ಆದ್ಯೋತ್ “ಆಪ್ತ ಸಮಾಲೋಚನೆ”

ಆದ್ಯೋತ್ ಸುದ್ದಿನಿಧಿ:
ಇತ್ತಿಚಿನ ಸಂಚಿಕೆಯಲ್ಲಿ ತಾವು ತಿಳಿದುಕೊಂಡಿರುವ ಮಾನಸಿಕ ಅಸಮಥ೯ತೆಗಳು ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ, ಕಲಿಕಾ ಅಸಮಥ೯ತೆಗಳನ್ನು ಮಕ್ಕಳ ಬೆಳವಣಿಗೆಗಳಿಗೆ ತೊಂದರೆಯುಂಟು ಮಾಡುವ ಲಕ್ಷಣಗಳ ಬಗ್ಗೆ ನೋಡಿದ್ದೆವೆ. ಮೆದುಳಿನ ರಚನಾ ಕ್ರಮಗಳ ವ್ಯತ್ಯಾಸಗಳಿಂದ ಬರುವ ನ್ಯೂನ್ಯತೆಗಳ ಮುಂದಿನ ವಿಷಯವನ್ನು ನೋಡೊಣ.
Autism Spectrum Disorder (ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್)

ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ (ASD)ಯು ನರವಿಕಾಸ ಸಂಬಂಧಿ ಹಾಗು ರಚನಾ ಕ್ರಮದಲ್ಲಿ ಅಸಮರ್ಥತೆಯಾಗಿದ್ದು ಸಾಮಾನ್ಯವಾಗಿ ಬಾಲ್ಯದಲ್ಲೇ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇದು ಮುಖ್ಯವಾಗಿ ಸಂಭಾಷಣೆ (communication), ಸಾಮಾಜಿಕ ಸಂಪರ್ಕ (social intraction) ಹಾಗೂ ವರ್ತನೆ (behaviour)ಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಲಕ್ಷಣಗಳು ಹಾಗೂ ಇದರ ತೀವ್ರತೆಯು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುವುದರಿಂದ ಇದನ್ನು ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ ಎಂದು ಕರೆಯಲಾಗುತ್ತದೆ.
ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ (ASD ಕಾರಣಗಳು;-
* ಆಟಿಸಮ್‌ನ ನಿಖರವಾದ ಮೂಲ ಕಾರಣ ಕಂಡು ಬರುವ ಲಕ್ಷಣಗಳು ಇನ್ನೂ ತಿಳಿದುಬಂದಿಲ್ಲವಾದರು ಆದರೆ ಸಂಶೋಧನೆಗಳು ಕೆಳಗಿನ ಅಂಶಗಳನ್ನು ಸೂಚಿಸುತ್ತವೆ
* ಜನ್ಯ ಅಂಶಗಳು (Genetic factors) – ಕುಟುಂಬದಲ್ಲಿ ಬಂದ ಗುಣಲಕ್ಷಣಗಳಿಂದಾಗಿ ಅಪಾಯ ಹೆಚ್ಚಾಗುವ ಸಾಧ್ಯತೆ ಹಾಗು ವಂಶ ಪಾರಂಪರಿಕವಾಗಿ ಬರುವ ಬೇರೆ ರೊಗಗಳ ಅಡ್ಡ ಪರಿಣಾಮಗಳಿಂದಲೂ ಬರುವ ಸಾಧ್ಯತೆ ಹೆಚ್ಚು .
* ಮಗಜದ ಅಭಿವೃದ್ಧಿಯ ವ್ಯತ್ಯಾಸ (Brain development differences) – ನರಗಳ ಜಾಲಗಳ, ರಚನೆ, ಹಾಗು ಅಸಹಜ ಬೆಳವಣಿಗೆಗಳು.
* ಪರಿಸರ ಅಂಶಗಳು (Environmental factors) – ಗರ್ಭಧಾರಣೆಯ ಸಮಯದ ಅಡಚಣೆಗಳು ಅನಿಯಮಿತವಾದ ಆಹಾರ ಪದ್ಧತಿ, ಅಶಿಸ್ತಿನ ಜಿವನ ಕ್ರಮ , ವಿಷಪದಾರ್ಥಗಳಿಗೆ ಗುರಿಯಾಗುವುದು( junks food), ಪೋಷಕರ ಅಧಿಕ ವಯಸ್ಸು ( late pregnancy)
* ಮುಖ್ಯವಾಗಿ ಆಟಿಸಮ್ ತಾಯ್ತಂದೆಯ ಪಾಲನಾ ಶೈಲಿ ಅಥವಾ ಲಸಿಕೆಗಳಿಂದ ಉಂಟಾಗುವುದಿಲ್ಲ
ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ (ASD)ಲಕ್ಷಣಗಳು;-
1. ಸಾಮಾಜಿಕ ಮತ್ತು ಸಂವಹನ ಸಮಸ್ಯೆಗಳು ;-(communication & social challenges)
* ಕಣ್ಣಿನಲ್ಲಿ ಕಣ್ಣು ಇಟ್ಟು ನೋಡುವಲ್ಲಿ ಹಾಗು ಮಾತನಾಡುವುದುರಲ್ಲಿ ಕಷ್ಟ ಪಡವುದು.
* ಭಾವನೆಗಳು ವ್ಯಕ್ತ ಪಡಿಸುವಲ್ಲಿ ಹಾಗೂ ಸಾಮಾಜಿಕ ಸೂಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆ ಪಡುವುದು.
* ಮಾತಿನ ಅಭಾವ, ಕಡಿಮೆ ಮಾತನಾಡುವುದು ಅಥವಾ ಮರುಮರು ಮಾತಾಡುವುದು , ಅಸಹಜ ಧ್ವನಿಶೈಲಿ ಹೊಂದಿರುವುದು.

