ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ರಥಬೀದಿಯಲ್ಲಿ ಸ್ಥಳೀಯ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಹಿಂದೂ ಸಮ್ಮೇಳನ ನಡೆಯಿತು.

ಸಮ್ಮೇಳನದ ದಿವ್ಯಸಾನಿಧ್ಯವಹಿಸಿದ್ದ ಶ್ರೀಮನ್ನೆಲೆಮಾವುಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ ವಆಶೀರ್ವಚನ ನೀಡಿ,ಧರ್ಮವು ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ಸಮೃದ್ಧಿಯ ಮಾರ್ಗದರ್ಶನ ನೀಡುತ್ತದೆ . ಇಂದಿನ ಮಕ್ಕಳಿಗೆ ಕೇವಲ ಶಿಕ್ಷಣ ಒಂದೇ ಸಾಲದು ಶಿಕ್ಷಣದ ಜೊತೆಗೆ ಧಾರ್ಮಿಕ ಸಂಸ್ಕಾರ ಶಿಕ್ಷಣ ನೀಡಬೇಕು.ಮುಂದಿನ ಪೀಳಿಗೆಯವರು ಹಿಂದೂ ಧರ್ಮವನ್ನು ಸಂರಕ್ಷಿಸುವAತಾಗಬೇಕು. ಹಿಂದೂ ಧರ್ಮದ ತತ್ವಗಳನ್ನು ಅನುಸರಿಸುವ ಮೂಲಕ ವ್ಯಕ್ತಿಯು ಆತ್ಮ,ಮೋಕ್ಷ ಮತ್ತು ಧರ್ಮದ ಮಾರ್ಗವನ್ನು ಅರಿತುಕೊಳ್ಳಬೇಕು. ಹಿಂದೂ ಧರ್ಮವು ಕರ್ಮ,ಧರ್ಮ,ಧ್ಯಾನ ಮತ್ತು ಮೋಕ್ಷದಂತಹ ಅನೇಕ ಧಾರ್ಮಿಕ ತತ್ವಗಳು ಮತ್ತು ಆಚರಣೆಗಳನ್ನು ಹೊಂದಿದೆ. ಈ ಧರ್ಮವು ವ್ಯಕ್ತಿಯ ಆಧ್ಯಾತ್ಮಿಕ ಮತ್ತುಭೌತಿಕ ಜೀವನದಲ್ಲಿ ದೈವಗಳ ಆರಾಧನೆಯ ಮೂಲಕ ಮಾರ್ಗದರ್ಶನ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.


ಪರ್ಯಾವರಣ ಗತಿ ವಿಧಿಯ ಪ್ರಾಂತ ಸಂಯೋಜಕ ಜಯರಾಮ್ ಬೊಳ್ಳಜ್ಜೆ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಗೊಂಡು ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಒಂದು ಲಕ್ಷ ಹಿಂದೂ ಸಮ್ಮೇಳನ ಕೈಗೊಳ್ಳಲು ನಿರ್ಧರಿಸಿದ್ದು ಅದರಂತೆ ಪ್ರತಿ ಮಂಡಲದಲ್ಲಿ ಹಿಂದೂ ಸಮ್ಮೇಳನ ಕೈಗೊಳ್ಳುತ್ತಾ ಬಂದಿದ್ದೇವೆ.ಇದರ ಉದ್ದೇಶ ಕೇವಲ ಸಮ್ಮೇಳನ ಅಲ್ಲ ಪ್ರತಿ ಹಿಂದೂ ಮನೆಗಳಿಗೆ ಹಿಂದುತ್ವ ಉಳಿಸುವ ಹಾಗೂ ಬೆಳೆಸುವ ಮನಸ್ಥಿತಿ ಬರುವಂತೆ ಮಾಡುವುದಾಗಿದೆ.ಪಾಶ್ಚಾತ್ಯ ರಾಷ್ಟ್ರಗಳು ಹಿಂದೂ ಧರ್ಮಕ್ಕೆ ಮನಸೋತು ಇಲ್ಲಿಯ ಧಾರ್ಮಿಕ ಆಚರಣೆ ವಿಚಾರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುತ್ತಿರುವುದನ್ನು ನಾವು ಕಂಡಿದ್ದೇವೆ


ಆದರೆ ನಮ್ಮವರು ಮಾತ್ರ ಪಾಶ್ಚಾತ್ಯ ಸಂಸ್ಕೃತಿಯನ್ನು ಬೆನ್ನು ಹತ್ತಿ ಹೋಗುತ್ತಿದ್ದಾರೆ ಇದಕ್ಕೆ ಕಾರಣ ಕೇವಲ ನಮ್ಮ ಮಕ್ಕಳಷ್ಟೇ ಅಲ್ಲ ಹಿರಿಯರಾದ ನಾವು ಕೂಡ ಕಾರಣರಾಗಿದ್ದೇವೆ.ಪ್ರತಿದಿನ ಮನೆಗಳಲ್ಲಿ ಭಜನೆ ಮಾಡುವ ಪದ್ಧತಿ ಮಾಯವಾಗಿದೆ.ಹಬ್ಬ ಹರಿದಿನಗಳಲ್ಲಿ ಮನೆಯವರೆಲ್ಲರೂ ಸೇರಿ ಅಥವಾ ಊರಿನವರೆಲ್ಲರೂ ಸೇರಿ ಸಂತೋಷದಿAದ ಆಚರಿಸುವ ಪದ್ಧತಿ ದೂರವಾಗಿದೆ ಇವೆಲ್ಲವೂ ಮುಂದೆ ಹಿಂದೂ ಧರ್ಮಕ್ಕೆ ಅಪಾಯದ ಸಂಕೇತವಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಧರ್ಮವನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


ಇದಕ್ಕೂ ಮೊದಲು ಹೇರೂರಿನ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ಹೊರಟು ಹೇರೂರು-ಶಿರಸಿ ರಸ್ತೆಯ ಮೂಲಕ ಜಾಮಿಯಾ ಆಲ್ ಹದೀಸ್ ಮಸೀದಿ ಮುಂಭಾಗವಾಗಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಾರ್ಗವಾಗಿ ವಿನಾಯಕ ದೇವಸ್ಥಾನಕ್ಕೆ ಬಂದು ಮುಕ್ತಾಯವಾಯಿತು.
