ಶಿರಸಿಯಲ್ಲಿ “ಯುವ ಪ್ರತಿಭಾ ದೀಪ್ತಿ ಪ್ರಶಸ್ತಿ” ಪ್ರದಾನ

ಆದ್ಯೊತ್ ಸುದ್ದಿನಿಧಿ:

ಧಾರವಾಡ (ಮಹಾರಾಷ್ಟ್ರ-ಕರ್ನಾಟಕ-ತೆಲಂಗಾಣ)ದ ವಿದ್ಯಾಧರ ಕನ್ನಡ ಪ್ರತಿಷ್ಠಾನ ಹಾಗೂ ಪ್ರಜ್ವಲ ಟ್ರಸ್ಟ್ ಶಿರಸಿ ಇವರ ಸಯುಂಕ್ತ ಆಶ್ರಯದಲ್ಲಿ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಇವರ ಸಂಸ್ಮರಣೆಯ ಅಂಗವಾಗಿ ಕೊಡುಮಾಡುವ ಕನ್ನಡ ಚೂಡಾಮಣಿ (ರಂಗ ಕಲಾ ಕ್ಷೇತ್ರ)- 2025 ಪ್ರಶಸ್ತಿಗೆ, ಕನ್ನಡ ನುಡಿ ತೇರು-೨೦೨೬ ನೇ ಸಾಲಿನಲ್ಲಿ ನೀಡುವ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಾಕೇಶ ಆರ್ ಭಟ್ಟ ‘ಯುವ ಪ್ರತಿಭಾ ದೀಪ್ತಿ‘ ಪ್ರಶಸ್ತಿಗೆ ಆಯ್ಕೆಯಾಗಿದ್ದು,
ಇತ್ತೀಚೆಗೆ ಶಿರಸಿಯ ರಂಗಧಾಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದರೊಂದಿಗೆ ರಾಕೇಶ ಆರ್ ಭಟ್ಟ ನಿರ್ದೇಶಿಸಿದ ‘ಪ್ರಸ್ತುತ’ (ಇದು ವಾಸ್ತವದ ಪ್ರತಿಬಿಂಬ) ಎಂಬ ಕಿರು ನಾಟಕ ಎಂ.ಇ. ಎಸ್. ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿಧ್ಯಾರ್ಥಿಗಳಿಂದ ಪ್ರದರ್ಶನ ಗೊಂಡಿತು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ ಲ,ಪ್ರಜ್ವಲ ಟ್ರಸ್ಟ್ ನ ಅಧ್ಯಕ್ಷೆ ಬಿಂದು ಹೆಗಡೆ,ಬೆಳಗಾವಿ ವಾಣಿಜ್ಯ ತೆರಿಗೆ ಅಧಿಕಾರಿ ಸುರೇಶ ಕೋರಕೊಪ್ಪ,ಬೆಳಗಾವಿ ಹೊಂಬೆಳಕು ಸಂಘದ ಅಧ್ಯಕ್ಷ
ಸ.ರಾ.ಸುಳುಕೂಡೆ ಉಪಸ್ಥಿತರಿದ್ದರು.


ಪ್ರಶಸ್ತಿ ಸ್ವೀಕರಿಸಿದ ರಾಕೇಶ ಆರ್ ಭಟ್ಟ ಈ ಪ್ರಶಸ್ತಿ ಯಿಂದ ತನ್ನ ಜವಾಬ್ದಾರಿಯು ಇನ್ನು ಸಹ ಹೆಚ್ಚಾಗಿದೆ ತನ್ನನ್ನು ಗುರುತಿಸಿದ ವಿದ್ಯಾಧರ ಪ್ರತಿಷ್ಠಾನ ಹಾಗೂ ಪ್ರಜ್ವಲ ಟ್ರಸ್ಟ್ ಅವರಿಗೆ ಧನ್ಯವಾದಗಳು ತಿಳಿಸಿದರು. ತಮ್ಮ ರಂಗಭೂಮಿ ಕಲೆಯ ಗುರುಗಳಾದ ಗಣಪತಿ ಹೆಗಡೆ ಒಡ್ಡೋಲಗ ಅವರನ್ನು ನೆನಪಿಸಿಕೊಂಡರು. ಹಾಗೆ ಅವರ ತಂದೆ ತಾಯಿಗಳು ನೀಡಿದ ಪ್ರೋತ್ಸಾಹದಿಂದ ಈ ಸನ್ಮಾನ ದೊರೆಯಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಅವರ ಕುಟುಂಬದವರು ಹಾಗೂ ಸ್ನೇಹಿತರನ್ನು ತಂಡದವರನ್ನೂ ಸ್ಮರಿಸಿದರು.

About the author

Adyot

Leave a Comment