ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯು,ಅರಣ್ಯ ಅತಿಕ್ರಮಣ ಸಾಗುವಳಿದಾರರ ಮೇಲೆ ನಡೆಸುತ್ತಿರುವ ನಿರಂತರ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ಧ ಅರಣ್ಯ ಹಕ್ಕು ಹೋರಾಟಗಾರರ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ್ ನೇತೃತ್ವದಲ್ಲಿ ಅರಣ್ಯತಿಕ್ರಮಣದಾರ ರೈತರು ಕ್ಯಾದಗಿ ವಲಯ ಅರಣ್ಯ ಇಲಾಖೆ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು


ಕ್ಯಾದಗಿ ಸಹಕಾರಿ ಸಂಘದ ಎದುರಿನಿಂದ ಅರಣ್ಯ ಇಲಾಖೆ ಕಚೇರಿಯ ತನಕ ಪಾದಯಾತ್ರೆ ನಡೆಸಿದರು,ಸ್ಥಳದಲ್ಲಿ ಅತಿಕ್ರಮಣದಾರ ರೈತರ ಅಹವಾಲು ಕೇಳಲು ಯಾವುದೇ ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲದಿದ್ದರಿಂದ ಪ್ರತಿಭಟನಾಕಾರರು ಕೆರಳಿದರು.ಸ್ಥಳಕ್ಕೆ ತಹಸೀಲ್ದಾರ ಹಾಗೂ ಎಸಿಎಪ್ ಬರಬೇಕೆಂದು ಪಟ್ಟು ಹಿಡಿದು ಕೆಲಕಾಲ ಕುಮಟಾ-ಕೊಡಮಡಗಿ ರಾಜ್ಯ ಹೆದ್ದಾರಿಯನ್ನು ತಡೆಯಲಾಯಿತು.ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಎಂ ಆರ್ ಕುಲಕರ್ಣಿ ಪ್ರತಿಭಟನಾಕಾರರ ಮನ ಒಲಿಸಿ ರಸ್ತೆ ತಡೆಯನ್ನು ತೆರವುಗೊಳಿಸಿದರು.ತಡವಾಗಿ ಆಗಮಿಸಿದ ಎಸಿಎಪ್ ಪವಿತ್ರಾ ಯುಜಿಯವರಿಗೆ ಪ್ರತಿಭಟನಾಕಾರರು ದಿಕ್ಕಾರ ಕೂಗಿ ಬಿಸಿ ಮುಟ್ಟಿಸಿದರು.

ರವೀಂದ್ರ ನಾಯ್ಕ ಮಾತನಾಡಿ, ಅಧಿಕಾರಿಗಳು ಕಾನೂನಿನ್ವಯ ಅರಣ್ಯತೆರವು ಕಾರ್ಯವನ್ನು ಮಾಡುತ್ತಿಲ್ಲ ಕಂದಾಯ, ಪೋಲಿಸ್, ಸ್ಥಳೀಯ ಸಂಸ್ಥೆ ಮತ್ತು ಪಂಚನಾಮೆ ಇಲ್ಲದೇ ತೆರವುಗೊಳಿಸುವ ಸಂದರ್ಭದಲ್ಲಿನ ನೀತಿ,ನಿಯಮ ಜಾರಿ ಮಾಡದೇ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಕಾನೂನುಬಾಹಿರವಾಗಿರುತ್ತದೆ ಗೋಳಿಕೈ ಪ್ರಕರಣದಲ್ಲಿ ಮೌಲ್ಯಯುತ ಬೆಳೆ ನಾಶಪಡಿಸಲಾಗಿದೆ. ಬೆಳೆ ಹರಾಜು ಮಾಡಿಲ್ಲ, ಅಮಾನವೀಯ ರೀತಿಯ ಅಡಿಕೆ ಗಿಡ ಕಡಿದಿರುವುದು ಹಾಗೂ ಜಂಟಿ ಸರ್ವೆ ಇಲ್ಲದೇ ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆಯ ಕೃತ್ಯವನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಶಾಸಕರಿಗೆ ಅಧಿಕಾರಿಗಳು ತಪ್ಪು ಮಾಹಿತಿಗಳನ್ನು ನೀÀಡುತ್ತಿದ್ದು ಅವರಿಗೆ ಅರಣ್ಯ ಕಾನೂನಿನ ಬಗ್ಗೆ ಅರಿವಿಲ್ಲ ಅಧಿಕಾರಿಗಳು ಹೇಳಿದ್ದನ್ನು ಒಪ್ಪುತ್ತಿದ್ದಾರೆ ಮುಂದಿನ ದಿನಗಳಲ್ಲಿ ಶಾಸಕರು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಶಾಸಕರ ಕಚೇರಿಗೂ ಮುತ್ತಿಗೆ ಹಾಕಲಾಗುವುದು ಎಂದು ರವೀಂದ್ರ ನಾಯ್ಕ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಹಿಂದೆ ಬಿಜೆಪಿ ಶಾಸಕರು ಇರುವಾಗ ತಾಲೂಕಿನಲ್ಲಿ ಇದೇ ಅಧಿಕಾರಿಗಳಿದ್ದರೂ ಯಾವುದೇ ಒಕ್ಕಲೆಬ್ಬಿಸುವ ಪ್ರಯತ್ನ ಆಗಿರಲಿಲ್ಲ ಈಗ ನಮ್ಮದೇ ಸರಕಾರ ಹಾಗೂ ನಮ್ಮದೇ ಶಾÀಸಕರಿದ್ದರೂ ನಮಗೆ ಅತಿಕ್ರಮಣದಾರ ರೈತರ ಹಿತರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಅಧಿಕಾರಿಗಳು ನಮ್ಮ ಶಾಸಕರ ಮುಖಕ್ಕೆ ಕಪ್ಪುಮಸಿ ಬಳಿಯವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕೆ ಟಿ ನಾಯ್ಕ ಕ್ಯಾದಗಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಮಹೇಶ ನಾಯ್ಕ ಕಾನಕ್ಕಿ, ಬಿ.ಡಿ. ನಾಯ್ಕ ಹರಕನಳ್ಳಿ, ರಾಮಕೃಷ್ಣ ನಾಯ್ಕ ತ್ಯಾಗಲಿಮನೆ, ದಿನೇಶ ನಾಯ್ಕ ಬೇಡ್ಕಣಿ, ಸುನೀಲ ನಾಯ್ಕ ಸಂಪಖAಡ, ನೆಹರೂ ನಾಯ್ಕ, ಶಿವಾನಂದ ಜೋಗಿ, ಚಂದ್ರ ಶಾನಭಾಗ,ರಪೀಕ್ ಗೌಡಳ್ಳಿ, ಹರಿ ನಾಯ್ಕ ಓಂಕಾರ, ಮೋಹನ ಕಾನಳ್ಳಿ, ಉಮೇಶ ಬೇಡ್ಕಣಿ, ಗೋವಿಂದ ಗೌಡ, ಶಿವಪ್ಪ ನಾಯ್ಕ, ಧನಂಜಯ ನಾಯ್ಕ, ಸಂಕೇತ ಹಲಗೇರಿ, ನಾಗರಾಜ ಮರಾಠಿ, ಲಕ್ಷö್ಮಣ ನಾಯ್ಕ, ಬಾಬು ಮರಾಠಿ ಮುಂತಾದವರು ಭಾಗವಹಿಸಿದ್ದರು
href=”https://adyot.news/wp-content/uploads/2025/12/IMG-20251231-WA0026.jpg”>
———
