ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮಾಳ್ಕೋಡ, ಕೆಳಗಿನ ಇಡಗುಂಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮ ಕಾರ್ಯಕ್ರಮ ನಡೆಸಲು ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದ್ದು ನಾಗರಾಜ ನಾಯ್ಕ ಮಾಳ್ಕೋಡ ಅಧ್ಯಕ್ಷರಾಗಿ, ಬಾಲಚಂದ್ರ ಎಂ.ನಾಯ್ಕ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ ನಾಯ್ಕ ಮಾಳ್ಕೋಡ,ನೂರಕ್ಕೂ ಹೆಚ್ಚು ವರ್ಷಗಳನ್ನು ಪೂರೈಸಿರುವ ನಮ್ಮ ಈ ಶಾಲೆಯಲ್ಲಿ ಕಲಿತ ಅನೇಕರು ಇಂದು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಎಲ್ಲರನ್ನು ಒಗ್ಗೂಡಿಸಿಕೊಂಡು, ಎಲ್ಲರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ಶಾಲೆಗೆ ಆಗಬೇಕಾಗಿರುವ ಶೈಕ್ಷಣಕ ಮತ್ತು ಭೌತಿಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಪೂರೈಸಿ ಶಾಲೆಯ ಶತಮಾನೋತ್ತರ ಸಂಭ್ರಮವನ್ನು ಆಚರಿಸುವುದಕ್ಕೆ ಸಂಘಟಿತರಾಗುತ್ತಿದ್ದರೆ, ಈ ಒಂದು ಕಾರ್ಯಕ್ಕೆ ಎಲ್ಲ ಹಳೆ ವಿದ್ಯಾರ್ಥಿಗಳ ಪಾಲಕ ಪೋಷಕರ ಸಹಕಾರವನ್ನು ಬಯಸುತ್ತಿದ್ದೇವೆ ಎಂದು ಹೇಳಿದರು.


ಸಮಿತಿಯ ಕಾರ್ಯಾಧ್ಯಕ್ಷರಾಗಿ ರಾಜೇಶ ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಜಿ. ಹೆಗಡೆ, ಕಾರ್ಯದರ್ಶಿಯಾಗಿ ಮುಖ್ಯಾದ್ಯಾಪಕಿ ಲಕ್ಷ್ಮೀ ಎನ್. ಭಟ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.


ಸಮಿತಿಯ ಉಪಾಧ್ಯಕ್ಷರಾಗಿ ಶಂಕರ ಗಣಪತಿ ನಾಯ್ಕ, ಅಮಕೂಸ್ ಮಂಜು ಗೌಡ, ಜಿ.ಕೆ.ಹೆಗಡೆ, ಜಿ.ಜಿ.ಹೆಗಡೆ, ಜಿ.ಆಯ್.ಗೌಡ ಇವರನ್ನು ಆಯ್ಕೆಮಾಡಲಾಗಿದೆ. ಸಂಘಟಕನಾ ಕಾರ್ಯದರ್ಶಿಗಳಾಗಿ ಮಂಜುನಾಥ ಕೃಷ್ಣ ನಾಯ್ಕ, ಗಜಾನನ ನಾಗಪ್ಪ ಹಳ್ಳೇರ್, ಗಣಪತಿ ಎನ್. ನಾಯ್ಕ, ಮೂರ್ತಿ ಎಂ. ಆಚಾರಿ, ಪದ್ಮಾವತಿ ಡಿ. ಶೆಟ್ಟಿ, ಸಹಕಾರ್ಯದರ್ಶಿಗಳಾಗಿ ಮಾರುತಿ ಎನ್. ನಾಯ್ಕ, ನಾಗೇಶ ಆರ್. ನಾಯ್ಕ, ವೀಣಾ ನಾಯ್ಕ, ಶರಾವತಿ ಎಂ. ಗೌಡ, ಕೇಶವ ಈರಾ ಅಂಬಿಗ, ಜ್ಯೋತಿ ಎಸ್. ಮಡಿವಾಳ ಇವರನ್ನು ಆಯ್ಕೆ ಮಾಡಲಾಗಿದೆ.


ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಮಲಾಕರ ಎನ್. ನಾಯ್ಕ, ಗಣೇಶ ಎಸ್. ನಾಯ್ಕ, ವೆಂಕಟ್ರಮಣ ಜಿ. ನಾಯ್ಕ, ಮಹೇಶ ಜಿ. ನಾಯ್ಕ, ಶಿವಾನಂದ ವಿ. ಶೇಟ್, ಮಂಜುನಾಥ ಭಂಡಾರಿ, ಮಂಜುನಾಥ ಎಸ್. ನಾಯ್ಕ, ಮಂಗಲಾ ಅಣ್ಣಯ್ಯ ಗೌಡ, ಸುಮಿತ್ರಾ ಎಸ್. ಹಳ್ಳೇರ್ ಇವರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಗೋಪಾಲ ಜೆ. ನಾಯ್ಕ, ಮಾಜಿ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮಂಜುನಾಥ ಬಿ. ನಾಯ್ಕ, ಅಧ್ಯಕ್ಷ ಪ್ರಶಾಂತ ಹೆಚ್. ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಊರನಾಗರಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

