ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜನಜೀವನಕ್ಕೆ ಹಾಗೂ ಇಲ್ಲಿಯ ಪರಿಸರಕ್ಕೆ ಮಾರಕವಾಗುವ ಹಲವು ಯೋಜನೆಗಳನ್ನು ಜಾರಿಮಾಡಲು ಹೋರಟಿರುವ ಸರಕಾರಗಳ ವಿರುದ್ಧ ಹಾಗೂ ಪ್ರಸ್ತಾಪಿತ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ಶಿರಸಿಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ಬೃಹತ್ ಜನಸಮಾವೇಶ ನಡೆಯಿತು.

ಸಮಾವೇಶದ ಸಾನ್ನಿಧ್ಯವಹಿಸಿದ್ದಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ,ಪ್ರಸ್ತಾವನೆಯಲ್ಲಿರುವ ಬೇಡ್ತಿ-ಅಘನಾಶಿನಿ ನದಿಗಳು ಈ ಯೋಜನೆ ಅತಾರ್ಕಿಕ ಅವೈಜ್ಞಾನಿಕವಾಗಿದೆ.ಸಣ್ಣ ನದಿ ಬೇಗ ಬತ್ತುತ್ತವೆ. ಬೇಡ್ತಿ-ಅಘನಾಶಿನಿ ಇವು ಸಣ್ಣ ನದಿಗಳಾಗಿದೆ. ಇದನ್ನು ಬೇರೆಡೆ ಒಯ್ಯಲು ಆಗುವುದಿಲ್ಲ ಆದ್ದರಿಂದ ಈ ಯೋಜನೆ ಅತಾರ್ಕಿಕವಾಗಿದೆ. ಈ ನದಿಯ ನೀರನ್ನು ಒಯ್ಯಲು ಹೆಚ್ಚು ವಿದ್ಯುತ ಖರ್ಚಾಗುತ್ತದೆ. ಇದು ಗಮನಕ್ಕೆ ಬಂದಿರುವುದಿಲ್ಲವೇ? ಅಲ್ಲಿರುವ ನದಿ-ಕೆರೆಗಳ ಸಮರ್ಪಕ ನಿರ್ವಹಣೆ ಇದ್ದರೆ ಬೇರೆ ಪ್ರದೇಶಕ್ಕೆ ನೀರನ್ನು ಒಯ್ಯುವ ಅಗತ್ಯತೆ ಬರುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಬಯಲು ಸೀಮೆಯ ಮಣ್ಣಿಗೆ ನೀರು ಹಿರಿಕೊಳ್ಳುವ ಸಾಮರ್ಥ್ಯವಿದೆ. ಅಲ್ಲಿಯ ಕೆರೆ ಅಭಿವೃದ್ಧಿ ಪಡಿಸಿದರೆ ಅಲ್ಲಿಯೇ ಭೂಮಾತೆಗೆ ಇಲ್ಲಿಯ ನೀರಿನ ಅಗತ್ಯತೆ ಇರುವುದಿಲ್ಲ ಇದನ್ನು ತಿಳಿದು ಬಯಲು ಸೀಮೆಯ ಜನರು ನಮ್ಮೊಂದಿಗೆ ಹೋರಾಟಕ್ಕೆ ಬನ್ನಿ ಎಂದು ಕೇಳಿಕೊಳ್ಳುತ್ತೇವೆ.
ಯೋಜನೆ ಜಾರಿಯಾದರೆ ಅಂತರ್ಜಲದ ಕುಸಿತ ಆಗುತ್ತದೆ.ಕೃಷಿ ಚಟುವಟಿಕೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ನೀರು ಘಟ್ಟದ ಕೆಳಗೆ ಹೋಗದಿದ್ದಾಗ ಮೀನುಗಾರರಿಗೂ ಸಮಸ್ಯೆಯಾಗುತ್ತದೆ. ಪಶ್ಚಿಮ ಘಟ್ಟದ ನದಿ ಜೋಡಣೆಯನ್ನು ನಾವು ವಿರೋಧಿಸುತ್ತಿದ್ದೇವೆ.ಇದು ಯಾವ ಪಕ್ಷದ ವಿರುದ್ಧದ ಹೋರಾಟವಲ್ಲ. ಈ ಯೋಜನೆಯ ವಿರುದ್ಧದ ಹೋರಾಟವಾಗಿದೆ ಈ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಬಂದವರು ತಪ್ಪು ವರದಿ ನೀಡುತ್ತಾರೆ. ಇದು ಮುಂದುವರೆದರೆ ಹೋರಾಟ ಮುಂದುವರೆಸ ಬೇಕಾಗುತ್ತದೆ.ಈ ಯೋಜನೆ ಜಾರಿಗೆ ಮುಂದಾದರೆ ಸಾಮೂಹಿಕವಾಗಿ ಜಿಲ್ಲೆಯ ಜನರು ಚುನಾವಣೆ ಭಹಿಷ್ಕರಿಸಬಹುದು. ಸರ್ಕಾರಕ್ಕೆ ಆಗ್ರಹವೆನೆಂದರೆ ಯೋಜನೆ ಬಗ್ಗೆ ಪ್ರಾಮಾಣಿಕವಾಗಿ ವಿಸ್ತೃತ ವಾದ ಅಧ್ಯಯನ ನಡೆಯಲಿ. ವಿಜ್ಞಾನಿಗಳ ಮೇಲೆ ಪ್ರಭಾವ ಬೀರದೆ ಅಧ್ಯಯನ ,ಚಿಂತನೆ ನಡೆದರೆ ಈ ಯೋಜನೆ ಜಾರಿಯಾಗಲೂ ಸಾಧ್ಯವಿಲ್ಲ ನಮ್ಮ ಜನ ಪ್ರತಿನಿಧಿಗಳು ಒಟ್ಟಿಗೆ ಸೇರಿ ನಮ್ಮ ಭಾವನೆಯನ್ನು ಕೇಂದ್ರ ಸರ್ಕಾರ,ರಾಜ್ಯ ಸರ್ಕಾರಕ್ಕೆ ಮುಟ್ಟಿಸಬೇಕು. ಹಾಗೂ ಅವರು ಸಹ ಮುಂದೆ ನಿಲ್ಲಬೇಕು. ಗೆಲುವು ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.


ಪರಿಸರ ವಿಜ್ಞಾನಿ ಬಿ.ಎಂ.ಕುಮಾರ್ ಸ್ವಾಮಿ ಮಾತನಾಡಿ,ದೇಶದಲ್ಲಿಯ ೫೩೩೪ ಡ್ಯಾಮ್ಗಳಲ್ಲಿ ೨೦೦೦ ದೊಡ್ಡ ಡ್ಯಾಮಗಳು ಮಹಾರಾಷ್ಟ್ರದಲ್ಲಿದ್ದರೂ ಅಲ್ಲಿಯ ಪ್ರದೇಶ ಬರಪಿಡೀತವಾಗಿದೆ. ನೀರಾವರಿ ಯೋಜನೆಗಳು ಹಿದುಳಿದ ವರ್ಗದ ಜನರಿಗೆ ಮೋಸ ಮಾಡುವಂತದ್ದಾಗಿದೆ.ರಾಜಕಾರಣಿಗಳು ನದಿಗಳು ಸಮುದ್ರಕ್ಕೆ ಸೇರುವುದು ವ್ಯರ್ಥ ಎಂಬುದೆ ವಿಜ್ಞಾನ ಎಂದು ಹೇಳುತ್ತಾರೆ. ಆದರೆ ಇದು ಜಲಚಕ್ರ ವಾಗಿದೆ. ಆದ್ದರಿಂದ ಇಂತಹ ಮೂರ್ಖ, ಅವೈಜ್ಞಾನಿಕ ರಾಜಕಾರಣಿಗಳನ್ನು ಪಡೆದಿರುವುದು ನಮ್ಮ ದುರ್ದೈವವಾಗಿದೆ.ನಾವು ಕೇಳದೆ ಇರುವ ಹಲವಾರು ಯೋಜನೆ ಕೊಟ್ಟಿದ್ದೀರಿ.ಆದರೆ ನಾವು ಕೇಳುತ್ತಿರುವ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಕಟ್ಟಿಕೊಡಿ ಮಂಗನ ಕಾಯಿಲೆಗೆ ಶಾಶ್ವತವಾದ ಕ್ರಮಕೈಗೊಳ್ಳಿ ಎಂದು ಹೇಳಿದರು.

