ಶಿರಸಿ:ಡಾ.ಶ್ಯಾಮಪ್ರಸಾದ ಮುಖರ್ಜಿ 125ನೇ ಜನ್ಮವಾರ್ಷಿಕೋತ್ಸವ – ಜಿಲ್ಲಾ ಕಾರ್ಯಕರ್ತರ ಸಮ್ಮೇಳನ

ಆದ್ಯೊತ್ ಸುದ್ದಿನಿಧಿ:
ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ 125ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಶಿರಸಿಯ ದೀನದಯಾಳ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಮಾವೇಶ ಯಶಸ್ವಿಯಾಗಿ ನಡೆಯಿತು.

ಸಮಾವೇಶವನ್ನು ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಕಾಂಗ್ರೆಸ್ ಸರ್ಕಾರ SIR
ಕುರಿತು ಜನರಲ್ಲಿ ಅನಗತ್ಯ ಭ್ರಮೆ ಸೃಷ್ಟಿ ಮಾಡುತ್ತಿದೆ. ಜನರ ಕುಂದು ಕೊರತೆ ಆಲಿಸಬೇಕಾದವರು ಬೇಜವಾಬ್ಧಾರಿಯಿಂದ ನಡೆದುಕೊಳ್ಳುತ್ತಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯ. ಡಾ.ಶ್ಯಾಮಪ್ರಸಾದ ಮುಖರ್ಜಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ವಿರೋಧಿಸಿ ಹೋರಾಟವನ್ನು ನಡೆಸಿದ್ದರು ಅವರ ತ್ಯಾಗ ಮತ್ತು ಬಲಿದಾನ ನಮ್ಮೆಲ್ಲರಿಗೂ ಆದರ್ಶ ಎಂದು ತಿಳಿಸಿದರು


ಸಂವಿಧಾನ ಫೌಂಡೇಶನ್ ನ ಸಂಸ್ಥಾಪಕ ಪ್ರಕಾಶ ಮಲ್ಪೆ ಮಾತನಾಡಿ,ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ದೇಶಭಕ್ತಿ, ತ್ಯಾಗ, ಹೋರಾಟ ಮತ್ತು ಕೊಡುಗೆಗಳ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ನೆಹರು ಭಾರತ ಹಾಗೂ ಪಾಕಿಸ್ತಾನಗಳ ನಡುವೆ ರಾಜ್ಯಗಳ ಅಥವಾ ಭೂ ಪ್ರದೇಶಗಳ ಹಂಚಿಕಗೆ ಸಹಿ ಮಾಡುವುದರ ವಿರುದ್ಧ ಧ್ವನಿಯೆತ್ತಿದವರು ಮುಖರ್ಜಿ ಹಾಗೂ ಜನಾಂದೋಲನ ರೂಪಿಸಿ ಜನರನ್ನು ಸಂಘಟಿಸಿ ಪಂಜಾಬ್ ಹಾಗೂ ಬಂಗಾಳದ ಅನೇಕ ಪ್ರದೇಶಗಳು ಭಾರತದಲ್ಲಿ ಉಳಿಯುವಂತೆ ನೋಡಿಕೊಂಡರು . ಅತ್ಯಂತ ಪ್ರತಿಭಾವಂತ ರಾದ ಶಾಮಪ್ರಸಾದ್ ಮುಖರ್ಜಿ ಅವರು ಬ್ಯಾರಿಸ್ಟರ್ ಪದವಿಯ ನಂತರ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಣ್ಣ ವಯಸ್ಸಿಗೆ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿದರು, ನಂತರ ರಾಜಕೀಯ ಪ್ರವೇಶಿಸಿ ರಾಷ್ಟ್ರೀಯತೆಯ ಪ್ರತಿಪಾದಕರಾಗಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು ಎಂದರು.

ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಸ್ವಾಗತಿಸಿದರು, ಪ್ರಶಾಂತ ನಾಯ್ಕ ನಿರ್ವಹಿಸಿದರು ಹಾಗೂ ಶಿವಾಜಿ ನರಸಾನಿ ವಂದಿಸಿದರು.

ವಿಭಾಗ ಸಹ-ಪ್ರಭಾರಿ ಆರ್ ಡಿ ಹೆಗಡೆ, ಮಾಜಿ ಸಚಿವ
ಶಿವಾನಂದ ನಾಯ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ ಜಿ ನಾಯ್ಕ, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ರಾಜ್ಯ ಮಹಿಳಾಮೋರ್ಚಾ ಕಾರ್ಯಕಾರಿಣಿ ಸದಸ್ಯ ರೇಖಾ ಹೆಗಡೆ, ಸಂಸ್ಮರಣ ಪಾಕ್ಷಿಕ ಕಾರ್ಯಕ್ರಮಗಳ ಸಂಚಾಲಕ ಉಮೇಶ ಭಾಗ್ವತ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ,ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಶಿವಾನಿ ಶಾಂತರಾಮ, ಜಿಲ್ಲೆಯ ಹಾಗೂ ಮಂಡಲಗಳ ಪದಾಧಿಕಾರಿಗಳು, ವಿಶೇಷವಾಗಿ ಯುವಮೋರ್ಚ ಹಾಗೂ ಮಹಿಳಾಮೋರ್ಚಾದ ಪದಾಧಿಕಾರಿಗಳು ಮತ್ತು ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

About the author

Adyot

Leave a Comment