ಶಿರಸಿಯಲ್ಲಿ ಸಂಪನ್ನಗೊಂಡ ಆರ್‌ಎಸ್‌ಎಸ್ ಪಥಸಂಚಲನ

ಆದ್ಯೋತ್ ಸುದ್ದಿನಿಧಿ:
ಆರ್‌ಎಸ್‌ಎಸ್ ಸ್ಥಾಪನೆಯಾಗಿ ೧೦೦ ವರ್ಷ ಆಗಿರುವ ಪ್ರಯುಕ್ತ ರಾಷ್ಟ್ರಾದ್ಯಂತ ನಡೆಯುತ್ತಿರುವ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಶನಿವಾರ ಶಿರಸಿಯಲ್ಲೂ ನಡೆಯಿತು.

ನಗರದ ವಿಕಾಸ ಆಶ್ರಮ ಮೈದಾನದ ಬಳಿಯಿಂದ ಆರಂಭಗೊಂಡ ಪಥಸಂಚಲನ ಮಾರಿಕಾಂಬಾ ಹೈಸ್ಕೂಲ್, ಮಹಾಸತಿ ಸರ್ಕಲ್, ಭಗತ್‌ಸಿಂಗ್ ರಸ್ತೆ, ದೇವಿಕೆರೆ, ನಟರಾಜ ರಸ್ತೆ, ಬಸ್‌ಸ್ಟ್ಯಾಂಡ್ ಸರ್ಕಲ್, ಶಿವಾಜಿ ಚೌಕ, ಚನ್ನಪಟ್ಟಣ ಬಝಾರ್ ಮಾರ್ಗವಾಗಿ ದೇವಿಕೆರೆ, ಹೊಸಪೇಟೆ ರಸ್ತೆ ಮೂಲಕ ಅಶ್ವಿನಿ ಸರ್ಕಲ್ ಆಗಮಿಸಿ ವಿಕಾಸಾಶ್ರಮದಲ್ಲಿ ಕೊನೆಗೊಂಡಿತು.
ವಿಕಾಸಾಶ್ರಮದಲ್ಲಿ ನಡೆದ ಸಾರ್ವಜನಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರಿಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ,ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ತಾನು ಮಾಡುವ ಉತ್ತಮ ಕೆಲಸ ಕಾರ್ಯಗಳಿಂದ ಆತ ದೊಡ್ಡವನಾಗುತ್ತಾನೆ ನಮ್ಮ ರಾಷ್ಟ್ರದ ಪರಂಪರೆಯನ್ನು ಮಕ್ಕಳಿಗೆ ತಿಳಿಸಬೇಕು. ಮುಂದಿನ ಪೀಳಿಗೆ ನಿಜವಾದ ಹಿಂದೂವಾಗಿ ಬದುಕಬೇಕು. ಭಾರತ ಮಾತೆಯ ಹಿತಕ್ಕಾಗಿ ಬದುಕುವ ಜನರಿಗೆ ಅನ್ಯಾಯವಾಗದಂತೆ ಮಾಡಬೇಕು. ಪ್ರಕೃತಿಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಿಂದೂ ಹಿಂದುವಿಗಾಗಿ ಬದುಕಬೇಕು.ರಾಷ್ಟ್ರಕ್ಕಾಗಿ ಬದುಕಬೇಕು. ನನ್ನ ದೇಶದ ಘನತೆ ಗೌರವ ಹೆಚ್ಚಾಗಬೇಕು ಆ ನಿಟ್ಟಿನಲ್ಲಿ ನಾವು ಬದುಕಬೇಕು. ವಸುಧೈವ ಕುಟುಂಬಕA ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಪ್ರಾಚಿನ ಪರಂಪರೆಯ ವಾರಸುದಾರನಾಗಿ ನಾವು ಬದುಕಬೇಕು. ಆಗ ಆಗ ಇಡೀ ಪ್ರಪಂಚವನ್ನು ಹೃದಯದಿಂದ ಗೆಲ್ಲಲು ಸಾಧ್ಯವಿದೆ ಎಂದರು.