ಉಸ್ತುವಾರಿ ಸಚೀವ ಮಂಕಾಳು ವೈದ್ಯ ಮಾತನಾಡಿ,ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ೨೦೨೧ ಡಿಸೆಂಬರ್ ೨೫ ರಂದು ಕ್ಯಾಬಿನೆಟ್ನಲ್ಲಿ ನಿರ್ಣಯಾಗಿತ್ತು. ಆಗ ಜನಪ್ರತಿನಿಧಿಗಳು ಮಾತನಾಡಿಲ್ಲ. ಆಗ ಸ್ಪೀಕರ್ ಕಾಗೇರಿಯವರಿದ್ದರು. ಹಾಗೂ ಒಬ್ಬರೂ ಮಂತ್ರಿಗಳು ಇದ್ದರು. ಅಂದೆ ಮುಗಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಬಹಳ ಮುಂದೆ ಹೋಗಿದೆ. ಈ ಯೋಜನೆಗೆ ಕೇಂದ್ರದ ೯೦% ಹಾಗೂ ೧೦% ರಾಜ್ಯ ಸರ್ಕಾರದ ಹಣವಾಗಿದೆ. ೨೩ ಸಾವಿರ ಕೋಟಿ ರೂ. ಯೋಜನೆಯಾಗಿದೆ. ರಾಜಕಾರಣ ಬದಿಗಿಟ್ಟು ವಿರೋಧ ಮಾಡಬೇಕಿದೆ. ಮಾತನಾಡಿರುವುದಕ್ಕೆ ಬದ್ಧರಾಗಿರಬೇಕು.ಬೇರೆ ಜಿಲ್ಲೆಗೆ ನೀರು ಕೊಡುವ ಉದ್ದೇಶದಿಂದ ಮಾಡಿದ ನದಿ ತಿರುವು ಯೋಜನೆಗೆ ನಾವು ವಿರೋಧ ಮಾಡುತ್ತೇವೆ. ಇದು ಜಿಲ್ಲೆಗೆ ಮಾರಕವಾದಂತದ್ದು, ಜಿಲ್ಲೆಯ ಜನರಿಗೆ ಬೇಡವಾದದ್ದು, ನಿಮ್ಮನ್ನು ಪ್ರತಿನಿಧಿಸುವ ನಾವು ವಿರೋಧಿಸುತ್ತೇವೆ.ಯಾವುದೇ ಯೋಜನೆ ಜಿಲ್ಲೆಯ ಜನರಿಗೆ ಒಳ್ಳೆಯದಾಗಬೇಕು. ಆದರೆ ಜನರಿಗೆ ತೊಂದರೆಯಾಗಿದೆ. ಕೈಗಾ ಪರಿಹಾರ ಈವರೆಗೂ ನೀಡಿಲ್ಲ. ಕೇಂದ್ರ,ರಾಜ್ಯ ಸರಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದೇವೆ.ಈ ಯೋಜನೆಗೆ ಹಾಕುವ ಎಲ್ಲಾ ಹಣ ನಿಮ್ಮದೆ. ನಿಮ್ಮ ಹಣದಲ್ಲಿ ನಿಮಗೆ ತೊಂದರೆ ಕೊಡುವಂತದ್ದು ಸರಿಯಲ್ಲ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ನೀರು ಸೂಕ್ಷ್ಮ ವಾದ ವಿಷಯ. ನೀರಿನಿಂದ ಬೆಂಕಿ ಆರಿಸಿಕೊಳ್ಳಲೂಬಹುದು ಬೆಂಕಿ ಹಚ್ಚಲೂಬಹುದು.ಮಂಕಾಳು ವೈದ್ಯರು ಪ್ರತಿನಿಧಿಸುವ ಶರಾವತಿ ಪಂಪ ಸ್ಟೋರೇಜ್ ಯೋಜನೆ ರಾಜ್ಯ ಸರ್ಕಾರದ ಯೋಜನೆಯಾಗಿದೆ ಇದೂ ಸಹ ಮಾರಕಯೋಜನೆಯಾಗಿದ್ದು ಸಚೀವರು ಧ್ವನಿ ಎತ್ತಬೇಕಾಗಿದೆ.ಈಗಾಗಲೇ ಜಿಲ್ಲೆಯ ಕಳಚೆ ಧರೆ ಕುಸಿತ,ಶಿರೂರ ಗುಡ್ಡ ಕುಸಿತ, ಭಟ್ಕಳದಲ್ಲಿ ಆದ ಮೇಘಾಸ್ಪೋಟ, ಮತ್ತಿಘಟ್ಟದಲ್ಲಾದ ಧರೆ ಕುಸಿತ ನೋಡುತ್ತಿದ್ದೆವೆ.