ತಿರುವು ಪಡೆಯುತ್ತಿರುವ ಭಟ್ಕಳ ಮಹಾದ್ವಾರ ನಿರ್ಮಾಣ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡದ ಭಟ್ಕಳದಲ್ಲಿ ವೆಂಕಟರಮಣ ದೇವಸ್ಥಾನದ ದ್ವಾರ ನಿರ್ಮಾಣದ ಬಗ್ಗೆ ಮುಸ್ಲಿಂ ಸಮುದಾಯದ ಜನರು ವಿರೋಧ ವ್ಯಕ್ತಪಡಿಸಿರುವುದನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ನಾಯ್ಕರವರು ಖಂಡಿಸಿದ್ದಾರೆ.
ಅವರು ಶನಿವಾರ ಭಟ್ಕಳಕ್ಕೆ ಆಗಮಿಸಿ ಹಿಂದೂ ಮುಖಂಡರೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ ನಾಯ್ಕ,
ಅಸರಕೇರಿ ನಿಶ್ಚಲಮಕ್ಕಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನವು ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವಾಗಿದೆ.ಈ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣಕ್ಕೆ ನಾನು ಮುಂದಾಗಿದ್ದು, ಈಗಾಗಲೇ ಕೆಲಸ ಪ್ರಾರಂಭವಾಗಿದೆ. ದುರುದ್ದೇಶದಿಂದ ಕೆಲಸ ನಿಲ್ಲಿಸುವ ಪ್ರಯತ್ನಕ್ಕೆ ಅನ್ಯಕೋಮಿನವರು ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾಡಳಿತವು ಎಂಟು ದಿನದೊಳಗೆ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿರುವಂತಹ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಆಶ್ವಾಸನೆಯನ್ನು ನೀಡಿದೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಜಿಲ್ಲಾಡಳಿತಕ್ಕೂ ಕೂಡ ಅವಕಾಶ ನೀಡುವ ಸಲುವಾಗಿ ನಾವು ಎಂಟು ದಿನದ ವರೆಗೆ ಕಾಮಗಾರಿಯನ್ನು ಮಾಡದೆ ಇರಲು ನಿರ್ಧರಿಸಿದ್ದೇವೆ. ಎಂಟು ದಿನದ ನಂತರ ನಾವು ದೇವಸ್ಥಾನದ ಮಹಾದ್ವಾರವನ್ನು ಕಟ್ಟೆ ಕಟ್ಟುತ್ತೇವೆ.ಒಂದೊಮ್ಮೆ ಎಂಟು ದಿನದ ಒಳಗೆ ಭಟ್ಕಳದಲ್ಲಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನ ಜಿಲ್ಲಾಡಳಿತ ತೆಗೆಯದೆ ಹೋದಲ್ಲಿ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಹೇಳಿದರು.
#######
ಇದಕ್ಕೆ ಪ್ರತಿಯಾಗಿ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಂಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ವಿಧಾನಸಭೆ ಚುನಾವಣೆಗೆ ಕೆಲವೆ ತಿಂಗಳು ಬಾಕಿ ಇರುವದರಿಂದ ಇಂತಹ ವಿವಾದಗಳನ್ನು ಈಗಿನಿಂದಲೆ ಸೃಷ್ಟಿಸಿ ಜನರ ಬಾವನೆಗಳನ್ನು ಕೆರಳಿಸುವ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ.ಪಟ್ಟಣದಲ್ಲಿ ಕೆಲವು ದಿನಗಳಿಂದ ದ್ವಾರಗಳ ಕುರಿತು ವಾದವಿವಾದ ನಡೆಯುತ್ತಿದೆ. ಇದರಲ್ಲಿ ಪುರಸಭೆಯ ಯಾವುದೆ ಸದಸ್ಯರ ಹಸ್ತಕ್ಷೇಪವಿಲ್ಲ ಆಸರಕೇರಿಯ ದೇವಸ್ಥಾನದ ಮಹಾದ್ವಾರವನ್ನು ಪರವಾನಿಗೆ ಪಡೆಯದೆ ಕಾಮಗಾರಿ ಆರಂಭಿಸಿದ್ದರಿಂದ ಅಧಿಕಾರಿಗಳು ಅದನ್ನು ತಡೆದಿದ್ದಾರೆ.ಮಾರ್ಚ 23 ಕ್ಕೆ ಮನವಿ ನೀಡಿದ್ದರು. ಆದರೆ ಅದು ನಮ್ಮ ಗಮನಕ್ಕೆ ಬಂದಿಲ್ಲ. ಪರವಾನಿಗೆಗಾಗಿ ಈಗಷ್ಟೆ ದ್ವಾರದ ಕಡತ ನನ್ನ ಬಳಿ ಬಂದಿದ್ದು ಅದನ್ನು ಪರೀಶೀಲಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವದು.ವಿ.ಟಿ ರೋಡ್‌ನಲ್ಲಿ ಮುಸ್ಲಿಂ ಸಮುದಾಯದ ಕೆಲವರು ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲು ಯತ್ನಿಸಿದ ಅವರ ಮೇಲೂ ಪುರಸಭೆ ಮುಖ್ಯಾಧಿಕಾರಿ ದೂರು ದಾಖಲಿಸಿ ಅವರಿಗೆ ನೋಟಿಸ್ ನೀಡಿದ್ದಾರೆ.ಅವರ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪುರಸಭೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.ಶಾಸಕರು ಪದೆ ಪದೆ ಪುರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪುರಸಭೆಗೆ ಬಂದ ಅನುದಾನವನ್ನು ಅವರೆ ಹಂಚಿಕೆ ಮಾಡುತ್ತಿದ್ದು ಉಳಿದ ವಾರ್ಡುಗಳಿಗೆ ಅನುದಾನವೆ ಇಲ್ಲದಂತಾಗಿದೆ ಮೀನು ಮಾರುಕಟ್ಟೆಯನ್ನು ಇವರೆ ಉದ್ಘಾಟಿಸಿ, ಈಗ ಸ್ಥಳಾಂತರಕ್ಕೂ ವಿರೋಧ ವ್ಯಕ್ತಪಡಿಸಿಸುತ್ತಿದ್ದಾರೆ. ಪುರಸಭೆ ಅಂಗಡಿ ಮಳಿಗೆ ಹರಾಜು ಹೀಗೆ ವಿವಿಧ ಅಭಿವೃದ್ಧಿ ಕಾರ್ಯಕ್ಕೂ ಅಡ್ಡಗಾಲು ಹಾಕುತ್ತಿದ್ದರೆ ನಮಗೆ ಇಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಆರೋಪಿಸಿದರು.
ಈ ಆರೋಪ ಪ್ರತ್ಯಾರೋಪದಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದರೆ ಜಿಲ್ಲಾಡಳಿತ ಈ ಸಮಸ್ಯೆ ಹೇಗೆ ಬಗೆಹರಿಸುವುದು ಎನ್ನುವ ಚಿಂತೆಯಲ್ಲಿದೆ

About the author

Adyot

Leave a Comment