ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಮಂಕಿ ಪಟ್ಟಣ ಪಂಚಾಯತನ 18 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟಬಹುಮತ ಪಡೆದಿದೆ.
ಮಂಕಿ ಪಟ್ಟಣ ಪಂಚಾಯತ್ ನಲ್ಲಿ ಒಟ್ಟೂ20 ವಾರ್ಡಗಳಿದ್ದು ಅದರಲ್ಲಿ ವಾಡ್೯ನಂ.4(ನವಾಯತಕೇರಿ)ಹಾಗೂವಾಡ್೯ ನಂ 5ರಲ್ಲಿ ಕ್ರಮವಾಗಿ ಕಾಂಗ್ರೆಸ್ ನ ರೇಷ್ಮಾ ಸಾಲ್ಟಿನ್ ಫರ್ನಾಂಡೀಸ್ ಹಾಗೂ ಮಹ್ಮದ್ ಸಿದ್ದಿಕ್ ಹಸನ ಬಾಪು ಅವಿರೋಧ ಆಯ್ಕೆಯಾಗಿದ್ದಾರೆ

ಚುನಾವಣೆ ನಡೆದ 18 ವಾರ್ಡ್ ಗಳಲ್ಲಿ ಕಾಂಗ್ರೆಸ್ 18
ಬಿಜೆಪಿ 17, ಕೆ.ಆರ್.ಎಸ್ 1ಮತ್ತು 8 ಸ್ವತಂತ್ರ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.
ವಾರ್ಡ್-1ಮಡಿ- ಜ್ಯೋತಿ ಸತೀಶ ಖಾರ್ವಿ(ಬಿಜೆಪಿ)
ವಾರ್ಡ್-2 ದೇವರಗದ್ದೆ-ಮೀನಾಕ್ಷಿ ಕೃಷ್ಣ ಹಸ್ಲರ(ಬಿಜೆಪಿ)
ವಾರ್ಡ್-3-ಹಳೇಮಠ-ಆನಂದ ಗಣಪತಿ ನಾಯ್ಕ(ಬಿಜೆಪಿ)
4.ವಾರ್ಡ್-4-ನವಾಯತಕೇರಿ -ರೇಷ್ಮಾ ಸಾಲ್ಟನ್ ಫರ್ನಾಂಡಿಸ್ (ಕಾಂಗ್ರೆಸ್)
ವಾರ್ಡ್-5 ಕಟ್ಟೆಅಂಗಡಿ -ಮಹ್ಮದ್ ಸಿದ್ದಿಕ್ ಹಸನ ಬಾಪು(ಕಾಂಗ್ರೆಸ್)
ವಾರ್ಡ್6 ನಾಖೂದಾಮೊಹಲ್ಲಾ – ರಹಮತುಲ್ಲಾ ಬೊಟ್ಲರ್(ಕಾಂಗ್ರೆಸ್)
ವಾರ್ಡ್7-ಬಣಸಾಲೆ -ಸವಿತಾ ಮಲ್ಲಯ್ಯ ನಾಯ್ಕ(ಬಿಜೆಪಿ)
ವಾರ್ಡ್ 8-ದಾಸನಮಕ್ಕಿ -ಪೀಟರ್ ರೊಡ್ರಗೀಸ್ ಸಾಂತಾ, (ಬಿಜೆಪಿ)
ವಾರ್ಡ್-9-ಹೊಸಹಿತ್ಲ – ಗೀತಾ ರಮಾಕಾಂತ ಹರಿಕಂತ್ರ (ಬಿಜೆಪಿ)
ವಾರ್ಡ್-10-ದೊಡ್ಡಗುಂದ – ಗಜಾನನ ಬಾಲಯ್ಯ ನಾಯ್ಕ(ಕಾಂಗ್ರೆಸ್)
ವಾರ್ಡ್-11-ಗುಳದಕೇರಿ-1ಸತೀಶ ದೇವಪ್ಪ ನಾಯ್ಕ(ಬಿಜೆಪಿ)
ವಾರ್ಡ್-12-ಗುಳದಕೇರಿ-2 ಸಂಜೀವ ಗಂಗಾಧರ ನಾಯ್ಕ(ಕಾಂಗ್ರೆಸ್)
ವಾರ್ಡ್-13-ಚಿತ್ತಾರ- ರೇಖಾ ಗಿರೀಶ ನಾಯ್ಕ(ಬಿಜೆಪಿ)
ವಾರ್ಡ್-14-ಗಂಜಿಗೇರಿ -ನೇತ್ರಾವತಿ ಈಶ್ವರ ಗೌಡ (ಬಿಜೆಪಿ)(
ವಾರ್ಡ್-15-ಸಾರಸ್ವತಕೇರಿ-ರವಿ ಉಮೇಶ ನಾಯ್ಕ,(ಬಿಜೆಪಿ)
ವಾರ್ಡ್-16-ಬಾಲಯ್ಯನವಾಡ- ಉಲ್ಲಾಸ ಅಂಗದ ನಾಯ್ಕ , (ಕಾಂಗ್ರೆಸ್)
ವಾರ್ಡ್-17-ತಾಳಮಕ್ಕಿ- ಉಷಾ ಕೃಷ್ಣ ನಾಯ್ಕ(ಕಾಂಗ್ರೆಸ್)
ವಾರ್ಡ್-18-ಬೋಳೆಬಸ್ತಿ -ವಿಜಯಾ ಮೋಹನ ನಾಯ್ಕ (ಬಿಜೆಪಿ)
ವಾರ್ಡ್-19-ಕೊಪ್ಪದಮಕ್ಕಿ -ವಿನಾಯಕ ಮೊಗೇರ(ಗುಡ್ಡಿ)
(ಕಾಂಗ್ರೆಸ್)
ವಾರ್ಡ್-20-ಅನಂತವಾಡಿ -ಸವಿತಾ ಹನುಮಂತ ನಾಯ್ಕ
(ಬಿಜೆಪಿ)

