ಸಿದ್ದಾಪುರ ಪಪಂ ವ್ಯಾಪ್ತಿಯಲ್ಲಿ 2.80ಕೋಟಿರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೀಮಣ್ಣ ನಾಯ್ಕ ಚಾಲನೆ

ಆದ್ಯೊತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ 2.80ಕೋಟಿರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಸುಧಾರಣೆ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು


ಗ್ಯಾರಂಟಿ ಯೋಜನೆಗಳನ್ನು ಕೊಡುವುದರ ಜೊತೆಗೆ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ಸರಕಾರ ನೀಡುತ್ತಿದೆ ಸಿದ್ದರಾಮಯ್ಯನವರು ದಾಖಲೆಯ ಬಜೆಟ್‍ನ್ನು ಅತ್ಯುತ್ತಮವಾಗಿ ನೀಡಿದ್ದು ಶಿಕ್ಷಣ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತುನೀಡಿರುವುದು ಸಂತೋಷ ತಂದಿದೆ.ಹಿಂದಿನ ಸರ್ಕಾರದ ಅವಧಿಯಲ್ಲಿನ 2 ಲಕ್ಷ ಕೋಟಿರೂ. ಹೆಚ್ಚಿನ ಹಣ ಗುತ್ತಿಗೆದಾರರಿಗೆ ಕೊಡುವುದು ಬಾಕಿ ಇದೆ ಈಗ ಅದನ್ನು ತೀರಿಸುವವರು ಯಾರು. ಮುಖ್ಯಮಂತ್ರಿಗಳು ಗುತ್ತಿಗೆದಾರರಿಗೆ ಕೊಡಬೇಕಾದ ಹಳೆಯ ಬಾಕಿ ಹಣವನ್ನು ಸಹ ತೀರಿಸುತ್ತಾ ಇದ್ದಾರೆ. ರಾಜ್ಯದಲ್ಲಿ ರಾಜ್ಯ ಸರ್ಕಾರ ತುಂಬಾ ಸಾಲ ಮಾಡಿದೆ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ ಅದೇ ರೀತಿ ಸಾಲ ಮಾಡಿದೆ. ಸಾಲ ಮಾಡಿ ಮೋದಿಜಿಯವರಾಗಲಿ ಅಥವಾ ಸಿದ್ದರಾಮಯ್ಯನವರಾಗಲಿ ಹಣವನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ ಆರ್ಥಿಕ ಸಂಕಷ್ಟದಲ್ಲಿದ್ದಾಗ ಹಣವನ್ನು ಸಾಲವಾಗಿ ತೆಗೆದುಕೊಳ್ಳುವುದು ಸಹಜ. ಆದರೆ ಬೊಮ್ಮಾಯಿರವರ ನೇತೃತ್ವದ ಬಿಜೆಪಿ ಸರ್ಕಾರ ಎಷ್ಟು ಸಾಲ ಮಾಡಿತ್ತು ಎಂದು ಇವರು ಈಗ ಹೇಳುತ್ತಿಲ್ಲ. ನಮ್ಮ ಅವಧಿಯಲ್ಲಿ ಮಾಡಿದ ಸಾಲವನ್ನು ಮಾತ್ರ ಹೇಳುತ್ತಾರೆ ಇದು ಸರಿಯಲ್ಲ ಎಂದು ಭೀಮಣ್ಣ ನಾಯ್ಕ. ಹೇಳಿದರು


ಅಣಲೇಬೈಲ್ ಗ್ರಾಪಂ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿರುವ ಕಾರಣ ಹೇರೂರುನಲ್ಲಿ ತಹಶೀಲ್ದಾರ್, ಪಿಡಿಓ, ಆರ್.ಎಫ್.ಒ ಹಾಗೂ ಆರೋಗ್ಯ ಇಲಾಖೆಯವರೊಂದಿಗೆ ಮಂಗನ ಕಾಯಿಲೆ ಕುರಿತು ಸಭೆ ನಡೆಸಿ ಅಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸೂಚನೆ ನೀಡಿದ್ದೇನೆ ಮಂಗನ ಕಾಯಿಲೆ ಔಷಧಿ ಕೊರತೆ ಇಲ್ಲ ಹಾಗೂ ಮಂಗನ ಕಾಯಿಲೆ ರಕ್ತ ಪರೀಕ್ಷೆಗೆ ಈಗಾಗಲೇ ಶಿರಸಿಯಲ್ಲಿ ನುರಿತ ಸಿಬ್ಬಂದಿಗಳಿಂದ ಪ್ರಾರಂಭವಾಗಿದೆ. ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆ ಆಗಬಾರದು ಎಂದು ಈಗಾಗಲೇ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಪಂಚಾಯತದಲ್ಲಿ ಹಣ ಇಲ್ಲದೆ ಇದ್ದರೆ ನಾನು ನನ್ನ ಅನುದಾನದಲ್ಲಿ ಹಣ ನೀಡುತ್ತೇನೆ ಯಾವುದೇ ಕಾರಣಕ್ಕೂ ನೀರಿನ ತೊಂದರೆ ಆಗಬಾರದು.

ಬೋರ್ ವೆಲ್ ಹಾಗೂ ಬಾವಿಗಳು ಬತ್ತಿದಿದ್ದರೆ ತಕ್ಷಣದಲ್ಲಿ ಇನ್ನೊಂದು ಬೋರ್ವೆಲ್ ಹೊಡೆಯಿರಿ ಅದಕ್ಕೆ ಹಣ ನೀಡುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಭಿವೃದ್ಧಿಯಾಗುವಂತೆ ಕೆಲಸ ಮಾಡುತ್ತಿದ್ದೆನೆ
ನಾನು ಅಧಿವೇಶನದಲ್ಲಿ ನನ್ನ ಕ್ಷೇತ್ರದ ಸಮಸ್ಯೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದೆನೆ ಸಾಕಷ್ಟು ಅನುದಾನಗಳನ್ನು ತಂದಿದ್ದೆನೆ ಅನುದಾನದ ಕೆಲಸಗಳನ್ನು ಮಳೆಗಾಲದ ಒಳಗೆ ಮುಗಿಸಬೇಕು ಎಂಬ ಉದ್ದೇಶದಿಂದ ಕೆಲಸದ ಒತ್ತಡದ ನಡುವೆಯೂ ಗುದ್ದಲಿ ಪೂಜೆಯನ್ನು ಮಾಡಿ ಕೆಲಸ ಪ್ರಾರಂಭಿಸಿದ್ದೆನೆ. ಆಸ್ಪತ್ರೆಯಲ್ಲಿ ಔಷಧದ ಕೊರತೆ ಆಗಿರಬಹುದು ಇದು ಕೇವಲ ನನ್ನ ಕ್ಷೇತ್ರದ ಸಮಸ್ಯೆಯಲ್ಲಿ ಈಡೀ ರಾಜ್ಯದ ಸಮಸ್ಯೆಯಾಗಿದೆ ಕೆಲವು ತಾಂತ್ರಿಕ ಕಾರಣದಿಂದ ಈ ರೀತಿ ಆಗಿರುವುದು ಇನ್ನು ಕೆಲವೇ ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಆರೋಗ್ಯ ಸಚೀವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

About the author

Adyot

Leave a Comment