ಆದ್ಯೋತ್ “ಆಪ್ತಸಮಾಲೋಚನೆ”

ಆದ್ಯೋತ್ ಸುದ್ದಿನಿಧಿ
ಇವತ್ತಿನ ಸಂಚಿಕೆಯಲ್ಲಿ ಜೀವನದ ಬಹು ದೊಡ್ಡ ಸಂಭ್ರಮದ ಘಟ್ಟ,ಅವಿಸ್ಮರಣಿಯ ಕ್ಷಣ, ಹೋಸ ಸಂಬಂಧಗಳನ್ನು ಬೇಳೆಸುವ ಕಾಯ೯ವಾದ ಮದುವೆಯ ಬಗ್ಗೆ ಚಚಿ೯ಸೊಣ.
ಜೀವನವು ಹಂತ ಹಂತದ ಅಭಿವೃದ್ದಿಗೆ ಮದುವೆ ಅಥವಾ ವಿವಾಹವು ಬಹು ಮುಖ್ಯವಾದ ಪಾತ್ರವನ್ನು ವಹಿಸುವುದಲ್ಲದೆ ಸಾಮಾಜಿಕವಾಗಿಯು ವೈಜ್ಞಾನಿಕವಾಗಿಯು ಇದರ ಮಹತ್ವವು ಹಾಗು ಪ್ರಾಮುಖ್ಯತೆಗಳಾಗಿವೆ
ಮದುವೆ ಕೇವಲ ಗಂಡು ಹೆಣ್ಣಿಗೆ ಮಾತ್ರ ಸೀಮಿತವಾಗಿರದೆ ಎರಡು ಕುಟುಂಬಗಳಿಗೆ,ಪಂಗಡಗಳಿಗೆ ಸಂಬಂಧ ಬೆಸೆಯುವ ಕೊಂಡಿಯಾಗಿ ಪ್ರತೀಷ್ಠೆ ಹಾಗು ಸನ್ಮಾನ , ಗೌರವಗಳನ್ನು ಪ್ರತಿ ಬಿಂಬವಾಗಿ ಮಾಪ೯ಟ್ಟಿದೆ. ಹಲವರು ತಮ್ಮ ಲಾಭಗಳಿಗೆ, ಪ್ರತೀಷ್ಠೆಗಳಿಗೆ,ಆತ್ಮ ಗೌರವವನ್ನು,ಹಣದ ಮತ್ತನ್ನು ತಮ್ಮ ಕೌಟುಂಬಿಕ ಶಕ್ತಿ ಪ್ರದಶ೯ನಕ್ಕಾಗಿಯೂ ಬಳಸಿಕೋಳ್ಳುವವರಿದ್ದಾರೆ. ಆಡಂಬರದ ವಿವಾಹಗಳು , ಕೆಲವು ದಿನಗಳವರೆಗೆ ಸಮಾಜದ,ಅರಳಿಕಟ್ಟಯ ವಿಷಯವಾಗಿಯೂ ಚಹಾ, ಬಿಸ್ಕತ್ತಿನ ಜೋತೆ ಹರಟೆಯ ವಿಷಯವಾಗಿಯೂ ಹರಿದಾಡುತ್ತವೆ ಆದರೇ 100 ಕ್ಕೆ 10 ಮದುವೆಗಳ ವಿವಾಹ ಭೋಜನ ಮುಗಿಯುವ ಮೊದಲೇ ಸಂಬಂಧಗಳಲ್ಲಿ ಬಿರುಕು ಮೂಡುವುದು ವೈವಾಹಿಕ ಜೀವನ ಅಂತ್ಯಗೊಳ್ಳುವ ಹಂತ ತಲುಪಿದ್ದು ಹಲವರಿಗೆ ತಿಳಿಯದೆ ಹೋಗುತ್ತದೆ.
