ಆದ್ಯೊತ್ ಸುದ್ದಿನಿಧಿ:
ಅಯೋಧ್ಯಾ ಶ್ರೀ ರಾಮಮಂದಿರ ನಿರ್ಮಾಣ ಉಸ್ತುವಾರಿ ಶ್ರೀ ಗೋಪಾಲಜೀ ಅವರಿಗೆ ಡಾ. ಹೆಡ್ಗೇವಾರ್ ಸ್ಮಾರಕ ಸಮಿತಿ, ನಾಗಪುರ ವತಿಯಿಂದ ನಡೆದ ಭವ್ಯ ಸಮ್ಮಾನ ಸಮಾರಂಭದಲ್ಲಿ
ಸನ್ಮಾನಿಸಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತೀಯ ಸಹ ಕಾರ್ಯದರ್ಶಿಯೂ ಆಗಿರುವ ಗೋಪಾಲಜೀ ನಾಗರಕಟ್ಟೆಯವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸನ್ಮಾನ ಪತ್ರ ಪ್ರದಾನಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಶ್ರೀ ಗೋವಿಂದ ದೇವ್ ಗಿರಿಜೀ ಮಹಾರಾಜ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರೇಶ ಜೋಶಿ ಜೀ ಕೂಡ ಉಪಸ್ಥಿತರಿದ್ದರು.


ಗೋಪಾಲಜಿ ನಾಗರಕಟ್ಟೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದಲ್ಲಿ ಶ್ರೀ ರಾಮಲಲಾರ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಸನ್ಮಾನ ಪ್ರದಾನಿಸಲಾಯಿತು.ಸನ್ಮಾನ ಪತ್ರದಲ್ಲಿ ಅವರ ತ್ಯಾಗ, ಸಮರ್ಪಣೆ ಮತ್ತು ರಾಷ್ಟ್ರಸೇವೆಯ ಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದ್ದು, 500 ವರ್ಷಗಳ ಹೋರಾಟದ ನಂತರ ನಿರ್ಮಾಣಗೊಂಡ ಶ್ರೀರಾಮ ಮಂದಿರವು ಭಾರತದ ಸಾಂಸ್ಕೃತಿಕ ವೈಭವದ ಪ್ರತೀಕವಾಗಿ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ.


“ಭಾರತದ ಇತಿಹಾಸದಲ್ಲಿ ಅತ್ಯಂತ ಪುಣ್ಯಮಯ, ರಾಷ್ಟ್ರೀಯ ಅಸ್ಮಿತೆ ಶ್ರೀ ರಾಮಮಂದಿರ ನಿರ್ಮಾಣದ ಅತೀ ಅಪರೂಪದ ಜವಾಬ್ಧಾರಿಯನ್ನು ನಿರ್ವಹಿಸುತ್ತಿರುವ ಶ್ರೀ ಗೋಪಾಲ ಜೀ ಅವರಿಗೆ ಡಾ. ಹೆಡ್ಗೇವಾರ್ ಸ್ಮಾರಕ ಸಮಿತಿಯಿಂದ ಸಮ್ಮಾನಿಸಿರುವುದು ಅತ್ಯಂತ ಸಂತಸದ ಸಂಗತಿ. ಶ್ರೀಯುತ ಗೋಪಾಲ ಜೀ ಅವರ ಸಮರ್ಪಣಾ ಭಾವ, ಸಂಘಟನಾ ಚತುರತೆ ಹಾಗೂ ರಾಷ್ಟ್ರಮಂದಿರ ನಿರ್ಮಾಣದ ಈ ವಿಶಿಷ್ಟ ಕಾರ್ಯ ಸಾಮಾಜಿಕ ಕಾರ್ಯಕರ್ತರಿಗೆಲ್ಲ ಪ್ರೇರಣೆ.” ಎಂದು ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎಂದು ಬಿಜೆಪಿ ಪ್ರಮುಖ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
