ಆದ್ಯೋತ್ ಸುದ್ದಿನಿಧಿ:
ಕಳೆದ ಎರಡು ವರ್ಷದಿಂದ ಆರೋಗ್ಯ & ವೈ. ಶಿಕ್ಷಣ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು
ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸತತ ಹೋರಾಟ ಮಾಡುತ್ತಾ ಬಂದಿದ್ದು ಸೆ.24 ರಿಂದ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ,ಒಂದು ತಿಂಗಳ ಕಾಲಾವಕಾಶವನ್ನು ಅಂದಿನ ಆರೋಗ್ಯ ಸಚೀವ ಶ್ರೀರಾಮುಲು ಭರವಸೆ ನೀಡಿದ್ದರು.ಎಂದು ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್.ಯಾಮೋಜಿ ಹೇಳಿದರು.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಯಾಮೋಜಿ,ತಿಂಗಳ ಒಳಗೆ ಈಡೇರಿಸುವ ಬಗ್ಗೆ ಸ್ಪಷ್ಟ ಭರವಸೆ ಮತ್ತು ಎಲ್ಲಾ ಬೇಡಿಕೆಗಳನ್ನು ಸಮಿತಿಯ ಮುಖೇನ ಪರಿಹರಿಸುವುದಾಗಿ ತಿಳಿಸಿ, ಸದರಿ ನೌಕರರ ಮೇಲೆ ತೆಗೆದುಕೊಂಡ ಕ್ರಮಗಳನ್ನು ಹಿಂಪಡಿಯಲು ಮತ್ತು ಮುಷ್ಕರದ ದಿನದ ವೇತನವನ್ನು ಪಾವತಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರಿಂದ ನಾವು ನಮ್ಮ ಮುಷ್ಕರವನ್ನು ಮುಂದೂಡಿದ್ದೇವು.ಈಗ ಆರೋಗ್ಯ
ಸಚೀವರಾಗಿರುವ ಡಾ.ಸುಧಾಕರವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹೊಂದಿದ್ದು ನಮ್ಮ ಕಷ್ಟ-ಸುಖಗಳ ಅರಿವಿದೆ ಹೀಗಾಗಿ ಒಂದು ತಿಂಗಳ ಒಳಗೆ ಶ್ರೀರಾಮುಲು ನೀಡಿದ್ದ ಭರವಸೆಯನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಪ್ರದಾನಕಾರ್ಯದರ್ಶಿ ಶ್ರೀಕಾಂತಸ್ವಾಮಿ ಮಾತನಾಡಿ,
ಕೊರೋನದಿಂದ ಜಗತ್ತು ಕಲಿತ ಪಾಠ ಅನನ್ಯ ಆರೋಗ್ಯಕ್ಕಿಂತ ಬೇರೆ ಯಾವುದೂ ಪ್ರಮುಖ ಇಲ್ಲಾ ಎಂಬುದು ಸಾಬೀತಾಗಿದೆ. ಆದಕಾರಣ ಆರೋಗ್ಯ ಇಲಾಖೆ ಒಂದು ವಿಶೇಷ ಇಲಾಖೆ ಎಂದು ಪರಿಗಣಿಸಿ ಚರ್ಚಿಸಿದ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂಬ ವಿಶ್ವಾಸದಿಂದ ಮತ್ತು ಭರವಸೆಯ ಪ್ರಯುಕ್ತ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ನೌಕರರು ಅ.8 ರಿಂದ ಕೆಲಸಕ್ಕೆ ಹಾಜರಾಗುವ ಮೂಲಕ ಮಾನ್ಯ ಸಚಿವರಿಗೆ ಹಾಗೂ ಸರ್ಕಾರಕ್ಕೆ ಗೌರವಿಸಿದ್ದೇವೆ.30000 ಕ್ಕು ಹೆಚ್ಚು ಮನನೊಂದ ನೌಕರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಸಚಿವರು ಮಾತು ಕೊಟ್ಟ ಹಾಗೆ, ಮಾತಿಗೆ ತಪ್ಪದೆ ಬಡ ನೌಕರರ ಕುಟುಂಬದ ಕಣ್ಮಣಿಯಾಗಿ ಪ್ರಮುಖರೊಂದಿಗೆ ಚರ್ಚಿಸಿದ ಬೇಡಿಕೆಗಳ ಆದೇಶಗಳನ್ನು ತಾವುಗಳು ಸಕಾಲದಲ್ಲಿ ಹೊರಡಿಸಲು ಮತ್ತು ಬೇಡಿಕೆಗಳನ್ನು ಈಡೇರಿಸಲು ಮಾಧ್ಯಮಗಳ ಮೂಲಕ ಸರ್ಕಾರದ ಹಾಗೂ ಸಾರ್ವಜನಿಕರ ಗಮನವನ್ನು ಸೆಳೆಯುಲು ವಿನಂತಿಸುತ್ತೇವೆ.
ರಾಜ್ಯಾದ್ಯಂತ ಎಲ್ಲ ನೌಕರರು ಸರಕಾರದ ಭರವಸೆಯ ಮೇರೆಗೆ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ದಸರಾ ಹಬ್ಬವಾದರೂ ಇಲ್ಲಿಯವರೆಗೆ ಮುಷ್ಕರದ ವೇತನ ಪಾವತಿಯಾಗಿರುದಿಲ್ಲ; ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿದು ಮೂವತ್ತು ದಿನಗಳ ಕಾಲ ತಾಳ್ಮೆಯಿಂದ ಕಾಯುತ್ತೇವೆ
ನೌಕರರ ಬೇಡಿಕೆಗಳನ್ನು ಈಡೇರಿಸುವವರೆಗೆ ಸಂಘ ವಿಶ್ರಮಿಸುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದರೆ ಅಥವಾ ವಿಳಂಬ ಧೋರಣೆ ಅನುಸರಿಸಿದರೆ. ಅನಿವಾರ್ಯವಾಗಿ ಮತ್ತೆ ತೀವ್ರ ಸ್ವರೂಪದ ಅಥವಾ ಉಗ್ರವಾದ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಸ್ವಾಮಿ.ನವೆಂಬರ್ ಮೊದಲ ವಾರದಲ್ಲಿ ಸಂಘದ ರಾಜ್ಯ ಮಟ್ಟದ ಸಭೆಯನ್ನು ಕರೆದು ಮುಂದಿನ ನಡೆಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಮುಖಂಡರಾದ ಸಂತೋಷ್, ಪ್ರಸಾದ್, ವೆಂಕಟೇಶ್, ರಾಚಣ್ಣಗೌಡ ಮತ್ತಿತರರು ಹಾಜರಿದ್ದರು.