ಹಿಂದೆ ಮದುವೆಯು ಜಾತಿ, ಮತ,ಧಮ೯,ಪಂಗಡಗಳ ಒಳಗಡೆ ನಡೆಯುತ್ತಿದ್ದವು.ಅದರೆ ಈಗಅಂತರ್ಜಾತಿ,ಅಂತರಧಮ೮ಗಳ ಮದುವಡಯೂ ಹೆಚ್ಚಾಗುತ್ತಿದೆ. ಇನ್ನು ಪ್ರೇಮ ವಿವಾಹಕ್ಕೆ ಬಂದರೆ ಪ್ರೀತಿಗೆ ಕಣ್ಣಿಲ್ಲ , ಯಾರನ್ನು ಹೇಳಿ ಕೇಳಿ ಬುರುವುದಿಲ್ಲವೆಂದು , ಮನಸ್ಸುಗಳ ಮಿಲನವೆಂದು ಹೇಳಿ ಕಣ್ಣಿರುವವರೇ ತಪ್ಪು ನಿಧಾ೯ರಗಳನ್ನು ಹೆಜ್ಜೆಗಳನ್ನಿಟ್ಟು ಜೀವನವನ್ನು ಹಾಳು ಮಾಡಿಕೊಂಡಿರುವ ನಿದಶ೯ನಗಳೂ ಇವೆ, ಎಲ್ಲವನ್ನು ಮೆಟ್ಟಿನಿಂತು ತಮ್ಮನ್ನು ನಂಬಿರುವ ಸಂಗಾತಿಯ ಏಳಿಗೆ , ಯಶಸ್ಸನ್ನು ಅವರ ಜೀವನದ ಗುರಿಯನ್ನು ಮುಟ್ಟುವಲ್ಲಿ ಬೆನ್ನೆಲುಭಾಗಿ ನಿಂತಿರುವವರು ಅತ್ಯಧಿಕ ಸಂಖ್ಯೆಯಲ್ಲಿ ದೊರೆಯುತ್ತಾರೆ ಇಬ್ಬರಿಗೂ ಇರುವ ಸಾಸಿವೆ ಕಾಳಿನ ವ್ಯತ್ಯಾಸವೆಂದರೆ ಸರಿಯಾದ ಸಂಗಾತಿಯನ್ನು ಆರಿಸುವುದು. ಪ್ರೀತಿ ಮಾಡುವ ಜೋಡಿಗಳು ಮೋದಲು ಅಥ೯ಮಾಡಿಕೊಳ್ಳ ಬೇಕಾದ ಸಂಗತಿಯೆಂದರೆ ಪ್ರೇಮವೆಂದರೆ ಒಂದು ಶಿಲೆ ಕಲ್ಲಿನಂತೆ ಯಾವ ಕಲ್ಲು ಕೂಡ ವಿಗ್ರಹವಾಗಿ ಮೂಡಿರುವುದಿಲ್ಲ ಶಿಲ್ಪಿಯ ಕೆತ್ತನೆಯ ಚಾತುಯ೯ಗಳಿಂದ ರೂಪುಗೊಳ್ಳವುದಾಗಿದ್ದು ಪ್ರೇಮಿಗಳು ಕೂಡ ತಮ್ಮ ಸಂಗಾತಿಯನ್ನು ಕೂಡಿಕೊಂಡು ಇಷ್ಟ ಕಷ್ಟಗಳನ್ನು ಸಮನಾಗಿ ಹಂಚಿಕೊಂಡು , ಖುಷಿ ದುಖಃಗಳಲ್ಲಿ ಭಾಗಿಯಾಗಿ ಒಬ್ಬರ ಜೀವನವನ್ನು ರೂಪಿಸಿಕೊಳ್ಳಲು ನೆರವಾದರೆ ಗಭ೯ಗುಡಿಯಲ್ಲಿರುವ ವಿಗ್ರಹವಾಗುತ್ತಿರಿ ಇಲ್ಲವಾದರೇ ದಾರಿಯ ಮೆಟ್ಟಿಲುಗಳಾಗಿ ಅದರ ನೋವನ್ನು ನೀವು ಮಾತ್ರವಲ್ಲದೆ ಪೋಷಕರು ಅನುಭವಿಸುವಂತಾಗುತ್ತದೆ.
ಯಾವುದೆ ರೀತಿಯ ಆಚರಣೆ ಸಂಪ್ರದಾಯ,ಪದ್ಧತಿಗಳಿಗೆ ಅದರದೆ ಆದ ಹಿನ್ನೆಲೆಯಿರುತ್ತದೆ. ಆಚರಣೆಗಳಲ್ಲಿ ಬದಲಾವಣೆಗಳಾಗಿರಬಹುದು ಹಾಗಿದ್ದರೆ ವಿವಾಹದ ಹಿನ್ನೆಲೆಗಳ ಬಗ್ಗೆ ನೋಡೊಣ.
ಪ್ರಾಚೀನ ಕಾಲದ ವಿವಾಹ;-
ವಿವಾಹವು ಇತಿಹಾಸದಲ್ಲಿನ ಅತ್ಯಂತ ಹಳೆಯ ಸಾಮಾಜಿಕ ಸಂಸ್ಥೆ. ಪ್ರಾಚೀನ ಕಾಲದಲ್ಲಿ ವಿವಾಹವು ಕೇವಲ ಇಬ್ಬರ ವೈಯಕ್ತಿಕ ಸಂಬಂಧವಾಗಿರದೆ, ಅದು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ವ್ಯವಸ್ಥೆಯಾಗಿತ್ತು . ವಿವಾಹದ ಉದ್ದೇಶ ಸಮಾಜದಲ್ಲಿ ಶಿಸ್ತು, ಆಸ್ತಿಪಾಸ್ತಿ ನಿರ್ವಹಣೆ ಹಾಗೂ ವಂಶವೃದ್ಧಿಯನ್ನು ಕಾಪಾಡುವ ಜವಬ್ಧಾರಿಯನ್ನು ಹೊಂದಿತ್ತು.
