ಆದ್ಯೋತ್ ಸುದ್ದಿನಿಧಿ,
ಎಲ್ಲಾ ಆಪ್ತಸಮಾಲೋಚನೆಯ ಹಾಗೂ ಆಧ್ಯೋತ್ನ ಓದುಗರಿಗೆ ವಿಜಯದಶಮಿಯ ಹಾಧಿ೯ಕ ಶುಭಾಷಯಗಳು.
ಮನುಷ್ಯನ ಆಲೋಚನೆಗಳಿಗೆ ಅಪಾರವಾದ ಶಕ್ತಿಯಿರುತ್ತದೆ , ಹೊಸ ಅವಿಷ್ಕಾರಗಳಿಗೂ ದಾರಿ ಮಾಡಿಕೊಡುತ್ತದೆ. ಆಲೋಚನಾ ಶಕ್ತಿಯೂ ಮನುಷ್ಯನ ಸಾಮಥ್ಯ೯ವೂ ಆಗಿದ್ದು ಉತ್ತಮ ಅಥವಾ ಕೆಟ್ಟ ಆಲೋಚನೆಗಳಿಂದಲೂ ಪರಿಣಾಮಗಳು ಬೀರುತ್ತದೆ. ಸಮಾಜದಲ್ಲಿ ಭಾವನೆಗಳಿಂದ ಮತ್ತು ವತ೯ನೆಗಳಿಂದ ಮನುಷ್ಯನ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ. ಇದರಲ್ಲಿ ವ್ಯತ್ಯಾಸವಾದರೇ ಸಮಾಜದಲ್ಲಿ ಹೊಂದಿಕೊಳ್ಳಲೂ ಸಮಸ್ಯೆಗಳಾಗುತ್ತದೆ. ಈ ತರಹದ ಸಮಸ್ಯೆಗಳ ಮೂಲವನ್ನು ಅರಿಯೊಣ.
ಸ್ಕಿಜೋಫ್ರೇನಿಯಾ Schizophrenia
ಸ್ಕಿಜೋಫ್ರೇನಿಯಾ ಒಂದು ಗಂಭೀರ ಮಾನಸಿಕ ಅಸ್ವಸ್ಥತೆ ಆಗಿದ್ದು, ಇದು ವ್ಯಕ್ತಿಯ ಆಲೋಚನೆ, ಭಾವನೆ ಮತ್ತು ವರ್ತನೆಗೆ ಆಳವಾದ ಪ್ರಭಾವ ಬೀರುವುದಲ್ಲದೆ ಸಾಮಾನ್ಯವಾಗಿ ಇದನ್ನು ಜನರು “ಎರಡು ವ್ಯಕ್ತಿತ್ವ”( split personality) ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ, ಆದರೆ ವಾಸ್ತವದಲ್ಲಿ ಇದು ಮೆದುಳಿನ ಮಾಹಿತಿ ಪ್ರಕ್ರಿಯೆಯಲ್ಲಿ ಉಂಟಾಗುವ ದೀರ್ಘಕಾಲದ ವ್ಯತ್ಯಾಸವಾಗಿರುತ್ತದೆ. ಸ್ಕಿಜೋಫ್ರೇನಿಯಾ ಹೊಂದಿರುವವರು ಜನರು ನಿಜ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸವನ್ನು ಅರಿಯುವಲ್ಲಿ ಕಷ್ಟಪಡುತ್ತಾರೆ. ಇದರಿಂದ ಸಮಾಜದಲ್ಲಿ ಹೊಂದಿಕೊಳ್ಳುವಿಕೆ, ಕೆಲಸ ಮತ್ತು ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.
