ಆದ್ಯೋತ್ ಸುದ್ದಿನಿಧಿ:
ಪಶ್ಚಿಮಪದವೀಧರ ಕ್ಷೇತ್ರದ ಅಭ್ಯರ್ಥಿ ಬಸವರಾಜಗುರಿಕಾರ ಮಂಗಳವಾರ ಸಾಹಿತಿ ಚನ್ನವೀರ ಕಣವಿ ಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂಧರ್ಭದಲ್ಲಿ ಚನ್ನವೀರ ಕಣವಿಯವರು ಗುರಿಕಾರರವರು ಚುನಾವಣೆಗೆ ಸ್ಪರ್ಧೆ ಮಾಡಿರುವುದು ತುಂಬಾ ಸಂತೋಷವಾಗಿದೆ, ಗೆಲುವು ಕೂಡಾ ನಿಮ್ಮದಾಗಲಿದೆ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ರಾಘು ನರಗುಂದ, ಶಿವಾನಂದ ಇತರರು ಇದ್ದರು
*******

ಇಷ್ಟು ವರ್ಷಗಳ ಕಾಲ ಯಾವ ಸರ್ಕಾರವು ಪದವೀಧರರ ಸಮಸ್ಯೆಗಳತ್ತ ಬೆಳಕು ಚೆಲ್ಲಲಿಲ್ಲ. ಆದ್ದರಿಂದ ಈ ಬಾರಿ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ತಮಗೆ ಅವಕಾಶ ನೀಡಿದರೆ ಪದವೀಧರರ ಎಲ್ಲ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ಕಲಘಟಗಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷಗಳು ಪದವೀಧರರನ್ನು ಕಡೆಗಣಿಸಿವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪದವೀಧರರನ್ನು ಬಳಸಿಕೊಂಡು ನಂತರದಲ್ಲಿ ಅವರ ಯಾವ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿವೆ. ಇದು ಪದವೀಧರ ಮತದಾರ
ರಲ್ಲೂ ಅತೀವ ಬೇಸರ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪದವೀಧರರ ಒತ್ತಾಯದ ಮೇಲೆಯೇ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದು ತಮಗೆ ಮೊದಲ ಪ್ರಾಶಸ್ಯದ ಮತ ನೀಡಿ ಎಂದು ಮನವಿ ಮಾಡಿದರು.

ಸ್ಥಳೀಯವಾಗಿ ಕಾಯಂ ಉದ್ಯೋಗ ಸೃಷ್ಟಿ ಮಾಡುವ ಎಲ್ಲ ಅವಕಾಶಗಳು ಸರ್ಕಾರಕ್ಕಿದೆ. ಆದರೆ, ಈ ಕೆಲಸ ಮಾತ್ರ ಆಗದ ಹಿನ್ನೆಲೆಯಲ್ಲಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಎಲ್ಲ ಪದವೀಧರರಿಗೆ ಮಾಸಿಕ ಗೌರವಧನ, ನಿರುದ್ಯೋಗ ಭತ್ಯೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂದರು.

ನಂತರ ಕಲಘಟಗಿಯ ಗುಡ್ ನ್ಯೂಸ್ ಕಾಲೇಜು, ಸರ್ಕಾರಿ ಪದವಿ ಕಾಲೇಜು ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸವರಾಜ ಗುರಿಕಾರ ಪ್ರಚಾರ ನಡೆಸಿದರು. ಅಲ್ಲದೇ, ಅಂಬೇಡ್ಕರ ಭವನದಲ್ಲಿ ಪದವೀಧರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಬರುವ ದಿನಗಳಲ್ಲಿ ತಮ್ಮ ಪ್ರತಿನಿದಿಯಾಗಿ ಪದವೀಧರರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂಧರ್ಭದಲ್ಲಿ ವಿನಾಯಕ ಗುಡ್ಡದಕೇರಿ, ಯಲ್ಲಪ್ಪ ಮೇಲಿನಮನಿ, ಮಂಜುನಾಥ್ ಮಾದರ , ಶಶಿಧರ ಕಟ್ಟಿಮನಿ, ಅಣ್ಣಪ್ಪ ಕಟ್ಟಿಮನಿ ಇದ್ದರು. ನಂತರ ಕೃಷಿ ವಿವಿಯಲ್ಲೂ ಪ್ರಚಾರ ನಡೆಸಲಾಯಿತು. ಇನ್ನು, ಜೋಯಿಡಾ, ಶಿರಸಿ, ಸಿದ್ದಾಪೂರ, ಅಂಕೋಲಾ, ಹಾಗೂ ಕಾರವಾರ, ಹಾವೇರಿ, ಶಿಗ್ಗಾವಿ, ಧಾರವಾಡದಲ್ಲಿ ಗುರಿಕಾರ ರವರ ಪರವಾಗಿ ಪದವೀಧರರ ತಂಡವು ಪ್ರಚಾರ ನಡೆಸಲಾಯಿತು