ಚುನಾವಣೆ ನಡೆದ 18 ವಾರ್ಡ್ ಗಳ ಒಟ್ಟು 18 ಮತಗಟ್ಟೆಗಳಲ್ಲಿ ಒಟ್ಟು 14198 ಮತದಾರರಲ್ಲಿ 7160 ಪುರುಷರು ಮತ್ತು 7038 ಮಹಿಳೆಯರು, ಇದರಲ್ಲಿ 5247 ಪುರುಷರು ಮತ್ತು 5624 ಮಹಿಳೆಯರು, ಒಟ್ಟು 10871 ಜನರು ಮತ ಚಲಾಯಿಸಿದ್ದರು.

ಸಂತಸ ವ್ಯಕ್ತಪಡಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮ ಪಂಚಾಯತಿಯು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ನಡೆದ ಪ್ರಪ್ರಥಮ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಒಟ್ಟು 20 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಐತಿಹಾಸಿಕ ಜಯ ದಾಖಲಿಸಿದೆ.
ಈ ಅಭೂತಪೂರ್ವ ಯಶಸ್ಸು ನಮ್ಮ ಪಕ್ಷದ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂದ ಜಯವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಜನವಿರೋಧಿ ನೀತಿಗಳು, ಆಡಳಿತಾತ್ಮಕ ವೈಫಲ್ಯಗಳು ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಂಕಿಯ ಪ್ರಜ್ಞಾವಂತ ಮತದಾರರು ಈ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮೆಟ್ಟಿ ನಿಂತು, ಬಿಜೆಪಿಯ ಅಭಿವೃದ್ಧಿ ಮಂತ್ರವನ್ನು ಮನೆಮನೆಗೆ ತಲುಪಿಸಿ ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ನಮಗೆ ನಿರಂತರವಾಗಿ ಮಾರ್ಗದರ್ಶನ ನೀಡಿದ ಹಿರಿಯ ಮುಖಂಡರಿಗೆ ಹಾಗೂ ಬಿಜೆಪಿಯ ಮೇಲೆ ಅಚಲ ನಂಬಿಕೆಯಿಟ್ಟು ಆಶೀರ್ವದಿಸಿದ ಮಂಕಿಯ ಸಮಸ್ತ ಮತದಾರ ಪ್ರಭುಗಳಿಗೆ ನಾನು ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಮಂಕಿಯ ಸಮಗ್ರ ಪ್ರಗತಿಯೇ ನಮ್ಮ ಮುಂದಿನ ಗುರಿಯಾಗಿದ್ದು, ಜನರ ನಿರೀಕ್ಷೆಯಂತೆ ಆಡಳಿತ ನಡೆಸಲು ನಾವು ಬದ್ಧರಾಗಿದ್ದೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