ಸ್ಕಿಜೋಫ್ರೇನಿಯಾ (Schizophrenia) ಕಾರಣಗಳು;-
ಸ್ಕಿಜೋಫ್ರೇನಿಯಾದ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲದಿದ್ದರು .ಆದರ ಹಲವು ಅಂಶಗಳು ಸೇರಿ ಇದಕ್ಕೆ ಕಾರಣವಾಗುತ್ತವೆ:
*ಆನುವಂಶಿಕ ಅಂಶಗಳು (Genetic Factors)– ಕುಟುಂಬದಲ್ಲಿ ಇದಕ್ಕೆ ಸಂಬಂಧಪಟ್ಟ ಇತಿಹಾಸ ಅಥವಾ ಮನೆಯವರಲ್ಲಿ ಯಾರಿಗಾದರೂ ಈ ಸಮಸ್ಯೆ ಕಾಣಿಸಿಕೊಂಡಿದ್ದರೆ ಇದರ ಅಪಾಯ ಹೆಚ್ಚಿರುವ ಸಾಧ್ಯತೆ ಇರುತ್ತದೆ.
*ಮೆದುಳಿನ ರಾಸಾಯನಿಕ ಮತ್ತು ರಚನೆ (Brain Chemistry and Structure) – ಡೊಪಮೈನ್ ಮತ್ತು ಗ್ಲುಟಮೇಟ್ ಎಂಬ ನರಸಂದೇಶಕಗಳ ಅಸಮತೋಲನವು ಮುಖ್ಯ ಕಾರಣವಾಗಿರುತ್ತದೆ. ಮೆದುಳಿನ ರಚನೆಯಲ್ಲಿ ಸಹ ವ್ಯತ್ಯಾಸಗಳು ಕಾಣಿಸುತ್ತವೆ.
*ಪರಿಸರದ ಪ್ರಭಾವ (Environmental Influences) – ಗರ್ಭಾವಸ್ಥೆಯಲ್ಲಿ ವೈರಸ್ ,ಸೋಂಕು, ಜನನ ಸಮಯದ ತೊಂದರೆಗಳು, ತೀವ್ರ ಒತ್ತಡದ ಘಟನೆಗಳು ಇದರ ಅಪಾಯವನ್ನು ಹೆಚ್ಚಿಸುತ್ತವೆ.
*ಮಾದಕ ವಸ್ತುಗಳ ದುರುಪಯೋಗ (Substance Abuse) – ಡ್ರಗ್ಸ್ ಮತ್ತು ಮದ್ಯದ ದುರುಪಯೋಗ ಇದನ್ನು ಪ್ರಾರಂಭಿಸಲು , ಸಮಸ್ಯೆ ಕಾಣಿಸಿಕೊಳ್ಳಲೂ ಅಥವಾ ಹೆಚ್ಚಾಗಲು ಕಾರಣವಾಗಬಹುದು.
ಸ್ಕಿಜೋಫ್ರೇನಿಯಾ Schizophrenia ಲಕ್ಷಣಗಳು;-
ಸ್ಕಿಜೋಫ್ರೇನಿಯಾದ ಲಕ್ಷಣಗಳು ಸಾಮಾನ್ಯವಾಗಿ ಯವ್ವನ ಮತ್ತು ಯುವವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ:
*ಧನಾತ್ಮಕ ಲಕ್ಷಣಗಳು (Positive Symptoms) – ಭ್ರಾಂತಿ (delusions), ಭಾಸ (hallucinations), ಅಸಂಘಟಿತ ಚಿಂತನೆ ಮತ್ತು ವಿಚಿತ್ರ ವರ್ತನೆಗಳು ಕಾಣುತ್ತವೆ. (hallucinations, delusions, disorganized thinking, and unusual body movements.)
