ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಮುಂಡುಗೋಡ ತಾಲೂಕಿನ ಹುನಗುಂದ ಗ್ರಾಮದ ವಿರಕ್ತಮಠದಲ್ಲಿ ಧರ್ಮಕ್ಷೇತ್ರಪಂಚಮಸಾಲಿ ಜಗದ್ಗುರು ಮಹಾಪೀಠ ಪ್ರಥಮಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಗಳು ಲಿಂಗಾಯತ ಸಮಾಜಕ್ಕೆ 2A ಮೀಸಲಾತಿ ಹಕ್ಕೋತ್ತಾಯ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಅಂಗವಾಗಿ ಲಿಂಗಾಯತ ಮುಖಂಡರ ಸಭೆ ನಡೆಸಿದರು.
ಹಿಂದಿನ ಮುಖ್ಯಮಂತ್ರಿಗಳು ಪಂಚಮಸಾಲಿ ಲಿಂಗಾಯತಕ್ಕೆ 2A ಮೀಸಲಾತಿ ನೀಡಲು ನೀಡಿದ ಗಡವು ಸಪ್ಟೆಂಬರ್ 15ಕ್ಕೆ 6 ತಿಂಗಳು ಮುಗಿಯುತ್ತಾ ಬಂದಿದೆ.ವಿಧಾನಸೌದದಲ್ಲಿ ಕೊಟ್ಟ ಮಾತಿಗೆ ಸರಕಾರದ ಗಮನ ಸೆಳೆಯಲು ಹಾಗೂ ಸಮುದಾಯವನ್ನು ಜಾಗೃತ ಗೊಳಿಸಲು ಈ ಅಭಿಯಾನ ಇಟ್ಟುಕೊಂಡಿರುತ್ತೆವೆ ಲಿಂಗಾಯತ ಸಮಾಜದಲ್ಲಿ ಸಣ್ಣ ಪುಟ್ಟ ಪಂಗಡಗಳು ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡಿದ್ದು ನಮಗೆ ಸಂಘಟನೆ ಮಾಡಲು ಬಿಟ್ಟಿರಲಿಲ್ಲ ನಮ್ಮಿಂದ ಎಲ್ಲಾ ಪಡೆದುಕೊಂಡು ನಮಗೆ ಮಾತ್ರ ಏನನ್ನೂ ನೀಡಲಿಲ್ಲ.ನಮ್ಮ ಮಕ್ಕಳಿಗೆ ವಿಧ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ನಮಗೆ ಮೀಸಲಾತಿ ಬೇಕು ಇದನ್ನು ಪಡೆಯಲು ನಾವು ಹೋರಾಟದ ಮಾರ್ಗ ಆಯ್ದುಕೊಂಡಿದ್ದು ಅನಿವಾರ್ಯ.ನಾವು ಇದನ್ನು ಮಾಡಿದರು ಕೆಲವರಿಗೆ ಮನಸ್ಸು ಕರಗುತ್ತಿಲ್ಲ ಕನಿಕರ ಬರುತ್ತಿಲ್ಲಾ.
ನಾವು ಬ್ಲಾಕ್ ಮೇಲ್ ತಂತ್ರದ ಮೂಲಕ ನಮ್ಮ ಸಮುದಾಯದ ಸಂಘಟನೆ ಮಾಡುವ ಕೇಲಸ ಮಾಡುತ್ತಿಲ್ಲ ಲಿಂಗಾಯತ ಪಂಚಮಸಾಲಿ ಸಮುದಾಯ ಕೃಷಿಆಧಾರಿತ ಸಮುದಾಯವಾಗಿದ್ದು ದೇಶದಲ್ಲಿ ರೈತನಿಗೆ ನಷ್ಟವಾದರೆ ದೇಶಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು.

ನಾವು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಂಚಮಸಾಲಿ ಲಿಂಗಾಯತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಕೇಲವರು ಉಳವಿ ಚೆನ್ನಬಸವನಿಗೆ ಪಾದಯಾತ್ರೆ ಮಾಡುತ್ತಾರೆ ಕುಟುಂಬದ ಒಳಿತಿಗೆ ಆದರೆ ನಮ್ಮ ಪಾದ ಯಾತ್ರೆ ಪಂಚಮಸಾಲಿ ಲಿಂಗಾಯತ ಸಮುದಾಯದ ಉದ್ಧಾರಕ್ಕಾಗಿ.
ಹಿಂದೆ ನಮ್ಮ ಸಮುದಾಯದ ಹಿರಿಯರು ಮಾಡಿದ ಸಣ್ಣ ತಪ್ಪಿನಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ತಪ್ಪಿತ್ತು ಹಾಗಾಗಿ ನಮ್ಮ ಮಕ್ಕಳಿಗೆ ಸರಕಾರಿ ಹುದ್ದೆ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರವೇಶಾತಿಯಲ್ಲಿ ಅವಕಾಶ ತಪ್ಪಿದೆ ಅದು ಮತ್ತೆ ಮರುಕಳಿಸುವುದು ಬೇಡ.ಒಂದು ವೇಳೆ ಈಗಿನ ಮುಖ್ಯಮಂತ್ರಿ ನಮ್ಮ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಿದರೆ ನಮ್ಮ ಮಠದಲ್ಲಿ ಚೆನ್ನಮ್ಮ ಪೋಟೋದ ಪಕ್ಕದಲ್ಲಿ ಬಸವರಾಜ ಬೊಮ್ಮಯಿ ಪೋಟೋ ಹಾಕುತ್ತೇನೆ ಒಂದು ವೇಳೆ ಹಿಂದಿನ ಮುಖ್ಯಮಂತ್ರಿಗಳು ಕೊಟ್ಟ ಮಾತು ಮರೆತರೆ ಹಾಗೂ ಈಗಿನ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸದೆ ಹೋದರೆ ಅಕ್ಟೋಬರ್ 1 ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುತ್ತೇವೆ ಮುಂಡಗೋಡ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನ ಬರಬೇಕು ಎಂದು ಹೇಳಿದರು.
ಸಭೆಯಲ್ಲಿ ಪಂಚಮಸಾಲಿ ಲಿಂಗಾಯತ ಮುಖಂಡರಾದ ಸಿದ್ದು ಹಡಪದ,ಈಶ್ವರ ಗೌಡ,ಬಸಪ್ಪ ಬಿಸ್ನಳ್ಳಿ,
ಮಲ್ಲಿಕಾರ್ಜುನ ಕುಟ್ರಿ ಮುಂತಾದವರು ಉಪಸ್ಥಿತರಿದ್ದರು.