1 ವಿವಾಹದ ಮೂಲ ಮತ್ತು ಉದ್ದೇಶ;-
ಪ್ರಾಚೀನ ಕಾಲದ ಸಮಾಜಗಳಲ್ಲಿ ವಿವಾಹವನ್ನು ಮುಖ್ಯವಾಗಿ ಸಮಾಜದ ಸ್ಥಿರತೆ ಮತ್ತು ವಂಶವೃದ್ಧಿಯ ದೃಷ್ಟಿಯಿಂದ ನಡೆಸಲಾಗುತ್ತಿತ್ತು. ಪ್ರೇಮ ಅಥವಾ ವೈಯಕ್ತಿಕ ಆಸಕ್ತಿ ಪ್ರಧಾನವಾಗಿಲ್ಲದಿದ್ದರೂ ಕುಟುಂಬದ ಗೌರವ ಮತ್ತು ಬದುಕುಳಿಯುವಿಕೆ ಮುಖ್ಯವಾಗಿತ್ತು.
ಪುರುಷರನ್ನು ರಕ್ಷಕರನ್ನಾಗಿ ಮತ್ತು ಮಹಿಳೆಯನ್ನು ಮನೆಯ ನಿರ್ವಹಣಾ ಮತ್ತು ಸಂತಾನೋತ್ಪತ್ತಿಗೆಗಾಗಿ ಬಳಸಿಕೊಳ್ಳುತ್ತಿದ್ದದರು ಇತಿಹಾದಲ್ಲಿಯೂ ವಿವಾಹವು ಇಬ್ಬರಿಗಿಂತ ಹೆಚ್ಚು, ಎರಡು ಕುಟುಂಬಗಳ ಅಥವಾ ಕುಲಗಳ ಐಕ್ಯತೆಯ ಸಂಕೇತವಾಗಿತ್ತು.
2 ಪ್ರಾಚೀನ ನಾಗರಿಕತೆಗಳಲ್ಲಿನ ವಿವಾಹ
ಪ್ರಾಚೀನ ಭಾರತದಲ್ಲಿ:
ಮದುವೆಯನ್ನು ʼವಿವಾಹ ಸಂಸ್ಕಾರʼ ಎಂದು ಕರೆಯಲಾಗುತ್ತಿತ್ತು ಮತ್ತು ಅದನ್ನು ಧಾರ್ಮಿಕ ಕರ್ತವ್ಯ (ಧರ್ಮ) ಎಂದು ಪರಿಗಣಿಸಲಾಗುತ್ತಿತ್ತು. ವೇದಗಳಲ್ಲಿ ವಿವಾಹವನ್ನು ಪುರುಷ ಮತ್ತು ಸ್ತ್ರೀಯರನ್ನು ಆಧ್ಯಾತ್ಮಿಕ ಬೆಳವಣಿಗೆಯ ಮಾರ್ಗವೆಂದು ವರ್ಣಿಸಲಾಗಿದೆ.
ಹಿಂದೂ ಗ್ರಂಥಗಳಲ್ಲಿ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಗಂಧರ್ವ, ಮತ್ತು ಅಸುರ ವಿವಾಹ ಎಂಬ ವಿವಿಧ ರೀತಿಯ ವಿವಾಹ ಪ್ರಕಾರಗಳನ್ನು ಉಲ್ಲೇಖಿಸಲಾಗಿದೆ.
3-ಪ್ರಾಚೀನ ಗ್ರೀಸ್ ಮತ್ತು ರೋಮ್‌ನಲ್ಲಿ:
ವಿವಾಹಗಳು ರಾಜಕೀಯ ತಂತ್ರ ಅಥವಾ ಆಸ್ತಿಯ ಹಕ್ಕುಗಳಿಗಾಗಿ ನಡೇಸುತ್ತಿದ್ದರು ಪ್ರೀತಿ ಪ್ರೇಮಕ್ಕೆ ಅಷ್ಟೊಂದು ಮಹತ್ವ ನೀಡಲಾಗುತ್ತಿರಲಿಲ್ಲವಾದರೂ ಕುಟುಂಬದ ಗೌರವ ಮತ್ತು ನಿಷ್ಠೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು
4-ಪ್ರಾಚೀನ ಈಜಿಪ್ಟ್‌ನಲ್ಲಿ:
ವಿವಾಹವನ್ನು ಜೀವಿತಪರ್ಯಂತದ ಸಹಭಾಗಿತ್ವವೆಂದು ಪರಿಗಣಿಸಲಾಯಿತು. ಗಂಡು ಮತ್ತು ಹೆಣ್ಣು ಇಬ್ಬರೂ ಮನೆಯ ಜವಾಬ್ದಾರಿಗಳನ್ನು ಹಂಚಿಕೊಂಡು ಜೀವನ ನಡೆಸುತ್ತಿದ್ದರು.
