಟಿಕೊಂಡಿರುತ್ತದೆ.
*ಮೋಸಾಯಿಕ್ Mosaic Down Syndrome ಡೌನ್ ಸಿಂಡ್ರೋಮ್ (1–2% ಪ್ರಕರಣಗಳು): ಕೆಲವೇ ಕೋಶಗಳಲ್ಲಿ ಹೆಚ್ಚುವರಿ ಕ್ರೋಮೋಸೋಮ್ ಇರುವುದರಿಂದ ಲಕ್ಷಣಗಳು ಕೂಡ ಮೃದುವಾಗಿರುತ್ತವೆ.
ಡೌನ್ ಸಿಂಡ್ರೋಮ್ (Down Syndrome) ಲಕ್ಷಣಗಳು ಮತ್ತು ವಿಶೇಷತೆಗಳು;- ( common issue)
* ಮುಖದ ಆಕೃತಿಯಲ್ಲಿ ವಿಶೇಷ ಬದಲಾವಣೆಗಳಾಗುತ್ತದೆ (ಸಮತಟ್ಟಾದ ಮುಖ, ಮೇಲಕ್ಕೆ ಚಿಮ್ಮುವ ಕಣ್ಣುಗಳು, ಚಿಕ್ಕ ಕಿವಿಗಳು, ಕಿರು ಕುತ್ತಿಗೆ).
* ಕಡಿಮೆ ಸ್ನಾಯು ಬಲ ಮತ್ತು ಸಡಿಲ ಸಂಧಿಗಳು.(loose joint and muscle)
* ಕಡಿಮೆ ಎತ್ತರ (short height)
* ಬೆಳವಣಿಗೆಯ ವಿಳಂಬ (ಭಾಷಾ ಮತ್ತು ಕಲಿಕೆಯ ತೊಂದರೆಗಳು). development and learning problems
* ಮೃದುವಿನಿಂದ ಮಧ್ಯಮ ಮಟ್ಟದ ಬೌದ್ಧಿಕ ಅಸಮರ್ಥತೆ. ( intellectual disability)
ಡೌನ್ ಸಿಂಡ್ರೋಮ್ (Down Syndrome) ಸಹಾಯಕ ಆರೋಗ್ಯ ಸಮಸ್ಯೆಗಳು: ( Health issue)
*ಹೃದಯದ ದೋಷಗಳು (ಸುಮಾರು 50% ಶಿಶುಗಳಲ್ಲಿ). (heart problem and diseases)
* ಕಿವಿ ಮತ್ತು ಕಣ್ಣಿನ ಸಮಸ್ಯೆಗಳು.( vision and hearing problem)
* ಥೈರಾಯ್ಡ್ ಸಮಸ್ಯೆಗಳು. (thyroid problem)
* ಸೋಂಕುಗಳಿಗೆ ಹೆಚ್ಚು ಬಾಧ್ಯತೆ. ( infection problem )
ಡೌನ್ ಸಿಂಡ್ರೋಮ್ (Down Syndrome) ರೋಗನಿರ್ಣಯ diagnosis ;̲
* ಗರ್ಭಾವಸ್ಥೆಯಲ್ಲಿ ( during pregnency): ಅಲ್ಟ್ರಾಸೌಂಡ್, ರಕ್ತ ಪರೀಕ್ಷೆ, ಅಮ್ನಿಯೋಸೆಂಟಿಸಿಸ್, ಚೋರಿಯಾನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ ಮೂಲಕ ಪತ್ತೆಹಚ್ಚುಹುದು
* ಹುಟ್ಟಿದ ನಂತರ(after birth) : ದೇಹದ ಲಕ್ಷಣಗಳಿಂದ ಹಾಗೂ ಕ್ರೋಮೋಸೋಮ್ ಪರೀಕ್ಷೆ (ಕ್ಯಾರಿಯೋಟೈಪ್) ಮೂಲಕ ದೃಢೀಕರಣ.
ಡೌನ್ ಸಿಂಡ್ರೋಮ್ (Down Syndrome) ಚಿಕಿತ್ಸೆ ಮತ್ತು ನಿರ್ವಹಣೆ ( treatment )
*ಡೌನ್ ಸಿಂಡ್ರೋಮ್‌ಗೆ ಶಾಶ್ವತ ಚಿಕಿತ್ಸೆ ಇರುವುದಿಲ್ಲ ಆದರೆ ಹೃದಯ ಸಮಸ್ಯೆ , ಥೈರಾಯ್ಡ್, ಕಿವಿ ಮತ್ತು ಕಣ್ಣುಗಳ ನಿಯಮಿತ ಪರೀಕ್ಷೆಗಳನ್ನು ಮಾಡಿಸುತ್ತಾ ನಿಯಂತ್ರಿಸುವುದು.