ಜಿಲ್ಲೆಯ ಧಾರಣ ಸಾಮರ್ಥ್ಯದ ಅಧ್ಯಯನ ಮಾಡಬೇಕೆಂದು ಹೇಳಿದ್ದೆವೆ.ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ ಸೇರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಿಳಿಸಿದ್ದೇವೆ. ಆದರೆ ಈ ಯೋಜನೆಗೆ ಒಪ್ಪಿಗೆ ನೀಡಿ ಒಂದು ಹೆಜ್ಜೆ ಮುಂದೆ ಹೋಗಿದೆ.ಫೆಬ್ರವರಿ ತಿಂಗಳಲ್ಲಿ ನಿಯೋಗದ ಮೂಲಕಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಿಸಿ ಈ ಯೋಜನೆ ನಿಲ್ಲಿಸುತ್ತೇನೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಶರಾವತಿ,ಕೈಗಾ, ಸೀಬರ್ಡ್ ಯೋಜನೆಯಿಂದ ಸಾವಿರಾರು ಎಕರೆ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ ದಾಂಡೇಲಿಯ ಭಾಗದಲ್ಲಿ ಟೈಗರ್ ಪಾರ್ಕ್, ಡ್ಯಾಮ್ ನಿರ್ಮಾಣದಿಂದಲೂ ರೈತರು ಭೂಮಿ ಕಳೆದುಕೊಂಡಿದ್ದಾರೆ. ಆದ್ದರಿಂದ ಈ ನದಿ ತಿರುವು ಯೋಜನೆಯನ್ನು ನಾವು ವಿರೋದಿಸಬೇಕಾಗುತ್ತದೆ. ಕೇಂದ್ರ ವಾಗಲಿ ಅಥವಾ ರಾಜ್ಯ ಸರ್ಕಾರಗಳಾಗಲಿ, ಯಾವುದೇ ಸರ್ಕಾರವಾದರೂ ಸಹ ಇಂತಹ ಯೋಜನೆಯನ್ನು ತರಬೇಕಾದಾಗ ಜನಸಾಮಾನ್ಯರ,ಸಂಘಸAಸ್ಥೆಗಳ, ಮಠಾಧೀಶ್ವರ ಅಭಿಪ್ರಾಯ ಕೇಳಬೇಕು.ಯಾವುದೇ ಕಾರಣಕ್ಕೂ ಈ ಯೋಜನೆ ಆಗಬಾರದು. ಅಧಿಕಾರ ಬರುತ್ತೆ ,ಹೋಗುತ್ತೆ ಆದರೆ ಈ ಯೋಜನೆ ಆಗಬಾರದು. ನಾನು ಒಬ್ಬ ಕೃಷಿಕನಾಗಿ ಹೇಳುತ್ತೇನೆ. ನಾವೆಲ್ಲರೂ ಶ್ರೀಗಳ ಜೊತೆ ಹಾಗೂ ನಿಮ್ಮ ಜೊತೆ ಹೋರಾಟಕ್ಕೆ ಕೈಜೋಡಿಸಿ ನಿಲ್ಲುತ್ತೇನೆ ಎಂದರು.


ಸ್ವಾಧಿ ದಿಗಂಬರ ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಸ್ವಾಮೀಜಿ,ಜಡೆ ಸಂಸ್ಥಾನ ಮಠ ಶ್ರೀಡಾ.ಮಹಾಂತ ಸ್ವಾಮೀಜಿ,ಚೈತನ್ಯ ರಾಜಾರಾಮ ಆಶ್ರಮ ಶ್ರೀಬ್ರಹ್ಮಾನಂದ ಸ್ವಾಮೀಜಿ ಶಾಸಕ ಶಿವರಾಮ ಹೆಬ್ಬಾರ ವಿ.ಪ.ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡಿದರು.