*ಋಣಾತ್ಮಕ ಲಕ್ಷಣಗಳು (Negative Symptoms) – ಉತ್ಸಾಹದ ಕೊರತೆ, ಮಾತಿನ ಕಡಿಮೆ, ಭಾವನಾತ್ಮಕ ಅಭಿವ್ಯಕ್ತಿಯ ಕುಂದು, ಸಮಾಜದಿಂದ ದೂರವಾಗುವುದು (loss of normal functions): lack of motivation, reduced speech, poor emotional expression, social withdrawal)
*ಜ್ಞಾನಾತ್ಮಕ ಲಕ್ಷಣಗಳು (Cognitive Symptoms) – ಗಮನ ಕೇಂದ್ರೀಕರಣದ ತೊಂದರೆ, ಸ್ಮರಣಶಕ್ತಿ ಕುಂದು, ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟಪಡುವುದು. (difficulty concentrating, memory problems, trouble with decision-making and planning.)
ಸ್ಕಿಜೋಫ್ರೇನಿಯಾ (Schizophrenia) ಚಿಕಿತ್ಸೆ ಮತ್ತು ನಿರ್ವಹಣೆ;-
ಸ್ಕಿಜೋಫ್ರೇನಿಯಾ ಜೀವನಪೂರ್ತಿ ಇರುವ ಅಸ್ವಸ್ಥತೆಯಾಗಿದ್ದರೂ ಸರಿಯಾದ ಚಿಕಿತ್ಸೆ ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ ಇದರ ಮುಖ್ಯ ಚಿಕಿತ್ಸೆಗಳು;-
*ಔಷಧೋಪಚಾರ (Medication)– ಆಂಟಿ-ಸೈಕೋಟಿಕ್ ಔಷಧಿಗಳು(Antipsychotic drug) (hallucinations) ಭ್ರಾಂತಿ, ಭಾಸ ಹಾಗೂ ಅಸಂಘಟಿತ ಚಿಂತನೆಗಳನ್ನು (delusions,) ಕಡಿಮೆ ಮಾಡುತ್ತವೆ.
*ಮಾನಸಿಕ ಚಿಕಿತ್ಸೆಗಳು (Psychological Therapies) – ಸಂವೇದನಾತ್ಮಕ-ಪ್ರವರ್ತನಾ ಚಿಕಿತ್ಸೆ (CBT), ಸಮಾಲೋಚನೆ ಮತ್ತು ಕೌಶಲ ತರಬೇತಿಗಳು
*ಪುನರ್ವಸತಿ ಮತ್ತು ಸಾಮಾಜಿಕ ಬೆಂಬಲ (Rehabilitation and Social Support )– ಉದ್ಯೋಗ ತರಬೇತಿ, ಗುಂಪು ಚಿಕಿತ್ಸೆಗಳು, ಸಮುದಾಯ ಆಧಾರಿತ (reintegration) ಕಾರ್ಯಕ್ರಮಗಳು.
*ಕುಟುಂಬ ಚಿಕಿತ್ಸೆ (Family Therapy)– ಕುಟುಂಬ ಸದಸ್ಯರಿಗೆ ಅರಿವು ಮೂಡಿಸುವುದು, ಅವರ ಸಹಭಾಗಿತ್ವ ಹೆಚ್ಚಿಸುವುದು , ಸಮಾಜದಲ್ಲಿ ಅರಿವು ಮೂಡಿಸುವುದು
ಸ್ಕಿಜೋಫ್ರೇನಿಯಾ ಗಂಭೀರವಾದರೂ ನಿರಂತರ ಚಿಕಿತ್ಸೆ, ಸಮಾಜದ ಬೆಂಬಲ ಮತ್ತು ಕುಟುಂಬದ ಸಹಕಾರದಿಂದ ಉತ್ತಮ ಜೀವನ ಸಾಗಿಸಲು ಹಾಗು ತ್ವರಿತವಾಗಿ ಗುರುತಿಸಿ ಚಿಕಿತ್ಸೆ ನೀಡಿದರೆ, ಪೀಡಿತರು ಸಮಾಜದಲ್ಲಿ ಅರ್ಥಪೂರ್ಣ ಜೀವನವನ್ನು ನಡೆಸಬಹುದು.
ಧನುಷ್ ಭಟ್
9945266006
