ಶಿಕ್ಷಕರ ಅರ್ಹತಾ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ನವದೆಹಲಿಯ ಜಂತರ ಮಂತರದಲ್ಲಿ ಶಿಕ್ಷಕರ ಬೃಹತ್ ಪ್ರತಿಭಟನೆ

ಆದ್ಯೋತ್ ಸುದ್ದಿನಿಧಿ:
ಅಖಿಲ ಭಾರತ ಶಿಕ್ಷಕರ ಪೆಡರೇಷನವತಿಯಿಂದ ನವದೆಹಲಿಯ ಜಂತರ ಮಂತರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ ಜರುಗಿತು


ಅಖಿಲ ಭಾರತ ಶಿಕ್ಷಕರ ಪೆಡರೇಷನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಸೇವೆಯಲ್ಲಿ ಇರುವ ಶಿಕ್ಷಕರುಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಗೊಳಿಸಿದ ಕೇಂದ್ರ ಸರಕಾರದ ಆದೇಶ ಪ್ರಕಾರ ಸುಪ್ರೀಂ ಕೋರ್ಟ್ 2025 ಸಪ್ಟಂಬರ 1 ರಂದು ತೀರ್ಪು ನೀಡಿದೆ ಇದರಿಂದ ದೇಶದ 30 ಲಕ್ಷ ಶಿಕ್ಷಕರು ಸೇವೆಯಿಂದ ವಜಾಆಗುವ ಭೀತಿ ಎದುರಿಸುತಿದ್ದಾರೆ ಕೇಂದ್ರ ಹಾಗೂ ಎಲ್ಲ ರಾಜ್ಯ ಸರಕಾರಗಳೂ ಈ ಕುರಿತು ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಬೇಕು ಮತ್ತು ಕೇಂದ್ರ ಸರಕಾರ NCTE ಯ ಆದೇಶ ರದ್ದುಗೊಳಿಸಿ ಸೇವಾನಿರತ ಶಿಕ್ಷಕರುಗಳಿಗೆ ನಿಗದಿಗೊಳಿಸಿದ ಪರೀಕ್ಷೆ ಕೈ ಬಿಡಬೇಕೆಂದು ಆಗ್ರಹಿಸಿದರು


ಸೇವಾನಿರತ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸರಕಾರಿ ಹಾಗೂ ಖಾಸಗಿ ಉದ್ಯೋಗದಲ್ಲಿ ಇದ್ದಾರೆ ಇಂತಹ ವಿದ್ಯಾರ್ಥಿಗಳ ವಿದ್ಯಾರ್ಹತೆ ಮತ್ತು ಅವರು ಮಾಡುವ ಉದ್ಯೋಗದಿಂದ ವಜಾ ಮಾಡಲು ಸಾಧ್ಯವೆ? ಇದು ಸಹಜ ನ್ಯಾಯ ತತ್ವಕ್ಕೆ ವಿರೋಧವಾಗಿದ್ದು ಸೇವಾನಿರತ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಗೊಳಿಸಿರುವದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಬಿಡಬೇಕೆಂದು ಒತ್ತಾಯಿಸಿದರು. ಹಾಗೂ ತಕ್ಷಣ ಹಳೇ ಪಿಂಚಣಿ ಯೋಜನೆ ಜಾರಿ ಗೊಳಿಸಬೇಕು ಮುಂದಿನ ಹಂತದ ಹೋರಾಟದ ನಿರ್ಧಾರವನ್ನು ತಕ್ಷಣ ಪ್ರಕಟಿಸುವದಾಗಿ ತಿಳಿಸಿದರು

ಉತ್ತರಪ್ರದೇಶ ವಿಧಾನ ಪರಿಷತ್ ಸದಸ್ಯ ದೇವೆಂದ್ರ ಪ್ರತಾಪಸಿಂಗ್ ಅಖಿಲ ಭಾರತ ಶಿಕ್ಷಕರ ಪೇಡೆರೇಷನ ಮಹಾ ಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ ಉಮಾಶಂಕರ ಸಿಂಗ,ಚಂದ್ರಶೇಖರ ನುಗ್ಗಲಿ, ಹರಿಗೋವಿಂದನ್ ವಿನೋದ ತ್ಯಾಕರಾನ್ ಸಂಜಯ ಮಿಶ್ರಾ, ಸೀಮಾ ಮಾತುರಣ ಯೋಗೇಂದ್ರ ತಿವಾರಿ, ರಂಗರಾಜನ್,ರಮಾದೇವಿ ವಿವಿಧ ರಾಜ್ಯಗಳ ಅಧ್ಯಕ್ಷ ಕಾರ್ಯದರ್ಶಿ ಪದಾದಿಕಾರಿಗಳು ಮಾತನಾಡಿದರು ದೇಶದ ವಿವಿಧ ರಾಜ್ಯಗಳಿಂದ 20 ಸಾವಿರ ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

About the author

Adyot

Leave a Comment