ಭೀಮಣ್ಣ ನಾಯ್ಕ ಹಾಗು ಗಣಪತಿ ಉಳ್ವೇಕರ ಪ್ರತ್ಯೇಕ ಸಭೆ–ಸುದ್ದಿಗೋಷ್ಠಿ

ಆದ್ಯೋತ್ ಸುದ್ದಿನಿಧಿ:
ವಿಧಾನಪರಿಷತ್ ಚುನಾವಣೆಯ ಪ್ರಚಾರಕ್ಕೆ ರಂಗೇರುತ್ತಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಎರಡು ಪ್ರಮುಖ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಕಾರ್ಯಕರ್ತರ ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸಿದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ,
ಗ್ರಾಮೀಣ ಭಾಗದಿಂದ ಬಂದಿರುವ ನನಗೆ ಗ್ರಾಮೀಣ ಸಮಸ್ಯೆಗಳ ಬಗ್ಗೆ ಅರಿವಿದ್ದು ಪರಿಷತ್‍ನಲ್ಲಿ ಗ್ರಾಪಂ,ತಾಪಂ,ಜಿಪಂ ನಂತಹ ಸ್ಥಳಿಯ ಸಂಸ್ಥೆಗಳ ಬಲಪಡಿಸುವ ಬಗ್ಗೆ ಕಾರ್ಯನಿರ್ವಹಿಸುತ್ತೇನೆ ಜಿಲ್ಲೆಯ ಸಮಸ್ಯೆಯಾದ ಅತಿಕ್ರಮಣ ಸಮಸ್ಯೆ ಹಾಗೂ ಇ-ಸ್ವತ್ತಿನ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಪರಿಷತ್‍ನಲ್ಲಿ ಧ್ವನಿ ಎತ್ತುತ್ತೇನೆ ರಾಜ್ಯಸರಕಾರ,ಕೇಂದ್ರ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹಾಳುಗೆಡುವುತ್ತಿದೆ ಗ್ರಾಮೀಣ ಭಾಗದ ಕುಡಿಯುವ ನೀರು,ರಸ್ತೆಗಳ ದುರಸ್ತಿಗೆ ಅನುದಾನ ನೀಡುತ್ತಿಲ್ಲ ಪಂಚಾಯತ್‍ಗಳಿಗೆ ಆರ್ಥಿಕ ಬಲವನ್ನು ತುಂಬುತ್ತಿಲ್ಲ ಕಾಂಗ್ರೆಸ್ ಗೆಲುವನ್ನು ಮನಗಂಡಿರುವ ರಾಜ್ಯ ಸರಕಾರ ಅವಧಿ ಮುಗಿದು ಒಂದುವರ್ಷವಾಗುತ್ತಾ ಬಂದರೂ ತಾಪಂ ಹಾಗೂ ಜಿಪಂ ಚುನಾವಣೆಯನ್ನು ನಡೆಸುತ್ತಿಲ್ಲ.ಆದರೆ ಈ ಎಲ್ಲಾ ಕುತಂತ್ರದಿಂದ ಕಾಂಗ್ರೆಸ್‍ನ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷ ನೀಡಿದ ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ. ನಾನು ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ ಆದರೆ ಕೊನೆ ಕ್ಷಣದಲ್ಲಿ ನನಗೆ ಟಿಕೇಟ್ ನೀಡಲಾಯಿತು. ಪಕ್ಷದ ರಾಜ್ಯಮುಖಂಡರಿಗೆ,ಜಿಲ್ಲ ಮುಖಂಡರಿಗೆ ನಾನು ಗೌರವ ಕೊಡುತ್ತೇನೆ ಆದ್ದರಿಂದ ಪಕ್ಷ ನೀಡಿದ ಜವಾಬ್ದಾರಿಯನ್ನು ಒಪ್ಪಿ ಸ್ಪರ್ದಿಸುತ್ತಿದ್ದೆನೆ.ನಮ್ಮ ಪಕ್ಷದಲ್ಲಿ ಯಾವುದೇ ಒಡಕು,ಗುಂಪುಗಾರಿಕೆ ಇಲ್ಲ ನನ್ನ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಎಲ್ಲಾ ಮುಖಂಡರೂ ಉಪಸ್ಥಿತರಿದ್ದರು. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆಯಾಗಿದ್ದು ಜಿಲ್ಲೆಯ 2911 ಮತದಾರರು ನನ್ನನ್ನು ಬೆಂಬಲಿಸಿ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.
ಜಿಪಂ ಸದಸ್ಯನಾಗಿ ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿದೆ ಜಿಲ್ಲೆಯ ಸಮಸ್ಯೆಗೆ ವಿಧಾನಪರಿಷತ್‍ನಲ್ಲಿ ಗಟ್ಟಿಧ್ವನಿ ಬೇಕಾಗಿದೆ ಸ್ಥಳೀಯ ಸಂಸ್ಥೆಗಳನ್ನು ಹತ್ತಿರದಿಂದ ಕಂಡಿದ್ದೆನೆ ಅಲ್ಲಿಯ ಸಮಸ್ಯೆ ನನಗೆ ಗೊತ್ತಿದೆ ದಿ.ಬಂಗಾರಪ್ಪನವರು ನನ್ನ ರಾಜಕೀಯ ಗುರುಗಳು ಅವರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸುತ್ತಿದ್ದರು. ಚುನಾವಣೆಯಲ್ಲಿ ಸೋತಾಗ ಜನರ ಜೊತೆ ನಿಲ್ಲಬೇಕು ಎಂದು ಹೇಳುತ್ತಿದರು ಅದರಂತೆ ಣಾನು ನಡೆಯುತ್ತಿದ್ದೆನೆ. ಈಗ ಮಧು ಬಂಗಾರಪ್ಪ ಪಕ್ಷಕ್ಕೆ ಬಂದಿರುವುದರಿಂದ ಪಕ್ಷಕ್ಕೆ ಇನ್ನಷ್ಟು ಬಲಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
#######