2. ಮರುಮರು ನಡೆಯುವ ವರ್ತನೆ ಮತ್ತು ರೂಢಿಗಳು (Repetitive Behaviors and Routines);-
* ಕೈ ಅಲೆಯುವುದು, ಮರುಕಳಿಸುವುದು, ದೇಹದೊಳಗೆ ತೂಗುವುದು ಮುಂತಾದ ಮರುಮರು ಚಲನೆಗಳು.
* ನಿತ್ಯ ಕೃತ್ಯಗಳಲ್ಲಿ ಬದಲಾವಣೆ ಮಾಡಲು ಇಷ್ಟವಿರುವುದಿಲ್ಲ.
* ನಿರ್ದಿಷ್ಟ ವಿಷಯಗಳಲ್ಲಿ ಅಥವಾ ವಸ್ತುಗಳಲ್ಲಿ ಹೆಚ್ಚು ಆಸಕ್ತಿಯಿರುವುದು.

3. ಇತರೆ ವೈಶಿಷ್ಟ್ಯಗಳು (Other Features);-
* ಶಬ್ದ, ಬೆಳಕು ಅಥವಾ ಸ್ಪರ್ಶಕ್ಕೆ ಅತಿಸಂವೇದನೆ ಪಡುವುದು.
* ಕೆಲವು ಕ್ಷೇತ್ರಗಳಲ್ಲಿ ದುರ್ಬಲತೆ ಇದ್ದರೂ, ಸಂಗೀತ, ಚಿತ್ರಕಲೆ ಅಥವಾ ನೆನಪಿನಲ್ಲಿ ವಿಶೇಷ ಪ್ರತಿಭೆ ತೋರಬಹುದು.

ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ (ASD)ರೋಗನಿರ್ಣಯ;-
* ಆಟಿಸಮ್ ಸಾಮಾನ್ಯವಾಗಿ ೨–೩ ವರ್ಷ ವಯಸ್ಸಿನಲ್ಲಿ ಪತ್ತೆಯಾಗುತ್ತದೆ.
* ವಿಕಾಸ ಮೌಲ್ಯಮಾಪನ (Developmental screening.) ಮಾಡಲಾಗುತ್ತದೆ.
* ವರ್ತನೆ ಮತ್ತು ಸಂವಹನದ ಅವಲೋಕನ (Observation of communication and behavior patterns.) ಮಾಡಲಾಗುತ್ತದೆ.
* ಮನೋವೈದ್ಯರು, ನರರೋಗ ತಜ್ಞರು ಅಥವಾ ಮಕ್ಕಳ ತಜ್ಞರು ನಿರ್ಧಾರ ನೀಡುತ್ತಾರೆ. (Assessment by psychologists, neurologists, or pediatric specialists.)

ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ (ASD) ಚಿಕಿತ್ಸೆ ಮತ್ತು ಬೆಂಬಲ;
* ಆಟಿಸಮ್‌ಗೆ ಪೂರ್ಣ ಚಿಕಿತ್ಸೆಯಿಲ್ಲದಿದ್ದರೂ, ತ್ವರಿತ ಚಿಕಿತ್ಸೆಯಿಂದ ಮಕ್ಕಳ ಜೀವನಮಟ್ಟವನ್ನು ಉತ್ತಮಗೊಳಿಸಬಹುದು.
* ಥೆರಪಿಗಳು: ಮಾತು-ಭಾಷಾ ಚಿಕಿತ್ಸೆ, ವರ್ತನೆ ಚಿಕಿತ್ಸೆಗಳು (ABA, CBT), ಉದ್ಯೋಗ ಥೆರಪಿ, ಸಾಮಾಜಿಕ ಕೌಶಲ ತರಬೇತಿ.(Speech therapy, behavioral therapy , occupational therapy, and social skills training.)
* ಕುಟುಂಬದರವ ಬೆಂಬಲ(Family Support:) ಪ್ರೊತ್ಸಾಹ ಹಾಗು ಪೋಷಕರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
* ಶಿಕ್ಷಣ(Education): ಸಮಾವೇಶಿತ ಶಿಕ್ಷಣ ಹಾಗೂ ವಿಶೇಷ ತರಬೇತಿ ಕೇಂದ್ರಗಳ ಸಹಾಯ.
ಆಟಿಸಮ್ ಸ್ಪೆಕ್ಟ್ರಂ ಡಿಸಾರ್ಡರ್ (ASD)ಮಾನಸಿಕ ಪರಿಣಾಮ

ಆಟಿಸಮ್‌ನೊಂದಿಗೆ ಬದುಕುತ್ತಿರುವ ಮಕ್ಕಳು ಸಾಮಾಜಿಕವಾಗಿ ತಿರಸ್ಕಾರ ಭಾವನೆ, ಆತಂಕ ಅಥವಾ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ಆದರೆ ಅದನ್ನು ಅರ್ಥಮಾಡಿಕೊಳ್ಳುವಿಕೆ, ಪ್ರೋತ್ಸಾಹ ನೀಡುವುದು ಹಾಗೂ ಒಳಗೊಳ್ಳುವಿಕೆ,ದೈಯ೯ ದೊರೆತರೆ ಅವರು ಆತ್ಮವಿಶ್ವಾಸವನ್ನು ಬೆಳೆಸಿ ಯಶಸ್ವಿ ಜೀವನವನ್ನು ನಡೆಸಬಹುದು.
ಧನುಷ್‌ ಭಟ್‌̈̈
9945266006

About the author

Adyot

Leave a Comment