ಆದ್ಯೋತ್ ಸುದ್ದಿ ನಿಧಿ : ಬಳಕೆದಾರರ ಮಾಹಿತಿ ಕದಿಯುತ್ತಿದ್ದ ಆರೋಪದ ಮೇಲೆ ಪ್ರಸಿದ್ಧ ಟಿಕ್ ಟಾಕ್ ಸೇರಿದಂತೆ ಚೀನಾದ 59 ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ಚೀನಾ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬಂದು ತಂಟೆ ಮಾಡಿದ ಹಿನ್ನೆಲೆಯಲ್ಲಿ ಚೀನಾಕ್ಕೆ ಆರ್ಥಿಕವಾಗಿ ಲಾಭದಾಯಕವಾಗಿದ್ದ ಇಂತಹ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಬೇಕೆಂಬ ಕೂಗು ಜನರಿಂದ ವ್ಯಕ್ತವಾಗಿತ್ತು. ಭಾರತದಲ್ಲಿ ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಹೆಲೋ ಸೇರಿದಂತೆ ಇತರ 59 ಅಪ್ಲಿಕೇಶನ್ ಗಳ ಬಳಕೆ ಅತಿಯಾಗಿದ್ದರಿಂದ ಚೀನಾಗೆ ಇದರಿಂದ ಆರ್ಥಿಕವಾಗಿ ಲಾಭದಾಯಕವಾಗಿತ್ತು. ಇದೀಗ ದೇಶದೆಲ್ಲೆಡೆ ಬ್ಯಾನ್ ಚೈನಾ ಪ್ರಾಡಕ್ಟ್ಸ್ ಹಾಗೂ ಸಪೋರ್ಟ್ ಮೇಕ್/ಮೇಡ್ ಇನ್ ಇಂಡಿಯಾ ಅನ್ನೋ ಕೂಗುಗಳು ಬಲವಾಗಿದ್ದಲ್ಲದೆ ಜನ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದರು. ಇದೀಗ ಕೇಂದ್ರ ಸರ್ಕಾರ 59 ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿದ್ದು, ಚೀನಾಕ್ಕೆ ಆರ್ಥಿಕ ಸರ್ಜಿಕಲ್ ಸ್ಟ್ರೈಕ್ ಮಾಡಿದಂತಿದೆ.