ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ಬೇಡ್ಕಣಿಯ ಸರಕಾರಿ ಪ್ರಥಮದರ್ಜೆಕಾಲೇಜ್ ನಲ್ಲಿ
ಆಂತರಿಕ ಗುಣಮಟ್ಟದಭರವಸೆಕೋಶ,ಸಾಂಸ್ಕೃತಿಕವೇದಿಕೆ ಇವುಗಳ ಸಹಯೋಗದಲ್ಲಿ ಜನಪದ ಉತ್ಸವದ ಅಂಗವಾಗಿ ಜನಪದ ವೈಭವ-೨೦೨೫-೨೬ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜನಪದ ಎನ್ನುವುದು ನಮ್ಮ ದೇಶದ ಸಂಸ್ಖೃತಿ ಹಾಗೂ ಪರಂಪರೆಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತದಲ್ಲಿ ಬೇರೆ ಬೇರೆ ಧರ್ಮಗಳಿವೆ ಇವೆಲ್ಲವೂ ನಮ್ಮ ಸಂಸ್ಕೃತಿಯ ಭಾಗವಾಗಿದೆ ಹಿಂದೂ ಧರ್ಮವಂತೂ ಸಾಂಸ್ಕೃತಿಕ ಹಾಗೂ ಜಾನಪದ ಶ್ರೀಮಂತತೆಯನ್ನು ಹೊಂದಿರುವಂತಹದ್ದಾಗಿದೆ. ಇಂತಹ ಜಾನಪದವನ್ನು ಉಳಿಸವ ಕೆಲಸವನ್ನು ಸರಕಾರ ಮಾಡುತ್ತಿದೆ ರಾಜ್ಯದ ಎಲ್ಲಾ ಕಾಲೇಜ್‌ಗಳಲ್ಲಿ ಜಾನಪದ ಸೊಗಡನ್ನು ಸಾರುವ ಜಾನಪದ ವೈಭವ ಕಾರ್ಯಕ್ರಮವನ್ನು ನಡೆಸಲು ಸೂಚಿಸಲಾಗಿದೆ ನಮ್ಮ ಕಾಲೇಜ್‌ನಲ್ಲಿ ಈ ಕಾರ್ಯಕ್ರವನ್ನು ಅತ್ಯದ್ಭುತವಾಗಿ ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು.


ಶಿಕ್ಷಣ ಯಾರೊಬ್ಬರ ಸ್ವತ್ತಲ್ಲ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು ತನ್ಮೂಲಕ ನಮ್ಮ ಗುರಿಯನ್ನು,ಸಾಧನೆಯನ್ನು ಸಾಧಿಸಿಕೊಳ್ಳಬೇಕು. ನಮ್ಮ ಶಿಕ್ಷಣ ಪಾಠಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ವಿಷಯಗಳ ಜ್ಞಾನರ್ಜನೆಯನ್ನು ಮಾಡುವ ಮೂಲಕ ಶಿಕ್ಷಣದ ಅನುಭವವನ್ನು ಪಡೆಯಬೇಕು. ಸ್ವಾತಂತ್ರ್ಯನಂತರದಲ್ಲಿ ನಮ್ಮ ದೇಶವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ ಇದಕ್ಕೆ ಕಾರಣ ನಮ್ಮ ಯುವಕರು ಶಿಕ್ಷಣ ಪಡೆದು ಮಾಡಿರುವ ಸಾಧನೆ ಇಂತಹ ಸಾಧನೆ ಮುಂದುವರಿಯಬೇಕಾದರೆ ಇಂದಿನ ಯುವಜನತೆ ಶಿಕ್ಷಣವನ್ನು ಪಡೆಯಬೇಕು. ಜೊತೆಗೆ ನಮ್ಮ ಸಂಸ್ಕೃತಿ,ಪರಂಪರೆಯನ್ನು ಅಭ್ಯಸಸಿ ಅವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಸತೀಶ ನಾರಾಯಣ ನಾಯ್ಕ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆನವಟ್ಟಿ ಕಾಲೇಜ್ ಪ್ರಾಚಾರ್ಯ ಭೀಮಪ್ಪ ಆರ್.ಸಿ. ಭಾಗವಹಿಸಿದ್ದರು.ಐಕ್ಯುಎಸಿ ಸಂಚಾಲಕಿ ಡಾ.ರಶ್ಮಿ ಕರ್ಕಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ,ಎಸ್ ಡಿ.ಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ ಹಸೆಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸವಂತೆ,ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಜಾನಪದ ವೈಭವದ ಮೆರವಣಿಗೆಯನ್ನು ಬೇಡ್ಕಣಿಯ ಐತಿಹಾಸಿಕ ಕೋಟೆ ಆಂಜನೇಯ ದೇವಾಲಯದಿಂದ ಭೀಮಣ್ಣ ನಾಯ್ಕ ಟ್ರ್ಯಾಕ್ಟರ್ ಓಡಿಸುವ ಮೂಲಕ ಚಾಲನೆ ನೀಡಿದರು. ಯಕ್ಷಗಾನದ ವೇಷ,ಚಂಡೆವಾದನ,ಡೊಳ್ಳು ವಾದನ,ಎತ್ತುಗಳ ಮೆರವಣಿಗೆ ಕೆರೆಬೇಟೆ ಸ್ಥಬ್ದಚಿತ್ರ ಮುಂತಾದವು ಮೆರವಣಿಗೆಯಲ್ಲಿ ಭಾಗವಹಿಸಿದ್ದವು ಸುಮಾರು ಮೂರು ಕಿ.ಮಿ.ನಡೆದ ಮೆರವಣಿಗೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಭಾಗವಹಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಪ್ರೊ.ನಾರಾಯಣ ಗೌಡ ಸ್ವಾಗತಿಸಿದರು ಹರ್ಷಿತಾ ಮತ್ತು ಸಂಗಡಿಗರು ಜಾನಪದ ಗೀತೆ ಹಾಡಿದರು.ರೇಖಾ ಮತ್ತು ಮಹಾಲಕ್ಷ್ಮಿ ನಿರೂಪಣೆ ಮಾಡಿದರು.