ಮೂಲಭೂತ ನಂಬಿಕೆಯನ್ನು ಇಟ್ಟುಕೊಂಡು ನಾವು ಹೊರಡಬೇಕಾಗಿದೆ. ಇದು ಹಿಂದೂ ರಾಷ್ಟ್ರ. ರಾಷ್ಟ್ರದ ವಾರಸುದಾರನಾಗಿ ಕರ್ತವ್ಯ ನಿರ್ವಹಿಸಬೇಕು ತಾಯಿಗಾಗಿ ನಾವು ಕೆಲಸ ಮಾಡಬೇಕು ಎಂಬ ತತ್ವವನ್ನು ಇಟ್ಟುಕೊಂಡು ಸಂಘವನ್ನು ಆರಂಭಿಸಲಾಗಿದೆ. ಸಂಘವು ನಿರಂತರವಾಗಿ ಬೆಳೆಯುತ್ತಿದೆ. ರಾಷ್ಟ್ರಕ್ಕಾಗಿ ಬದುಕಬೇಕು ಎಂಬ ಭಾವ ಎಲ್ಲರಲ್ಲೂ ಮೂಡುತ್ತಿದೆ. ಜನರು ಅಪಹಾಸ್ಯ ಮಾಡಿದರೂ ಬೇಸರ ಮಾಡಿಕೊಳ್ಳದೇ ಜನರನ್ನು ಭೇಟಿ ಮಾಡಿ ನಾವೆಲ್ಲರೂ ಒಂದು ಎಂಬ ಭಾವವನ್ನು ಮೂಡಿಸಿ ಡಾ.ಹೆಗಡೆವಾರ್ ಸಂಘವನ್ನು ಕಟ್ಟಿಬೆಳೆಸಿದರು. ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶದಲ್ಲೂ ನಾವು ಸಂಘವನ್ನು ಪ್ರಾರಂಭಿಸಿದ್ದೆವೆ.

ಜನರಲ್ಲಿ ಸಂಘದ ಮೇಲೆ ಪ್ರೀತಿ ಗೌರವ ಹೆಚ್ಚಾಗುತ್ತಿದೆ ಪ್ರವಾಹ, ಭೂಕಂಪ ಸೇರಿದಂತೆ ದುಃಖಿತರಿಗೆ ನೆರವಾಗಿ ಸಂಘವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇವೆಲ್ಲದರ ಪರಿಣಾಮವಾಗಿ ಜನರು ಸಂಘವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ಉಪಹಾಸವನ್ನು, ವಿರೋಧವನ್ನೂ ಲೆಕ್ಕಿಸದೆ ಸಂಘ ಸಾಗರೋಪಾದಿಯಲ್ಲಿ ಬೆಳೆಯುತ್ತಿದೆ. ಭಾರತ ತನ್ನ ತಾಯಿ. ದೇಶದ ಕಣಕಣವೂ ಪವಿತ್ರವಾದದ್ದು . ಭಾರತದಲ್ಲಿ ಹುಟ್ಟಿದ ಪ್ರತಿಯೋಬ್ಬರು ನನ್ನವರು ಎಂಬ ಭಾವನೆಯನ್ನು ಸಂಘ ಮೂಡಿಸಿದೆ. ಸಮಾಜ ಇಂದು ಸಹಜವಾಗಿ ಸ್ಪಂದಿಸುತ್ತಿದೆ.ನಾವೆಲ್ಲರೂ ಹಿಂದೂಗಳು ಎಂಬ ಭಾವವನ್ನು ಮೂಡಿಸುವಲ್ಲಿ ಸಂಘ ಯಶಸ್ವಿಯಾಗಿದೆ.ಸಮಾಜದಲ್ಲಿ ಹಿಂದೂ ಭಾವ ಬೆಳೆದಿದೆ. ಹಿಂದೂಗಳೆಲ್ಲ ಸಹೋದರರು. ಜಾತಿಗಳ ಬೇಧಭಾವ ಇಲ್ಲದ ಭಾವವನ್ನು ಬೆಳೆಸಿದೆ. ಹಿಂದೂ ಅಮರ ಪರಾಕ್ರಮಿ. ದುಷ್ಟರ ಬಲವನ್ನು ತಗ್ಗಿಸುವ ಪರಾಕ್ರಮಿ ಹಿಂದೂ.

ಅಯೋಧ್ಯೆ ರಾಮಮಂದಿರವನ್ನು ನಿರ್ಮಾಣ ಮಾಡಲು ಯಶಸ್ವಿಯಾಗಿದ್ದೇವೆ. ಭಾರತದ ಸ್ವಾಭಿಮಾನದ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಕೋಟಿ ಕೋಟಿ ಜನರ ಭಾವನೆ ರಾಮನ ರೂಪದಲ್ಲಿ ತೋರುತ್ತಿದೆ. ರಾಷ್ಟ್ರದ ಹಿತಕ್ಕಾಗಿ ಸಾಧು ಸಂತರು ಸೇರಿದಂತೆ ಸಾಕಷ್ಟು ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಶಿರಸಿ ವಿಭಾಗ ಸಂಘಚಾಲಕ ರಾಮಚಂದ್ರ ಕಾಮತ್ , ಜಿಲ್ಲಾ ಸಂಘ ಚಾಲಕ ಶಂಕರನಾರಾಯಣ ಹೊಸಕೊಪ್ಪ ಹಾಗೂ ಗಣಪತಿ ಜೊಗಳೇಕರ, ಸು. ರಾಮಣ್ಣ
ಉಪಸ್ಥಿತರಿದ್ದರು

About the author

Adyot

Leave a Comment