* ಪ್ರಾರಂಭಿಕ ಹಸ್ತಕ್ಷೇಪ (Early intervention): ಫಿಸಿಯೋಥೆರಪಿ, ಆಕ್ಯುಪೇಶನಲ್ ಥೆರಪಿ, ಸ್ಪೀಚ್ ಥೆರಪಿಗಳ ಮೂಲಕ ಚಿಕಿತ್ಸೆ ಪಡಿಯುವುದು
* ವಿಶೇಷ ಶಿಕ್ಷಣ ಹಾಗೂ ಒಳಗೊಂಡ ಶಿಕ್ಷಣ (Inclusive education). ( learning theories )
* ಪೋಷಕರಿಗೆ ಮಕ್ಕಳ ಪಾಲನೆ ಹಾಗು ಪೋಷಣೆಯ ಬಗ್ಗೆ ಮಾರ್ಗದರ್ಶನ ನೀಡುವುದು , ಸಮಾಜದಲ್ಲಿ ಯಾವುದೆ ರೀತಿಯ ಹಿಂಜರಿಕೆಯಿಲ್ಲದೆ ಮಕ್ಕಳನ್ನು ಪೋಷಿಸುವುದು
ಇತ್ತಿಚಿನ ಆಧುನಿಕ ವೈದ್ಯಕೀಯ ಬೆಳವಣಿಗೆಯಿಂದಾಗಿ ಡೌನ್ ಸಿಂಡ್ರೋಮ್ ಹೊಂದಿರುವವರು 60 ವರ್ಷಗಳವರೆಗೆ ಬದುಕುವ ಸಾಧ್ಯತೆ ಇದ್ದು ಉತ್ತಮ ಅವಕಾಶಗಳು ದೊರೆತರೆ ಅವರು ಕೆಲಸ ಮಾಡಲು ಕಲೆ, ಕ್ರೀಡೆಗಳಲ್ಲಿ ಹಾಗೂ ಸಮಾಜದಲ್ಲಿ ಸಕ್ರಿಯ ಹಾಗು ಶಕ್ತರನ್ನಾಗಿಸಬಹುದು. ಇದರೊಂದಿಗೆ ಸಮಾಜದಲ್ಲಿ ಗೌರವ, ಹಕ್ಕುಗಳು ಮತ್ತು ಸಮಾನ ಅವಕಾಶಗಳು ದೊರಯುವಂತೆ ಜಾಗೃತಿ ಅಭಿಯಾನಗಳ ಮೂಲಕ ಅಸಹ್ಯ ಮತ್ತು ಅಪಮಾನವನ್ನು ಕಡಿಮೆ ಮಾಡಬೇಕು.
ಸಮಾಜದಲ್ಲಿರುವ ನಾವುಗಳು ವಿಶೇಷ ಮಕ್ಕಳನ್ನು,ದೈಹಿಕ ನ್ಯೂನ್ಯತೆಗಳಿರುವ ಮಕ್ಕಳನ್ನು ಅನ್ಯರೆಂದು ಭಾವಿಸದೆ ಅವರು ನಮ್ಮವರಂತೆ ಎಂಬ ಭಾವನೆಗಳಿಂದ ಸಕಲ ಗೌರವ,ಪ್ರೀತಿ,ವಿಶ್ವಾಸಗಳಿಂದ ಕೂಡಿದರೆ ಉತ್ತಮ ವಾತಾವರಣ ಹಾಗು ನಾವು ಸೃಷ್ಟಿಸುವ ಪರಿಸರಗಳಿಂದ ಅವರ ಮೇಲೆ ಉತ್ತಮ ಪರಿಣಾಮಗಳು ಬೀರಿ ಅವರಲ್ಲೂ ಆತ್ಮ ವಿಶ್ವಾಸಗಳು ಮೂಡಿ ಯಶಸ್ಸಿನ ಗುರಿ ಮುಟ್ಟಲು ಸಹಾಯಕವಾಗುತ್ತದೆ.
ಧನುಷ್ ಭಟ್ ಹೊಸೂರು
9945266006