ಸಿದ್ದಾಪುರ ಪಟ್ಡಣದ ಬಾಲಭವನದಲ್ಲಿ ಸಭೆ ನಡೆಸಿ ಮಾತನಾಡಿದ ಗಣಪತಿ ಉಳ್ವೇಕರ,ವಿಧಾನಪರಿಷತ್ ಗೆ ನಾನು ಆಯ್ಕೆಯಾದರೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹಾಗೂ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ
ಕಳೆದ ಬಾರಿ ಜಿಲ್ಲೆಯಲ್ಲಿ ಒಬ್ಬರೇ ಶಾಸಕರಿದ್ದಾಗ ನಾನು ಒಂದು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೆ ಈ ಬಾರಿ ಜಿಲ್ಲೆಯಲ್ಲಿ 5 ಶಾಸಕರಿದ್ದಾರೆ,ಸಂಸದರು ನಮ್ಮ ಪಕ್ಷದವರಾಗಿದ್ದಾರೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ ಆದ್ದರಿಂದ ಈ ಬಾರಿ 2100ಕ್ಕೂ ಹೆಚ್ಚು ಮತದಿಂದ ನಾನು ಆಯ್ಕೆಯಾಗುತ್ತೇನೆ ಎಂದು ಹೇಳಿದರು.
ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ,ಗಣಪತಿ ಉಳ್ವೇಕರ ಒಬ್ಬ ಸಮರ್ಥ ಅಭ್ಯರ್ಥಿಯಾಘಿದ್ದು ಜಿಲ್ಲೆಯ ಧ್ವನಿಯಾಗಲಿದ್ದಾರೆಎರಡು ಬಾರಿ ಕಾರವಾರ ನಗರಸಭೆಯ ಅಧ್ಯಕ್ಷರಾಗಿ,ಐದು ಬಾರಿ ಸದಸ್ಯರಾಗಿ ಅನುಭವವನ್ನುಗಳಿಸಿದ್ದಾರೆ ಅಲ್ಲದೆ ಜಿಲ್ಲೆಯಲ್ಲಿರುವ 2911 ಮತಗಳಲ್ಲಿ ಹೆಚ್ಚಿನ ಮತಗಳು ನಮ್ಮ ಪಕ್ಷದವರದ್ದಾಗಿದೆ ಸಿದ್ದಾಪುರದಲ್ಲಿ 234 ಮತಗಳಿದ್ದು 117 ಗ್ರಾಪಂ ಸದಸ್ಯರು,14 ಪಪಂ ಸದಸ್ಯರು ನಮ್ಮ ಪಕ್ಷದವರಾಗಿದ್ದಾರೆ ಹೀಗಾಗಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಳೆದ 12 ವರ್ಷದಿಮದ ವಿಧಾನಪರಿಷತ್‍ನಲ್ಲಿದ್ದ ಎಸ್.ವಿ.ಘೋಟ್ನೇಕರ ಈ ಬಾರಿ ಸೋಲುವ ಭೀತಿಯಿಂದ ವಿಧಾನಪರಿಷತ್‍ಗೆ ಧಮ್ ಇಲ್ಲ ಎಂಬ ಹೇಳಿಕೆಯನ್ನು ನೀಡಿ ಹಿಂದೆ ಸರಿದಿದ್ದಾರೆ ಆದರೆ ಒಂದು ಆಡಳಿತದ ಸಭೆಯನ್ನು ಅವಹೇಳನ ಮಾಡುವ ಇವರು ಈಡಿ ಜಿಲ್ಲೆಯ ಯಾವುದಾದರೂ ತಾಲೂಕಿನ ಒಂದು ಗ್ರಾಮಪಂಚಾಯತ್‍ಗಾದರೂ ಭೇಟಿ ನೀಡಿದ್ದಾರೆಯೇ? ಸ್ಥಳೀಯ ಸಂಸ್ಥೆಯ ಸದಸ್ಯರ ಜೊತೆಗೆ ಚರ್ಚಿಸಿದ್ದಾರಯೇ ಇಲ್ಲ ಈಗ ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

About the author

Adyot

Leave a Comment