ಆದ್ಯೋತ್ ಸುದ್ದಿನಿಧಿ:
ಕರ್ನಾಟಕ ಮೂಲದ ಡಾ. ಮಹಾಂತೇಶ ಹಿರೇಮಠ ಎ.ಎಸ್.ಎಂ ಇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಮೇರಿಕನ್ ಸೊಸೈಟಿ ಆಪ್ ಮೆಕ್ಯಾನಿಕಲ್ ಎಂಜನೀಯರ್ಸ್ ಸಂಘಟನೆಗೆ ೧೩೯ ವರ್ಷಗಳ ನಂತರ ಭಾರತೀಯರು ಅಧ್ಯಕ್ಷರಾಗುವ ಮೂಲಕ ಈಡೀ ಭಾರತ ದೇಶ ಹೆಮ್ಮೆ ಪಡುವಂತಾಗಿದೆ.
ಈ ಸಂಘಟನೆಯಲ್ಲಿ ೧೫೦ ದೇಶಗಳ ಲಕ್ಷಾಂತರ ಸದಸ್ಯರು ಇದ್ದಾರೆ. ಸಂಘಟನೆ ಜಾಗತಿಕ ಮಟ್ಟದ ಎಂಜನೀಯರಿಂಗ್ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆದು ಹೆಸರು ಮಾಡಿದೆ.
ಪುಣೆಯಲ್ಲಿ ಇಬ್ಬರು ಹಿರೇಮಠ ಸಹೋದರರು ಪ್ರಸಿದ್ದರಾಗಿದ್ದಾರೆ.ಒಬ್ಬರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಇನ್ನೊಬ್ಬರು ಎಂಜನೀಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅವರೇ ಡಾ.ಮಹಂತೇಶ ಹಿರೇಮಠರು.
ಡಾ ಮಹೇಶ ಅವರು ಚಿನ್ನದ ಪದಕ ದೊಂದಿಗೆ ಪಿಎಚ್ ಡಿ ಪದವಿ ಗಳಿಸಿದ್ದಾರೆ.ಮಾಡರ್ನ ಹೈಸ್ಕೂಲ್ ದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.ಪರ್ಗೂಸನ್ ಕಾಲೇಜ ಮತ್ತು ಕಾಲೇಜ್ ಆಫ್ ಎಂಜನೀಯರಿಂಗ್ ನಲ್ಲಿ ವ್ಯಾಸಂಗ ಮಾಡಿದ್ದಾರೆ.
ಇವರ ಆಯ್ಕೆಗೆ ದೇಶದ ಜನತೆ ಹೆಮ್ಮೆ ಪಡುವ ವಿಷಯವಾಗಿದೆ.