5-ಮಧ್ಯಪೂರ್ವ ಮತ್ತು ಇಸ್ಲಾಮಿಕ್ ಸಂಪ್ರದಾಯಗಳಲ್ಲಿ:
ವಿವಾಹವನ್ನು ʼನಿಕಾಹ್ʼ ಎಂಬ ಸಾಮಾಜಿಕ ಒಪ್ಪಂದವಾಗಿ ಪರಿಗಣಿಸಲಾಗುತ್ತಿತ್ತು. ಇದರಲ್ಲಿ ಪತಿ-ಪತ್ನಿಯ ಹಕ್ಕುಗಳು ಮತ್ತು ಕರ್ತವ್ಯಗಳು ಸ್ಪಷ್ಟವಾಗಿ ನಿರ್ಧರಿಸಲಾಗಿದ್ದವು. ಇದರ ಉದ್ದೇಶ ನೈತಿಕತೆ, ಕುಟುಂಬ ಸ್ಥಿರತೆ ಮತ್ತು ವಂಶವೃದ್ಧಿ ಕಾಪಾಡುವುದು ಮುಖ್ಯ ಗುರಿಯಾಗಿದ್ದವು
ಬಹುತೇಕ ಪ್ರಾಚೀನ ವಿವಾಹಗಳು ವ್ಯವಸ್ಥಿತ ಅಥವಾ ಕುಟುಂಬದ ನಿರ್ಧಾರದಿಂದ ನಡೆದಿದ್ದರೂ, ಅದರಲ್ಲಿ ಭಾವನಾತ್ಮಕ ಬಾಂಧವ್ಯಕ್ಕೂ ಪ್ರಾಮುಖ್ಯತೆ ಇತ್ತು. ರಾಮಾಯಣ, ಮಹಾಭಾರತ ಮತ್ತು ಗ್ರೀಕ್ ಪುರಾಣಗಳಲ್ಲಿಯೂ ಸಹ ಪತಿ-ಪತ್ನಿಯ ಪ್ರೀತಿ, ನಿಷ್ಠೆ ಮತ್ತು ತ್ಯಾಗದ ಉದಾಹರಣೆಗಳು ಕಾಣುತ್ತವೆ ವಿವಾಹವು ಸಾಮಾಜಿಕ ಶಿಸ್ತು ಮತ್ತು ಸಂಸ್ಕೃತಿಯ ನಿರಂತರತೆ ಕಾಪಾಡುವ ಪ್ರಮುಖ ವ್ಯವಸ್ಥೆಯಾಗಿತ್ತು. ವಿವಾಹದ ಮೂಲಕ ಕುಟುಂಬ ವ್ಯವಸ್ಥೆ, ಆಸ್ತಿಯ ಹಕ್ಕುಗಳು ಮತ್ತು ನೈತಿಕ ಹೊಣೆಗಾರಿಕೆಗಳು ನಿಶ್ಚಿತವಾಗುತ್ತವೆ. ಬಹುತೇಕ ಸಂಪ್ರದಾಯಗಳಲ್ಲಿ ಅವಿವಾಹಿತ ಸ್ಥಿತಿ ಅಸಂಪೂರ್ಣ ಅಥವಾ ಸಾಮಾಜಿಕವಾಗಿ ಅಸಮರ್ಪಕವೆಂದು ಪರಿಗಣಿಸಲ್ಪಟ್ಟಿತ್ತು.
ಕಾಲಕ್ರಮೇಣ ವಿವಾಹದ ಅರ್ಥವು ಬದಲಾಗಿದೆ — ಸಂಪ್ರದಾಯಕ್ಕಿಂತ ಆಡಂಭರಗಳೆ ಹೆಚ್ಚಾಗಿದ್ದು ನಿಧಾನವಾಗಿ ಅವನತಿಯ ಹಂತಕ್ಕೆ ಸಾಗುತ್ತಿರುವುದು ಶೋಚನಿಯ. ಹಾಗಿದ್ದರೆ ಮದುವೆಯಿಂದ ಅಥವಾ ನಂತರದ ಹಂತಗಳಿಂದ ಉಂಟಾಗ ಬಹುದಾದ ಮಾನಸಿಕ ಅಸಮತೋಲನೆಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೊಣ ..
ಧನುಷ್‌ ಭಟ್‌
9945266006

About the author

Adyot

Leave a Comment