ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜೆಎಸ್‌ಟಿ ಕಡಿಮೆಯಾಗಿರುವುದರ ಪರಿಣಾಮದ ಕುರಿತು ಜನರನ್ನು ಹಾಗೂ ವ್ಯಾಪಾರಸ್ಥರನ್ನು ಜಾಗೃತಗೊಳಿಸಲು ಜಾಥಾ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕಾಗೇರಿಯವರು,
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದಲ್ಲಿ ಅಭಿವೃದ್ಧಿಪರ್ವವು ಕಾಣುತ್ತಿದ್ದು ಈಗ ಜೆಎಸ್‌ಟಿ ತೆರಿಗೆ ಪದ್ದತಿಯಲ್ಲಿ ಸುಧಾರಣೆ ಮಾಡುವ ಮೂಲಕ ದೇಶದ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ.

ಹಿಂದೆ ಜಿಎಸ್‌ಟಿ ತರುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಹೊಸಬದಲಾವಣೆಯನ್ನು ತಂದಿದ್ದರು. ಕಳೆದ ಆರು-ಏಳುವರ್ಷದಿಂದ ಜನರಿಗೆ ಕೆಲವು ಆಡಳಿತಾತ್ಮಕ ತೊಂದರೆ ಆಗುತ್ತಿತ್ತು ಇದನ್ನು ಮನಗಂಡು ಮೋದಿಜಿಯವರು ಹೊಸತೆರಿಗೆ ಪದ್ದತಿಯನ್ನು ಜಾರಿಗೆ ತಂದರು. ಇದನ್ನು ಜಾರಿಗೆ ತರುವ ಸಲುವಾಗಿ ಕರೆದ ಸಭೆಯಲ್ಲಿ ಎಲ್ಲಾ ರಾಜ್ಯದ ಪ್ರತಿನಿಧಿಗಳು ಇದ್ದು ಎಲ್ಲರೂ ಮುಕ್ತಮನಸ್ಸಿನಿಂದ ಒಪ್ಪಿದ್ದಾರೆ.ತೆರಿಗೆ ದರ ಇಳಿಕೆಯಿಂದ ಜೀವನ ಅವಶ್ಯಕವಾಗಿರುವ ಔಷಧಿಗಳು,ಕೃಷಿಉಪಕರಣಗಳ ದರಗಳು ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಮುಮದಿನ ದಿನಗಳಲ್ಲಿ ಇದೆಲ್ಲದರ ಪರಿಣಾಮ ಜನರಿಗೆ ದೊರಕಲಿದೆ. ಎಂದು ಹೇಳಿದರು.

ಕಾಶ್ಮಿರದಲ್ಲಿ ೩೭೦ ಕಾಯ್ದೆ ರದ್ದು,ಶ್ರೀರಾಮಮಂದಿರ ನಿರ್ಮಾಣ,ತ್ರಿವಳಿತಲ್ಲಾಖ ಇಂತಹ ಹಲವು ಸುಧಾರಣೆಗಳನ್ನು ತಂದವರು ನಾವು ಜಿಎಸ್‌ಟಿ ಜಾರಿಗೆ ತಂದಿರುವುದರಿAದ ಜಗತ್ತಿನ ಆರ್ಥಿಕ ಜಗತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದೆವೆಈಗ ನಾವು ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕುಇದರಿಂದ ರೈತರಿಗೆ,ಗುಡಿಕೈಗಾರಿಕೆಗಳಿಗೆ,ಸಣ್ಣಕೈಗಾರಿಕೆಗಳಿಗೆ ಅನುಕೂಲವಾಗಿ ಇಲ್ಲಿಯ ಉದ್ಯೋಗಾವಕಾಶ ಹೆಚ್ಚಾಗುತ್ತದೆ. ಇದರಿಂದ ನಮ್ಮ ಆರ್ಥಿಕ ಶಕ್ತಿ ಹೆಚ್ಚಾಗಲಿದೆ ಆದ್ದರಿಂದಲೇ ಜನರಲ್ಲಿ ಜಾಗೃತಿ ಮೂಡಿಸಲು ಜಾತಾ ನಡೆಸುತ್ತಿದ್ದೆವೆ ಎಂದು ಕಾಗೇರಿ ಹೇಳಿದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಮಡಿವಾಳ,ಪ್ರದಾನ ಕಾರ್ಯದರ್ಶಿ ತೋಟಪ್ಪ ನಾಯ್ಕ,ಎಸ್.ಕೆ.ಮೆಸ್ತ,ಮಾಜಿ ಜಿಪಂ ಸದಸ್ಯ ಎನ್.ವಿ.ಹೆಗಡೆ ಮುತ್ತಿಗೆ,ಪಪಮ ಸದಸ್ಯ ಮಾರುತಿ ನಾಯ್ಕ,ಗುರುರಾಜ ಶಾನಭಾಗ,ನಂದನ ಬೋರ್ಕರ್,ಸುರೇಶ ನಾಯ್ಕ,ಮಂಜುನಾಥ ಭಟ್ಟ,ಕೃಷ್ಣಮೂರ್ತಿ ನಾಯ್ಕ ಐಸೂರು ಮುಂತಾದವರು ಉಪಸ್ಥಿತರಿದ್ದರು.

ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ,
ಜಿಲ್ಲೆಯಲ್ಲಿ ಜಿಪಿಎಸ್ ಆಗಿ ಎಲ್ಲ ದಾಖಲೆಗಳು ಇದ್ದು ಅಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿದ್ದರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಯಾವುದೇ ರೀತಿಯಲ್ಲಿ ತೊಂದರೆಯಾದರೂ ನನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮದ ಜೊತೆ ಅವರ ರಕ್ಷಣೆ ಮಾಡುತ್ತೇನೆ. ಜನರ ಮುಗ್ಧತೆ ದುರುಪಯೋಗ ಆಗಬಾರದು. ಆದರೆ ಯಾವುದೇ ಹೊಸ ಅತಿಕ್ರಮಣಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದರು.
ಕಾನಗೋಡು ಗ್ರಾಮವನ್ನು ನಮ್ಮ ಹಿಂದಿನ ಸಂಸದರು ಆದರ್ಶ ಗ್ರಾಮವನ್ನಾಗಿ ತೆಗೆದುಕೊಂಡಿದ್ದರು.. ಉಳಿದಂತೆ ಎಲ್ಲಾ ವಿಷಯ ನಿಮಗೆ ಗೊತ್ತಿದೆ. ಆ ಯೋಜನೆ ಇನ್ನೂ ಇದೆ ನನಗೆ ಬೇಕಾದ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡುವ ಸ್ವಾತಂತ್ರ‍್ಯ ನನಗೆ ಇದೆ ಎಂದರು.
ತಾಳಗುಪ್ಪ-ಹುಬ್ಬಳ್ಳಿ ರೇಲ್ವೆ ಯೋಜನೆಗೆ ನಾನು ಅಡ್ಡಿಪಡಿಸುತ್ತಿದ್ದೆನೆ ಎಂದು ಕೆಲವರು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ರೇಲ್ವೆ ಇಲಾಖೆಯವರು ಖಾಸಗಿ ಮಾಲಿಕತ್ವದ ಜಾಗದಲ್ಲಿ ಗುರುತ ಮಾಡುತ್ತಿದ್ದಾರೆ ಇದರಿಂದ ನಮಗೆ ತೊಂದರೆಯಾಗುತ್ತಿದೆ ಮಾರ್ಗವನ್ನು ಬೇರೆ ಕಡೆ ಮಾಡಬೇಕು ಎಂದು ಕೆಲವರು ಮನವಿ ಸಲ್ಲಿಸಿದಾಗ ನಾನು ಸಂಸದನಾಗಿ ಅದನ್ನು ರೇಲ್ವೆ ಇಲಾಖೆಯವರಿಗೆ ಕಳುಹಿಸಿದ್ದೆನೆ ಹಾಗಂತ ರೇಲ್ವೆ ಮಾರ್ಗಕ್ಕೆ ನನ್ನಿಂದ ತೊಂದರೆಯಾಗುತ್ತಿದೆ ಎನ್ನುವುದು ಸುಳ್ಳು. ತಾಳಗುಪ್ಪಾ-ಹುಬ್ಬಳ್ಳಿ ರೇಲ್ವೆ ಮಾರ್ಗ ಆಗುತ್ತದೆ ಎಂದು ಕಾಗೇರಿ ಹೇಳಿದರು.
——-
