ಆದ್ಯೋತ್ ಸುದ್ದಿನಿಧಿ;
ಸಿದ್ದಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿಯ ನಿಮಿತ್ತ ಪಥಸಂಚಲನ ಹಾಗೂ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.


ನೆಹರೂ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಪರ್ಯಾವರಣ ಗತಿ ವಿಧಿಯ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಸಂಯೋಜಕ ಜಯರಾಮ ಬೊಳ್ಳಾಜೆ, ಹಿಂದೂತ್ವ ಎನ್ನುವುದು ಜಾತಿಪದ್ದತಿಯಲ್ಲ ಇದೊಂದು ಜೀವನ ಪದ್ಧತಿ. ಧರ್ಮ ಯಾವುದೇ ಇರಲಿ ದೇಶ ಮೊದಲು ಎನ್ನುವುದು ಹಿಂದೂಗಳ ನಿಲುವು ಪರಿಶ್ರಮದಿಂದ ಮಾತ್ರ ಮಹಾಪುಷರಾಗಲು ಸಾಧ್ಯವೇ ವಿನಃ ಜಾಹೀರಾತು ಮತ್ತು ಪತ್ರಿಕೆಗಳ ಹೇಳಿಕೆಗಳ ಮೂಲಕ ಆಗಲು ಸಾಧ್ಯವಿಲ್ಲ

ಎಲ್ಲರನ್ನೂ ಒಂದುಗೂಡಿಸಿ, ಒಂದೇ ಉದ್ದೇಶಕ್ಕೆ ಜನರನ್ನು ಒಗ್ಗೂಡಿದ ಸಂಘಟನೆ ಸ್ವಯಂ ಸೇವಕ ಸಂಘ. ಸಂಘದಲ್ಲಿ ಆಗಿ ಹೋದ ೫ ಜನ ಸರಸಂಘಚಾಲಕರರು ದೇಶದಕ್ಕೆ ನೀಡಿದ ಕೊಡುಗೆ ಅಪಾರ. ೩ ಬಾರಿ ಸಂಘದ ಮೇಲೆ ನಿರ್ಬಂಧ ಹೇರಲಾಯಿತು. ಆದರೂ ಜಗ್ಗದೇ ಮುನ್ನಡೆದೆವು. ಇಂದು ೪೦ ಕ್ಕೂ ಹೆಚ್ಚು ದೇಶಗಳಲ್ಲಿ ಸಂಘದ ಶಾಖೆಗಳು ನಡೆಯುತ್ತಿವೆ. ಒಂದು ಸಂಘಟನೆ ವಿಕಾಸಪಥದತ್ತ ಬೆಳೆಯುತ್ತಿದೆ ಎಂದರೆ ಅದು ಸಾಕಷ್ಟು ಕಷ್ಟದ ಹಾದಿಯನ್ನು ಸವೆಸಿದೆ ಡಾಕ್ಟರ್ ಹೆಡಗೆವಾರ್ ಕಾಂಗ್ರೆಸ್‌ನ ಕಾರ್ಯದರ್ಶಿ ಆಗಿದ್ದವರು. ಅಲ್ಲಿನ ತುಷ್ಟೀಕರಣ ನೀತಿಯಿಂದ ಬೇಸತ್ತು ನಾಲ್ಕು ಜನ ಮಕ್ಕಳೊಂದಿಗೆ ಸಂಘವನ್ನು ಸ್ಥಾಪಿಸಿದರು.

ಇಂದು ಭಾರತ ಜಗತ್ತಿಗೆ ಬೆಳಕನ್ನು ನೀಡುವ ಸ್ಥಾನದಲ್ಲಿ ನಿಂತಿದೆ ಇದಕ್ಕೆ ಕಾರಣ ಸಂಘದ ಶಿಸ್ತು,ಸಂಸ್ಕಾರ ಪಡೆದ ವ್ಯಕ್ತಿಯಾಗಿದ್ದಾರೆ. ದೇಶವನ್ನು ಬೆಳೆಸುವ ಕಾಯಕಕ್ಕೆ ನಾವು ಸ್ವದೇಶ ಉತ್ಪನ್ನ ಬಳಸುವುದು,ಕುಟುಂಬದ ಪ್ರಬೋಧನೆ,ನಾಗರಿಕ ಶಿಷ್ಟಾಚಾರ,ಪರಿಸರ ರಕ್ಷಣೆ ಈ ನಾಲ್ಕನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿ ಮಹಾಬಲೇಶ್ವರ ರಾಮಾ ಗೌಡ ಸರಕುಳಿ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ಇರುವ ಒಂದೇ ಒಂದು ಸಂಘ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜೈ ಕಾರ ಮತ್ತು ಧಿಕ್ಕಾರ ಇಲ್ಲದ ಸಂಘಟನೆ ಇದಾಗಿದೆ. ಈ ಸಂಘಟನೆಯಲ್ಲಿ ಜೈ ಕಾರ ಹೇಳುವುದು ತಾಯಿ ಭಾರತಾಂಬೆಗೆ ಮಾತ್ರವಾಗಿದೆ ದೆಶದಲ್ಲಿ ಹಲವಾರು ಸಂಘಟನೆಗಳಿವೆ ಆದರೆ ದೇಶ ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುವ,ದೇಶವಾಸಿಗಳಿಗೆ ತೊಂದರೆಯಾದಾಗ ರಕ್ಷಣೆಗಾಗಿ ನಿಲ್ಲುವ ಏಕೈಕ ಸಂಘ ಆರ್‌ಎಸ್‌ಎಸ್ ಆಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಂಘದ ಸ್ವಯಂ ಸೇವಕರ ಪಥಸಂಚಲನ ಪಟ್ಟಣದ ರಾಘವೇಂದ್ರ ಮಠದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿ ನೆಹರೂ ಮೈದಾನಲ್ಲಿ ಮುಕ್ತಾಯಗೊಂಡಿತು. ಸಭೆಯಲ್ಲಿ ಶಿರಸಿ ಜಿಲ್ಲೆಯ ಸಂಘ ಚಾಲಕ ಶಂಕರನಾರಾಯಣ ಹೊಸಕೊಪ್ಪ, ತಾಲ್ಲೂಕು ಸಂಘಚಾಲಕಸೋಮಶೇಖರ ಗೌಡರ್ ಇದ್ದರು.


ರಾಜಶೇಖರ ಅರೆಂದೂರು ಸ್ವಾಗತಿಸಿದರು. ಮಂಜುನಾಥ ಹೊನ್ನಮಡಿಕೆ ವಂದಿಸಿದರು.ಈಶ್ವರ ರಾಗಿಹೊಸಳ್ಳಿ ನಿರ್ವಹಿಸಿದರು.