ಗೋಳಿಕೈನಲ್ಲಿ ಫಲಬರುವ ಅಡಿಕೆ ಮರವನ್ನು ಕಡಿದಿರುವ ಅರಣ್ಯ ಅಧಿಕಾರಿಗಳನ್ನು,ಸಿಬ್ಬಂದಿಗಳನ್ನು ನಮಗೆ ತೋರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು ಇದಕ್ಕೆ ಅಧಿಕಾರಿಗಳು ಒಪ್ಪದಿದ್ದಾಗ ಅರಣ್ಯ ಕಚೇರಿಗೆ ನುಗ್ಗಲು ಯತ್ನಿಸಿದಾಗ ಸ್ಥಳದಲ್ಲಿ ಒಂದಿಷ್ಟು ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ನಂತರ ಹೋರಾಟಗಾರ ಪ್ರಮುಖರು ಪ್ರತಿಭಟನಾಕಾರರನ್ನು ಸಮಾದಾನ ಪಡಿಸಿ ವಾತಾವರಣವನ್ನು ತಿಳಿಗೊಳಿಸಿದರು

ಮುಂದಿನ ಹದೀನೈದು ದಿನಗಳಲ್ಲಿ ಸಿದ್ದಾಪುರ ತಾಲೂಕಿನ ವ್ಯಾಪ್ತಿಯಲ್ಲಿನ ಅರಣ್ಯವಾಸಿಗಳ ಸಮಸ್ಯೆಗಳನ್ನ ಸಮಗ್ರವಾಗಿ ಚರ್ಚಿಸಲು ಹಿರಿಯ ಅರಣ್ಯ ಅಧಿಕಾರಿಯೊಂದಿಗೆ ಸಿದ್ದಾಪುರದಲ್ಲಿ ಸಭೆ ಸಂಘಟಿಸಲು ಉಪಸ್ಥಿತರಿದ್ದ ತಹಸೀಲ್ದಾರ ಎಮ್ ಆರ್ ಕುಲಕರ್ಣಿ, ಎಸಿಎಫ್ ಪವಿತ್ರ ಮತ್ತು ಆರ್ ಎಫ್ ಓ ಮಹೇಶ ದೇವಡಿಗ ಪ್ರತಿಭಟನಾಕಾರರಿಗೆ ಆಶ್ವಾಸನೆ ನೀಡಿದರು.

4೦೦-5೦೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಸೇರಿದ್ದ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ಇರಲಿಲ್ಲ. ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿಗಳಲ್ಲಿ ಪೊಲೀಸ್ ಸಮವಸ್ತçದಂತೆ ಅವರ ಜೊತೆಯಲ್ಲೆ ಇರಬೇಕಾದ ಲಾಠಿಯು ಕೈಲಿ ಇರಲಿಲ್ಲ. ಹೆಚ್ಚಿನ ಸಂಖ್ಯೆಯ ಮಹಿಳಾ ಪ್ರತಿಭಟನಾಕಾರರಿದ್ದರು ಮಹಿಳಾ ಪೊಲೀಸ್‌ರು ಇರಲಿಲ್ಲ. ಪ್ರತಿಭಟನಾ ಕಾವು ಹೆಚ್ಚಾದನಂತರ ಸಿಪಿಐ ಸೀತಾÀರಾಮ ಸ್ಥಳಕ್ಕೆ ಆಗಮಿಸಿದರು. ವಲಯ ಅರಣ್ಯ ಕಚೇರಿಯ ಎದುರು ನಡೆಯುತ್ತಿದ್ದ ಪ್ರತಿಭಟನೆ ಒಂದು ವೇಳೆ ಕೈಮೀರಿದ್ದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನೂ ಸೇರಿದಂತೆ ರಕ್ಷಣೆ ಮಾಡಲು ಸೂಕ್ತ ಬಂದೋಬಸ್ತ್ ಇರಲಿಲ್ಲ. ಪ್ರತಿಭಟನೆಯ ನೇತೃತ್ವವಹಿಸಿದ್ದ ಪ್ರಮುಖರ ಜಾಣ್ಮೆಯಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಪ್ರತಿಭಟನೆ ಮುಕ್ತಾಯಗೊಂಡಿತು.
