ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದ ಸಮೀಪವಿರುವ ಅವರಗುಪ್ಪಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಅನೈತಿಕ ಸಂಬಂಧ ಕುರಿತಂತೆ ನಡೆದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಮ್ಮನಬೈಲ್(ಹಾಲಿ ವಾಸ್ತವ್ಯ ಬೆಂಗಳೂರು) ಮೂಲದ ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಏಳು ಜನರನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.


ವಸಂತ ಜಟ್ಯಾ ನಾಯ್ಕ(೪೩) ಮೃತಪಟ್ಟ ದುರ್ದೈವಿಯಾಗಿದ್ದು ಇವರ ಸಹೋದರ ಮಹೇಶ ಜಟ್ಯಾ ನಾಯ್ಕ(೩೭) ಕುಮಾರ ನಾರಾಯಣ ನಾಯ್ಕ(೩೫) ಗಂಭೀರ ಗಾಯಗೊಂಡವರಾಗಿದ್ದಾರೆ. ಘಟನೆಗೆ ಸಂಬAಧಿಸಿದಂತೆ ಮಹೇಶ ನಾಯ್ಕ ಪತ್ನಿ ಸುಚಿತ್ರಾ ನಾಯ್ಕ ಮಾವ ಏಕನಾಥ ನಾಯ್ಕ, ಜ್ಯೋತಿಷಿ ಕಮಲಾಕರ ಭಟ್,ಆಕಾಶ ಎಂ.ಮಹಮ್ಮದ್ ಮೈಫೂಜ್,ಫೈಸಲ್ ಅಮೀರ್ ಜಾನ್,ಇಫ್ರಾನ್ ಅಮನುಲ್ಲಾ
ಒಟ್ಟೂ ಏಳು ಜನರ ಮೇಲೆ ಪೊಲೀಸ್ರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ವಿವರ-;
ಸುಚಿತ್ರಾ ನಾಯ್ಕ ಹಾಗೂ ಮಹೇಶ ನಾಯ್ಕ ದಂಪತಿಗಳು ಕಳೆದ ಆರು ತಿಂಗಳಿAದ ದೂರವಾಗಿದ್ದು ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಸುಚಿತ್ರಾ ಮತ್ತು ಮಕ್ಕಳು ಜ್ಯೋತಿಷಿ ಕಮಲಾಕರ ಭಟ್ ಜೊತೆಗೆ ಶಿವಮೊಗ್ಗದಲ್ಲಿ ವಾಸವಾಗಿದ್ದು ಹಿರಿಯ ಮಗಳು ತಾಯಿ ಮತ್ತು ಕಮಲಾಕರ ಭಟ್ ತನಗೆ ಕಿರುಕಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ತಂದೆಯ ಬಳಿ ಸೋಮವಾರ ಮರಳಿದ್ದಾಳೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದ್ದು ಹುಡುಗಿ ಅಪ್ರಾಪ್ತೆಯಾಗಿದ್ದರಿಂದ ಶಿರಸಿಯಲ್ಲಿ ಕೌನ್ಸಿಲಿಂಗ ಮಾಡಿಸಿ ತಂದೆಯ ಜೊತೆಗೆ ಹೋಗುತ್ತೇನೆ ಎಂದು ತಿಳಿಸಿ ಅವರಗುಪ್ಪಾಕ್ಕೆ ಮರಳಿದ್ದಾಳೆ. ರಾತ್ರಿ ೯-೪೫ರ ಸುಮಾರಿಗೆ ಸುಚಿತ್ರಾ ಹಾಗೂ ಇತರ ಆರೋಪಿಗಳು ಅವರಗುಪ್ಪಾಕ್ಕೆ ಬಂದು ಮಗಳನ್ನು ಕಳುಹಿಸಿಕೊಡುವಂತೆ ಗಲಾಟೆ ಮಾಡಿದ್ದಾರೆ ಬಲತ್ಕಾರದಿಂದ ಹೆಣ್ಣುಮಗುವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ ತಡೆಯಲು ಬಂದ ವಸಂತ ನಾಯ್ಕ,ಮಹೇಶ ನಾಯ್ಕ,ಕುಮಾರ ನಾಯ್ಕ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಗ್ರಾಮಸ್ಥರು ಸೇರಿದ್ದರಿಂದ ಆರೋಪಿಗಳು ಪರಾರಿಯಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ತರಲಾಗಿ ವಸಂತ ನಾಯ್ಕ ಮರಣ ಹೊಂದಿದ್ದು ಉಳಿದ ಇಬ್ಬರಿಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.
ಸ್ಥಳಕ್ಕೆ ಮಂಗಳೂರುವಲಯದ ಐಜಿ ಅಮಿತ ಸಿಂಗ್ ಎಸ್ಪಿ ದೀಪನ್ ಎಂ.ಎನ್.ಅಪರ ಎಸ್ಪಿ ಜಗದೀಶ ನಾಯ್ಕ,ಡಿವೈಎಸ್ಪಿ ಗೀತಾ ಪಾಟೀಲ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ
—-
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ.ದೀಪನ್ ಎನ್.ಎಂ., ಮೃತಪಟ್ಟ ವಸಂತ ನಾಯ್ಕ ಪತ್ನಿಯವರ ದೂರಿನಂತೆ ಎಲ್ಲಾ ಏಳು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳ ಗುರುತು ಮಾಡಲಾಗಿದ್ದು ಉಳಿದ ಆರೋಪಿಗಳ ಹೆಸರು ವಿಳಾಸ ತನಿಖೆಯಿಂದ ತಿಳಿಯಬೇಕಾಗಿದೆ. ಅನೈತಿಕ ಸಂಬಂಧ ಕಾರಣ ಗಲಾಟೆ ನಡೆದು ಕೊಲೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬAದರೂ ಘಟನೆಗೆ ನಿರ್ಧಿಷ್ಟ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ ಎಂದು ಹೇಳಿದರು.

ಕುಡಗುಂದ ಸಹೋದರರ ಕೊಲೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಈಗಾಗಲೆ ಸುಳೆಮುರ್ಕಿಯಲ್ಲಿ ನಡೆದಿರುವ ಸಹೋದರರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಒಟ್ಟೂ ಮೂರು ಜನರನ್ನು ಬಂಧಿಸಿ ಪ್ರಕರನ ದಾಖಲಿಸಲಾಗಿದೆ ಹಣಕಾಸಿನ ವ್ಯವಹಾರದಿಂದ ಘಟನೆ ನಡದಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದರು.

ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಕೊಲೆ ಪ್ರಕರಣದಆರೋಪಿಗಳಿಗೆ ಕಠೀಣ ಶಿಕ್ಷೆ ನೀಡಬೇಕು ಹಾಗೂ ಕೊಲೆಯಾಗಿರುವ ವಸಂತ ನಾಯ್ಕ ಕುಟುಂಬಕ್ಕೆ ಪರಿಹಾರ ನೀಡಬೇಕು ಗಾಯಾಳುಗಳ ಚಿಕಿತ್ಸೆ ಉಚಿತವಾಗಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿ ಸಿದ್ದಾಪುರ ಪೊಲೀಸ್ ಠಾಣೆಯ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ,ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಪ್ರಮುಖರಾದ ನಂದನ ಬೋರ್ಕರ್ರಾಮಕೃಷ್ಣ ನಾಯ್ಕ,ಸಿ.ಆರ್.ನಾಯ್ಕ, ಮುಂತಾದವರು ಭಾಗವಹಿಸಿದ್ದರು
